VIDEO: ಏರ್​ ಶೋ ವೇಳೆ 2 ವಿಮಾನ ಮುಖಾಮುಖಿ ಡಿಕ್ಕಿ.. ಓರ್ವ ಪೈಲಟ್​ ಸಾವು, ಮತ್ತೋರ್ವನಿಗೆ ಗಾಯ

author-image
AS Harshith
Updated On
VIDEO: ಏರ್​ ಶೋ ವೇಳೆ 2 ವಿಮಾನ ಮುಖಾಮುಖಿ ಡಿಕ್ಕಿ.. ಓರ್ವ ಪೈಲಟ್​ ಸಾವು, ಮತ್ತೋರ್ವನಿಗೆ ಗಾಯ
Advertisment
  • ಏಕ ಕಾಲದಲ್ಲಿ ಆಗಸದಲ್ಲಿ ಹಾರಾಡಿದ ಆರು ವಿಮಾನಗಳು
  • ನಿಯಂತ್ರಣ ತಪ್ಪಿ ಅಡ್ಡಾದಿಡ್ಡಿ ಚಲಿಸಿದ ಒಂದು ವಿಮಾನ
  • ಏರ್​ ಶೋ ವೇಳೆ ನಡೆದ ದುರ್ಘಟನೆಯಲ್ಲಿ ಪೈಲಟ್​ ಸಾವು

ಏರ್​ ಶೋ ವೇಳೆ ಎರಡು ವಿಮಾನಗಳು ಡಿಕ್ಕಿ ಹೊಡೆದ ಘಟನೆ ದೃಶ್ಯ ಸಮೇತ ವೈರಲ್​ ಆಗಿದೆ. ಈ ದುರ್ಘಟನೆಯಲ್ಲಿ ವಿಮಾನ ನೆಲಕ್ಕಪ್ಪಳಿಸಿವೆ. ಪರಿಣಾಮ ಓರ್ವ ಪೈಲಟ್​​ ಸಾವನ್ನಪ್ಪಿದ್ದು, ಮತ್ತೊಬ್ಬ ಗಾಯಗೊಂಡಿದ್ದಾರೆ.

ದಕ್ಷಿಣ ಪೋರ್ಚುಗಲ್​ನಲ್ಲಿ ಈ ಘಟನೆ ನಡೆದಿದೆ. ಬೆಜಾ ಏರ್​ ಶೋ ವೇಳೆ ಆರು ವಿಮಾನಗಳು ಹಾರಾಟ ನಡೆಸಿವೆ. ಆದರೆ ಈ ವೇಳೆ ವಿಮಾನವೊಂದು ದಿಕ್ಕು ತಪ್ಪಿದಂತೆ ಅಡ್ಡಾದಿಡ್ಡಿ ಹಾರಿದೆ. ಕೊನೆಗೆ ನೇರವಾಗಿ ಮತ್ತೊಂದು ವಿಮಾನಕ್ಕೆ ಹೋಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಎರಡು ವಿಮಾನಗಳ ನಿಯಂತ್ರಣ ತಪ್ಪಿ ನೆಲಕ್ಕುರುಳಿವೆ.


">June 2, 2024

ವಿಮಾನ ದುರ್ಘಟನೆಯಲ್ಲಿ ಸ್ಪಾನಿಷ್​ ಪ್ರಜೆ ಸಾವನ್ನಪ್ಪಿದ್ದಾರೆ. ಪೈಲಟ್​ ಸಾವಿಗೆ ವಾಯುಪಡೆಯ ಅಧಿಕಾರಿ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ವಾಹನ ಸವಾರರಿಗೆ ಬರೆ.. ಇಂದಿನಿಂದ ಟೋಲ್ ದರ ದುಪ್ಪಟ್ಟು ಹೆಚ್ಚಳ

ಆಕಾಶದಲ್ಲಿ ಹಾರಾಟ ನಡೆಸುತ್ತಿದ್ದ ವಿಮಾನಗಳು ‘‘ಯಾಕ್​ ಸ್ಟಾರ್ಸ್​’’ಎಂಬ ಸ್ಪ್ಯಾನಿಷ್​ ಮತ್ತು ಪೋರ್ಚುಗೀಸ್​ ಪೈಲಟ್​ಗಳಿಂದ ನಿರ್ಮಿಸಲಾದ ಏರೋಬ್ಯಾಟಿಕ್​ ಗುಂಪಿಗೆ ಸೇರಿದ ವಿಮಾನಗಳಾಗಿವೆ. ಡಿಕ್ಕಿ ಹೊಡೆದ ವಿಮಾನ ಯಾಕೋಚ್ಲೇವ್​ ಯಾಕ್​-52 ಎಂದು ಗುರುತಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment