/newsfirstlive-kannada/media/post_attachments/wp-content/uploads/2025/02/KATHLEENA-HENNINGS.jpg)
ಮನುಷ್ಯ ಯಾವಾಗಲೂ ತಾನು ಹೆಚ್ಚು ಕಾಲ ಆರೋಗ್ಯದಿಂದ ಸದೃಢವಾಗಿ, ಯಾರಿಗೂ ಭಾರವಾಗದಂತೆ ಬದುದುಕಬೇಕು. ಸ್ವಾವಲಂಭನೆ, ಸ್ವಾಭಿಮಾನದ ಬದುಕಿಗೆ ಹೆಚ್ಚು ಮಹತ್ವ ಕೊಡುತ್ತಾನೆ. ಆದ್ರೆ ಇಂದಿನ ಕಾಲದ ಆಹಾರ ಕ್ರಮ ಮತ್ತು ಜೀವನ ಕ್ರಮ ಹಾಗೂ ಒತ್ತಡದ ಬದುಕು ಮನುಷ್ಯನ ಆಯುಷ್ಯವನ್ನು ಕಡಿಮೆ ಮಾಡುತ್ತಿವೆ. ಇದರ ನಡೆವೆಯೂ ನಾವು ದೀರ್ಘಾಯುಷಿಗಳಾಗಿ ಆರಾಮವಾಗಿ ಬದುಕಬಹುದು ಎಂದು ಜಗತ್ತಿನ ಅನೇಕರು ಬದುಕಿ ತೋರಿಸಿದ್ದಾರೆ. ಅವರು ಬದುಕಿದ ರೀತಿಯನ್ನು ಕೂಡ ಜಗತ್ತಿಗೆ ಹೇಳಿದ್ದಾರೆ. ಈ 105 ವರ್ಷದ ಕೆತ್ಲೀನ್​ ಹೆನ್ನಿಂಗ್ಸ್​ ಎಂಬ ಮಹಿಳೆ ದೀರ್ಘಾಯುಷ್ಯಕ್ಕೆ ಎರಡೇ ಎರಡು ಸಾಮಾನ್ಯ ಸೂತ್ರಗಳಿವೆ ಆ ರಹಸ್ಯಗಳನ್ನು ತಿಳಿದ ಯಾರೇ ಆಗಲಿ ನೂರಾರು ವರ್ಷ ಬದುಕಬಹುದು ಎಂದು ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2025/02/KATHLEENA-HENNISS.jpg)
1. ನಿತ್ಯ ಒಂದು ಗಿನ್ನಿಸ್ ಕುಡಿಯಿರಿ ವೈದ್ಯರಿಂದ ದೂರ ಇಳಿಯಿರಿ
ಹೆನ್ನಿಂಗ್ಸ್​ ಹೇಳುವುದು ಇಷ್ಟೇ ಗ್ರೀನ್ ಜ್ಯೂಸ್​, ಫ್ಯಾನ್ಸಿ ಸಪ್ಲಿಮೆಂಟ್​ಗಳನ್ನೆಲ್ಲಾ ಮರೆತುಬಿಡಿ. ದಿನಕ್ಕೆ ಒಂದು ಗಿನ್ನಿಸ್ ಕುಡಿಯಿರಿ ಅದರಿಂದ ನೀವು ದೀರ್ಘಾಯುಷಿಗಳಾಗಲು ಸಾಧ್ಯ. ಗಿನ್ನಿಸ್ ಅಂದ್ರೆ ತುಂಬಾ ಕಡಿಮೆ ಆಲ್ಕೋಹಾಲ್ ಅಂಶ ಹೊಂದಿರುವ ಒಂದು ಡ್ರಿಂಕ್ ಇದನ್ನು ಅವರು ತಮ್ಮ 18ನೇ ವಯಸ್ಸಿನಿಂದಲೂ ಕುಡಿಯುತ್ತಾ ಬಂದಿದ್ದಾರೆ. ಅದು ಕೂಡ ಅವರ ತಂದೆ ತಾಯಿಯರೇ ಅವರಿಗೆ ಸಲಹೆ ಮಾಡಿದ್ದಾರೆ. ಅಂದಿನಿಂದ ಇಂದಿನವರೆಗೂ ನಿತ್ಯ ಒಂದು ಗಿನ್ನಿಸ್ ಡ್ರಿಂಕ್​ ತೆಗೆದುಕೊಳ್ಳುತ್ತಾರೆ ಹೆನ್ನಿಂಗ್ಸ್​​. ನಾನು ನೂರಾರು ವರ್ಷ ಇಷ್ಟು ಗಟ್ಟಿಮುಟ್ಟಾಗಿರಲು ಕಾರಣವೇ ಈ ಗಿನ್ನಿಸ್ ಎಂದು ಹೇಳುತ್ತಾರೆ ಈ ವೃದ್ಧೆ.
ಇದನ್ನೂ ಓದಿ:ರಕ್ತದೊತ್ತಡ ನಿಯಂತ್ರಣ, ಹೃದಯದ ಸ್ವಾಸ್ಥ್ಯ ಹೆಚ್ಚಳ; ಹಲಸಿನ ಹಣ್ಣು ತಿಂದ್ರೆ ಆರೋಗ್ಯಕ್ಕೆ 10 ಪ್ರಯೋಜನ
ಕೆತ್ಲೀನ್​ ಹೇಳುವ ಪ್ರಕಾರ ನಮ್ಮ ಮನೆಯಲ್ಲಿ ನಾವು ಎಲ್ಲರೂ ಗಿನ್ನಿಸ್ ಡ್ರಿಂಕ್ ಕುಡಿಯುತ್ತೇವೆ. ಇದರಲ್ಲಿ ಕಬ್ಬಿಣದ ಅಂಶ ಹೆಚ್ಚು ಇರುತ್ತದೆ. ಇದು ನನ್ನ ಜೀವನದ ಪ್ರಯಾಣದಲ್ಲಿ ದೊಡ್ಡ ಪಾತ್ರವಹಿಸಿದೆ ಎಂದು ಹೇಳಿದ್ದಾರೆ.
2. ಒಂಟಿಯಾಗಿರಿ.. ಒತ್ತಡಮುಕ್ತರಾಗಿರಿ
ಪರಿಶುದ್ಧವಾದಿ ಪ್ರೀತಿಯೇ ದೀರ್ಘಾಯುಷ್ಯದ ಕೀಲಿಕೈ ಎಂದು ಹೇಳುತ್ತಾರೆ ಕೆತ್ಲೀನ್.. ಆದ್ರೆ ಕೆತ್ಲೀನ್ ದೃಷ್ಟಿಕೋನದ ಪ್ರಕಾರದ ಪ್ರೀತಿಯೇ ಬೇರೆ. ಅವರು ಹೇಳುವುದು ಒಂದೇ, ಮದುವೆಯಾಗಬೇಡಿ. ಸ್ವತಂತ್ರವಾಗಿ ಬದಕಲು ಹಾಗೂ ಒತ್ತಡಮುಕ್ತರಾಗಿ ಬದುಕಲು ನಾವು ಸಿಂಗಲ್ ಆಗಿ ಇರಬೇಕು.ನಾನು ಕೂಡ ಒಬ್ಬ ಪರ್ಫೆಕ್ಟ್​ ಜೀವನ ಸಂಗಾತಿಗಾಗಿ ಬಹಳಷ್ಟು ವರ್ಷ ಹುಡುಕಾಡಿ ಕೊನೆಗೆ ಒಂಟಿಯಾಗಿ ಬದುಕಿದ್ದೇನೆ. ಒಂದು ಯಶಸ್ವಿ ಜೀವನ ನಿಮ್ಮದಾದ ಬಳಿಕ ಮಜವಾಗಿ ಏಕಾಂಗಿಯಾಗಿ ಪರಿಶುದ್ಧ ಏಕಾಂತತೆಯೊಂದಿಗೆ ಬದುಕಿ ಎಂದು ಹೇಳುತ್ತಾರೆ.
ನಾನು ಪ್ರತಿ ಸಂಜೆ ನನ್ನ ಗಾರ್ಡನ್​ನಲ್ಲಿ ಡ್ಯಾನ್ಸ್ ಮಾಡುತ್ತಾ ಕಳೆಯುತ್ತೇನೆ. ಈ ಸಂಬಂಧಗಳೆಂಬ ನಾಟಕಗಳನ್ನು ಅದಷ್ಟು ದೂರವಿದ್ದು ಒಂಟಿಯಾಗಿ ಬದುಕನ್ನು ಉತ್ಕಟವಾಗಿ ಪ್ರೀತಿಸುತ್ತಾ ಬದುಕುವುದೇ ದೀರ್ಘಾಯುಷ್ಯದ ಮತ್ತೊಂದು ರಹಸ್ಯ ಎಂದು ಹೇಳಿದ್ದಾರೆ. ಹೊಸದಾದ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು, ಪರಯಾಣ ಮಾಡುವುದು. ಉತ್ತಮ ಸ್ನೇಹಿತರೊಂದಿಗೆ ನಗುವಿನ ಕ್ಷಣಗಳನ್ನು ಕಳೆಯುವುದು ಈ ಎಲ್ಲಾ ಹವ್ಯಾಸಗಳಿಂದಲೇ ನಾನು 105 ವರ್ಷದವರೆಗೆ ಯಾವುದೇ ಒತ್ತಡವಿಲ್ಲದೇ ಕಿರಿಕಿರಿ ಇಲ್ಲದೇ, ಪಶ್ಚಾತಾಪ ಭಾವ, ಒಂಟಿತನದ ನೋವು ಇಲ್ಲದೇ ಬದುಕಿದ್ದೇನೆ ಎಂದು ಕೆತ್ಲೀನ್ ಹೇಳುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us