12 ಸಾವಿರ ಕೋಟಿ ವೆಚ್ಚದ ಹೆದ್ದಾರಿಗೆ ಅಡ್ಡಿಯಾದ ಒಂಟಿ ಮನೆ; 25 ವರ್ಷದಿಂದ ಖಾಲಿ ಮಾಡಿಸಲು ಆಗಿಲ್ಲ!

author-image
admin
Updated On
12 ಸಾವಿರ ಕೋಟಿ ವೆಚ್ಚದ ಹೆದ್ದಾರಿಗೆ ಅಡ್ಡಿಯಾದ ಒಂಟಿ ಮನೆ; 25 ವರ್ಷದಿಂದ ಖಾಲಿ ಮಾಡಿಸಲು ಆಗಿಲ್ಲ!
Advertisment
  • ಎರಡು ಅಂತಸ್ತಿನ ಮನೆ ಖಾಲಿ ಬಿದ್ದಿದ್ದು ಯಾರು ವಾಸಿಸುತ್ತಿಲ್ಲ
  • 25 ವರ್ಷಗಳಿಂದಲೂ ಕೋರ್ಟ್​ನಲ್ಲಿ ವಾದ ಪ್ರತಿವಾದಗಳು
  • ಹೈಸ್ಪೀಡ್ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಕಾರ್ಯ ಕಂಪ್ಲೀಟ್ ಮುಗಿದಿದೆ

ಈ ಎಕ್ಸ್​​ಪ್ರೆಸ್ ಹೈ​​ವೇ ನೋಡ್ತಿದ್ರೆ ಸಾವಿರಾರು ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿದೆ ಅಂತ ಒಂದೇ ಮಾತಲ್ಲಿ ಹೇಳಬಹುದು. ಬರೋಬ್ಬರಿ 12 ಸಾವಿರ ಕೋಟಿ ವೆಚ್ಚದಲ್ಲಿ ಅಕ್ಷರಧಾಮದಿಂದ ಉತ್ತರಾಖಂಡದವರೆಗೆ ವಿಸ್ತರಿಸಿರುವ ದೆಹಲಿ ಟು ಡೆಹ್ರಾಡೂನ್ ಹೈ ಸ್ಪೀಡ್ ಎಕ್ಸ್‌ಪ್ರೆಸ್‌ವೇಯ ನಿರ್ಮಾಣ ಕಾರ್ಯ ಕಂಪ್ಲೀಟ್ ಮುಗಿದು ಹೋಗಿದೆ.

212 ಕಿಲೋ ಮೀಟರ್​ ಹೋಗೋದಕ್ಕೆ ಅಥವಾ ಬರೋದಕ್ಕೆ ಕೇವಲ 3 ಗಂಟೆಗಳು ಸಾಕು ಅನ್ನೋದು ಈ ಯೋಜನೆಗೆ ಇನ್ನೊಂದು ಬಹುಮುಖ್ಯ ಕಾರಣ. ಆದ್ರೆ ಇದರ ಚಾಲನೆ ಕೊಡೋಕೆ ಕಾರ್ಯರೂಪಕ್ಕೆ ಬಂದಿಲ್ಲ. ಅದಕ್ಕೆ ಒಂದೇ ಒಂದು ಕಾರಣ ಅಂದ್ರೆ ಕೇವಲ 90 ಮೀಟರ್‌ನಷ್ಟಿರೋ ಎರಡು ಅಂತಸ್ತಿನ ಈ ಒಂಟಿ ಮನೆ.

ಗಾಜಿಯಾಬಾದ್‌ನ ಮಂಡೋಲಾದಲ್ಲಿರೋ ಒಂದು ಒಂಟಿ ಮನೆ ಇರೋದ್ರಿಂದ ಎಕ್ಸ್​ಪ್ರೆಸ್​​ವೇ ಇನ್ನೋಗ್ರೇಷನ್ ಮಾಡೋಕೆ ಆಗ್ತಿಲ್ಲ. ವೀರ್ಸೆನ್ ಸರೋಹಾ ಅನ್ನೋರ ಕುಟುಂಬದ 1,600 ಚದರ ಮೀಟರ್ ವಿಸ್ತೀರ್ಣ ಹೊಂದಿರೋ ಈ ಒಂಟಿ ಮನೆ 1990ರಿಂದಲೂ ಅಲ್ಲೇ ಇದೆ.

publive-image

ಏನಿದರ ಅಸಲಿ ವಿವಾದ?
ಈ ಜಾಗದ ವಿವಾದ ಇಂದು, ನಿನ್ನೆಯದಲ್ಲ. 1998ರಲ್ಲಿ ಉತ್ತರ ಪ್ರದೇಶ ಸರ್ಕಾರ, ವಸತಿ ಇಲಾಖೆಯ ಮಂಡೋಲಾ ವಸತಿ ಯೋಜನೆಯಡಿಯಲ್ಲಿ ದೆಹಲಿ ಟು ಗಾಜಿಯಾಬಾದ್ ಗಡಿಯಲ್ಲಿದ್ದ 6 ಹಳ್ಳಿಗಳಿಂದ 2,614 ಎಕರೆ ಭೂಮಿಯನ್ನ ಸ್ವಾಧೀನಪಡಿಸಿಕೊಳ್ಳೋದಕ್ಕೆ ಅಧಿಸೂಚನೆ ಹೊರಡಿಸಿದ್ರು. ಆಗ ಈ ಮನೆ ಕಿರಿಕ್ ಶುರುವಾಗಿತ್ತು.

ಸ್ವಾಧೀನಕ್ಕೊಳಗಾದ ಭೂಮಿಯ ಮಾಲೀಕರಿಗೂ ಒಂದು ಚದರ ಅಡಿ​​ಗೆ ಸಾವಿರದ ನೂರು ರೂಪಾಯಿ ಫಿಕ್ಸ್ ಮಾಡಿತ್ತು. ಅದೇ ರೀತಿ, ಯುಪಿ ಸರ್ಕಾರ, ವಸತಿ ಮಂಡಳಿ ಜೊತೆಗೆ ಸಹಕರಿಸಿ ಅಂತ ಕುಟುಂಬಕ್ಕೆ ಮನವೊಲಿಸೋ ಕೆಲಸ ಮಾಡಿದ್ರು. ಆದ್ರೂ ಕೂಡ, ಆ ಕುಟುಂಬ ಮಾತ್ರ ಮನೆಯನ್ನು ಬಿಟ್ಟುಕೊಡೋದಕ್ಕೆ ಇಷ್ಟವೇ ಇರಲಿಲ್ಲ. ತಮ್ಮ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳೋದ್ರ ವಿರುದ್ಧ ಅಲಹಾಬಾದ್ ಹೈಕೋರ್ಟ್‌ಗೆ ಮನೆಯ ಯಜಮಾನ ವೀರ್ಸೆನ್ ಸರೋಹಸ್ ಮೊರೆ ಹೋದರು. ಅಲಹಾಬಾದ್ ಹೈಕೋರ್ಟ್ ಕೂಡ, ಜಮೀನಿನ ಸ್ವಾಧೀನಕ್ಕೆ ತಡೆಯಾಜ್ಞೆ ಕೊಟ್ಟು ಬಿಡ್ತು.

ಬರ್ತಾ ಬರ್ತಾ ಪ್ರತಿಭಟನೆ ಹಾಗೂ ಸಾಕಷ್ಟೂ ವಿಳಂಬ ಆಗ್ತಿದ್ದಕ್ಕೆ ವಸತಿ ಯೋಜನೆ ಕೂಡ ಕಾರ್ಯರೂಪಕ್ಕೆ ಬರಲೇ ಇಲ್ಲ. ಹೀಗಾಗಿ, ವಸತಿ ಮಂಡಳಿ, ಸ್ವಾಧೀನಪಡಿಸಿಕೊಂಡ ಭೂಮಿಯನ್ನು NHAI - ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸೋಕೆ ಮುಂದಾಗೋಯ್ತು. ಇದಾದ್ಮೇಲೆ, ಅಧಿಕಾರಿಗಳ ಜೊತೆಗೆ ನಿಲ್ಲೋದಕ್ಕೆ ಸರೋಹಾ ಕುಟುಂಬ ಒಂದು ಚೂರು ಇಷ್ಟಪಟ್ಟಿರಲಿಲ್ಲ. ಇವತ್ತೇನೋ, ಮನೆಯ ಸುತ್ತಾಮುತ್ತಾ ಇರೋ ಪರಿಸರ ಬದಲಾಗಿರಬಹುದು. ಆದರೆ ಸರೋಹಾ ಕುಟುಂಬದ ಈ ಒಂಟಿ ಮನೆ, 1998ರಲ್ಲಿ ಹೇಗಿತ್ತೋ ಈಗಲೂ ಹಾಗೇ ಇದೆ.

ಇದನ್ನೂ ಓದಿ: ಕೋಟಿ ಕೊಟ್ಟರು ಮನೆ ಬಿಟ್ಟಿರಲಾರೆ ಎಂದ ವ್ಯಕ್ತಿ; ಹೆದ್ದಾರಿಯ ಮಧ್ಯದಲ್ಲಿಯೇ ವಾಸ, ನಿವಾಸ 

25 ವರ್ಷಗಳಿಂದಲೂ ಕೋರ್ಟ್​ನಲ್ಲಿ ವಾದ ಪ್ರತಿವಾದಗಳ ನಡುವೆ ಈ ಎರಡು ಅಂತಸ್ತಿನ ಮನೆ ಖಾಲಿ ಬಿದ್ದಿದ್ದು, ಹೊಸದಾಗಿ ಕಟ್ಟಿರೋ ಎಕ್ಸ್‌ಪ್ರೆಸ್‌ವೇ ಮುಂದಿನ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಯಾಕಂದ್ರೆ, ಮನೆ ಯಜಮಾನ, ಸುಪ್ರೀಂಕೋರ್ಟ್‌ನಲ್ಲಿ ಕೇಸ್ ಹಾಕಿದ್ದಾರೆ.

ಮನೆ ಮಾಲೀಕರು ಸುಪ್ರೀಂ ಕೋರ್ಟ್‌ನಲ್ಲಿ ಕೇಸ್ ಹಾಕಿರೋದ್ರಿಂದ ಮುಂದಿನ ಕೆಲಸಗಳೆಲ್ಲಾ ನಿಂತು ಹೋಗಿದೆ ಅಂತ NHAI ಅಧಿಕಾರಿ ಮಾಹಿತಿ ಕೊಟ್ಟಿದ್ದಾರೆ. NHAI ಪ್ರಕಾರ, ಎಕ್ಸ್‌ಪ್ರೆಸ್‌ವೇ ಇದೇ ವರ್ಷ, ಜೂನ್ ಒಳಗೆ ರೆಡಿಯಾಗಬಹುದು. ಆದ್ರೂ ಕೂಡ, ಕೋರ್ಟ್​ನ ಮುಂದಿನ ವಿಚಾರಣೆಗಳಿಂದ ಮತ್ತೆ ಮುಂದೂಡಿಕೆಯಾಗಬಹುದಂತೆ. ಇದ್ರ ಮಧ್ಯೆ, ಸುಪ್ರೀಂ ಕೋರ್ಟ್ ಪ್ರಕರಣವನ್ನು ಲಕ್ನೋ ಪೀಠಕ್ಕೆ ವರ್ಗಾವಣೆ ಮಾಡಿದ್ದು, ಮುಂದಿನ ವಿಚಾರಣೆಯಲ್ಲಿ ಏನಾದ್ರೂ ತೀರ್ಮಾನ ಮಾಡಬಹುದಾ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment