2000 ಸಾವು 1000 ನಾಪತ್ತೆ.. ಕಂಡು ಕೇಳರಿಯದ ಭೂಕುಸಿತ; ಕಾಪಾಡಿ ಅಂತ ನೊಂದವರ ಕಣ್ಣೀರು

author-image
Veena Gangani
Updated On
2000 ಸಾವು 1000 ನಾಪತ್ತೆ.. ಕಂಡು ಕೇಳರಿಯದ ಭೂಕುಸಿತ; ಕಾಪಾಡಿ ಅಂತ ನೊಂದವರ ಕಣ್ಣೀರು
Advertisment
  • ಒಟ್ಟು 3,800 ಜನರಲ್ಲಿ ಭೂಕುಸಿತದ ಹೊಡೆತಕ್ಕೆ ಅಸುನೀಗಿದ 2 ಸಾವಿರ ಮಂದಿ
  • ಭಾರೀ ಭೂಕುಸಿತದಲ್ಲಿ ಬರೋಬ್ಬರಿ 2000 ಹೆಚ್ಚು ಮಂದಿ ಜೀವಂತ ಸಮಾಧಿ
  • ಕೇವಲ 12 ಮಂದಿಯ ದೇಹಗಳು ಮಾತ್ರ ಪತ್ತೆಯಾಗಿವೆ ಯುಎನ್​ನಿಂದ ವರದಿ

ಪಪುವಾ ನ್ಯೂಗಿನಿಯಾ ದೇಶದಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಶುಕ್ರವಾರ ಸಂಭವಿಸಿದ ದುರಂತದಲ್ಲಿ 2,000ಕ್ಕೂ ಹೆಚ್ಚು ಮಂದಿ ಜೀವಂತವಾಗಿ ಸಮಾಧಿಯಾಗಿದ್ದಾರೆ ಎಂದು ರಾಷ್ಟ್ರದ ರಾಷ್ಟ್ರೀಯ ವಿಪತ್ತು ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

publive-image

ಇದನ್ನೂ ಓದಿ:ಊರಿಗೆ ಊರೇ ಮಸಣ.. ಪಪುವಾ ನ್ಯೂಗಿನಿಯಾದಲ್ಲಿ 670ಕ್ಕೂ ಹೆಚ್ಚು ಸಾವು; ಆಗಿದ್ದೇನು? 

ಇನ್ನು, ಭೂಕುಸಿತದಲ್ಲಿ ಕಾಣೆಯಾದವರ ಸಂಖ್ಯೆಯು ಸಾವಿರದವರೆಗೆ ವಿಸ್ತರಿಸಿದೆ ಎಂದು ಸರ್ಕಾರಿ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ. ಆದರೆ ಇದುವರೆಗೆ ಕೇವಲ 12 ಮಂದಿಯ ದೇಹಗಳು ಮಾತ್ರ ಪತ್ತೆಯಾಗಿವೆ. ಆದರೆ ವಿಶ್ವಸಂಸ್ಥೆ (ಯುಎನ್) ಕಾಣೆಯಾದವರ ಸಂಖ್ಯೆಯನ್ನು 670 ಎಂದು ಮಾಹಿತಿ ನೀಡಿದೆ. ಯಾಂಬಲಿ ಗ್ರಾಮ ಹಾಗೂ ಎಂಗಾ ಪ್ರಾಂತ್ಯದಲ್ಲಿ ಸುಮಾರು 3,800 ಜನರು ವಾಸಿಸುತ್ತಿದ್ದರು.
publive-image

ಆದರೆ ಇದೀಗ ಭೂಕುಸಿತ ಉಂಟಾದ ಪರಿಣಾಮ 2,000ಕ್ಕೂ ಹೆಚ್ಚು ಮಂದಿ ಜೀವಂತವಾಗಿ ಸಮಾಧಿಯಾಗಿದ್ದಾರೆ ಎಂದು ವರದಿ ಬಂದಿದೆ. ಅದರಲ್ಲೂ 600ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಪ್ರಧಾನ ಮಂತ್ರಿ ಜೇಮ್ಸ್ ಮರಾಪೆ ಅವರು ರಾಜಧಾನಿ ಪೋರ್ಟ್ ಮೊರೆಸ್ಬಿಯಿಂದ ಸುಮಾರು 600 ಕಿಮೀ ವಾಯುವ್ಯದಲ್ಲಿರುವ ಪ್ರದೇಶಕ್ಕೆ ದೇಶದ ರಕ್ಷಣಾ ಪಡೆ ಮತ್ತು ತುರ್ತು ಏಜೆನ್ಸಿಗಳಿಗೆ ಆದೇಶ ನೀಡಿದ್ದಾರೆ. ಇನ್ನು ಅಲ್ಲಿನ ಓರ್ವ ನಿವಾಸಿ ಎವಿಟ್ ಕಂಬು ಎಂಬಾತನ ಕುಟುಂಬದ ಅನೇಕ ಸದಸ್ಯರು ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ದಯಮಾಡಿ ಅವರನ್ನು ಕಾಪಾಡಿ ಅಂತ ಕಣ್ಣೀರು ಹಾಕುತ್ತಿದ್ದಾರೆ. ಆದರೆ ಭೂಕುಸಿತ ಉಂಟಾದ ಗ್ರಾಮದ ಸ್ಥಳೀಯರು ದೊಡ್ಡ ರಕ್ಷಣಾ ಕಾರ್ಯಾಚರಣೆಗಳೊಂದಿಗೆ ಅಧಿಕಾರಿಗಳು ಸಹ ಭೇಟಿ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment