ದೀಪಾವಳಿ ಹಬ್ಬದಂದು ಗಲಾಟೆ.. ಗಂಡನ ಮೊದಲ ಪತ್ನಿಗೆ 50 ಬಾರಿ ಇರಿದ 2ನೇ ಹೆಂಡತಿ

author-image
AS Harshith
Updated On
ದೀಪಾವಳಿ ಹಬ್ಬದಂದು ಗಲಾಟೆ.. ಗಂಡನ ಮೊದಲ ಪತ್ನಿಗೆ 50 ಬಾರಿ ಇರಿದ 2ನೇ ಹೆಂಡತಿ
Advertisment
  • ಒಂದಲ್ಲ, ಎರಡಲ್ಲ 50 ಬಾರಿ ಚೂರಿ ಇರಿದ ಮಹಿಳೆ
  • ದೀಪಾವಳಿ ಹಬ್ಬದಂದು ವಿಕೋಪಕ್ಕೆ ತಿರುಗಿದ ಇಬ್ಬರ ಗಲಾಟೆ
  • ಮಹಿಳೆ ಭಯಾನಕ ದೃಶ್ಯ ಮೊಬೈಲ್​ನಲ್ಲಿ ಸೆರೆ

ಮಹಿಳೆಯನ್ನು ಕರುಣಾಮಹಿಗೆ ಹೋಲಿಸುತ್ತೇವೆ. ಆದರೆ ಇಲ್ಲೊಬ್ಬಳು ಮಹಿಳೆ ಮತ್ತೊಬ್ಬ ಮಹಿಳೆ ಮೇಲೆ ಕರುಣೆಯೇ ಇಲ್ಲದಂತೆ, ಹೆಮ್ಮಾರಿಯಾಗಿ ಬಹಳ ಕ್ರೂರವಾಗಿ ಹಲ್ಲೆ ಮಾಡಿದ್ದಾಳೆ. ಚೂರಿಯಿಂದ ಚುಚ್ಚಿದ್ದಾಳೆ. ಒಂದೆರಡಲ್ಲ 50 ಬಾರಿ ಚುಚ್ಚಿದ್ದಾಳೆ. ಅಂದಹಾಗೆಯೇ ಈಕೆ ಚುಚ್ಚಿದ್ಯಾಕೆ ಗೊತ್ತಾ? ಯಾಕಂದ್ರೆ ಇವರಿಬ್ಬರು ಒಬ್ಬ ಗಂಡನ ಇಬ್ಬರು ಹೆಂಡತಿಯರು.

ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಭೀಕರ ಕೃತ್ಯ

ರಕ್ತಸಿಕ್ತವಾದ ಕೈಯಲ್ಲಿ ಚಾಕು ಹಿಡಿದು ನಿಂತಿರುವ ಈಕೆಯ ಹೆಸರು ಮಾನ್ಸಿ. ಕೆಳಗೆ ರಕ್ತದ ಮಡುವಿನಲ್ಲಿ ಬಿದ್ದಿರುವಳ ಹೆಸರು ಜಯಾ. ಇಬ್ಬರೂ ಕೂಡ ಒಬ್ಬನನ್ನೇ ಮದುವೆಯಾಗಿದ್ದಾರೆ. ಮಧ್ಯಪ್ರದೇಶದ ರೇವಾ ನಗರದ ನಿವಾಸಿಗಳು. ಆದ್ರೆ ದೀಪಾವಳಿಯಂದು ಇಬ್ಬರ ಮಧ್ಯೆ ಗಲಾಟೆಯಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಮಾನ್ಸಿ ಕೋಪಗೊಂಡು ಜಯಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ. ಒಂದಲ್ಲ, ಎರಡಲ್ಲ ಬರೋಬ್ಬರಿ 50 ಬಾರಿ ಚಾಕುವಿನಿಂದ ಇರಿದಿದ್ದಾಳೆ.

ಇದನ್ನೂ ಓದಿ: ನಿರ್ದೇಶಕ ಗುರುಪ್ರಸಾದ್ ಸಾ*ವಿನ ಹಿಂದೆ ಅನುಮಾನಗಳ ಹುತ್ತ! ಪತ್ನಿ ಹೇಳಿದ್ದೇನು? ತನಿಖೆಗೆ ಇಳಿದ ಪೊಲೀಸರು

ದೀಪಾವಳಿ ಹಬ್ಬದಂದು ಜಗಳ

2019ರಲ್ಲಿ ಜಯಾ ಎಂಬುವರನ್ನು ರಾಂಬಾಬು ವರ್ಮಾ ಮದುವೆಯಾಗಿದ್ದ. ಆದ್ರೆ ಜಯಾಗೆ ಅನಾರೋಗ್ಯವಿದ್ದ ಕಾರಣ 2021ರಲ್ಲಿ ರಾಂಬಾಬು 2ನೇ ಮದುವೆ ಆಗಲು ನಿರ್ಧರಿಸಿದ್ದ. ಅದರಂತೆ ಮಾನ್ಸಿ ಎಂಬುವಳನ್ನು 2ನೇ ಮದುವೆಯಾಗಿದ್ದನು. ದೀಪಾವಳಿ ಹಬ್ಬದ ದಿನ ಜಯಾ ಮತ್ತು ಮಾನ್ಸಿ ನಡುವೆ ಜಗಳವಾಗಿದೆ. ಇದು ವಿಕೋಪಕ್ಕೆ ತಿರುಗಿ ಮಾನ್ಸಿಯಿಂದ ಜಯಾ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಗಂಡನ ಮೊದಲ ಪತ್ನಿ ಜಯಾಗೆ 2ನೇ ಪತ್ನಿ ಮಾನ್ಸಿ ಚಾಕುವಿನಿಂದ 50 ಬಾರಿ ಇರಿದಿದ್ದಾಳೆ. ಜಯಾ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಬಿಡದೇ ಕಾಲಿನಿಂದ ತುಳಿದು ಪದೇ ಪದೇ ಹಲ್ಲೆ ಮಾಡಿದ್ದು, ಈ ಭಯಾನಕ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ.

ಜಯಾ ಸ್ಥಿತಿ ಗಂಭೀರ.. ಮಾನ್ಸಿ ಪೊಲೀಸರ ವಶಕ್ಕೆ

ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಜಯಾರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಜಯಾ ಪರಿಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಮತ್ತೊಂದೆಡೆ, ಮಾರಣಾಂತಿಕ ಹಲ್ಲೆ ನಡೆಸಿದ ಮಾನ್ಸಿಯನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ರೈತರ ಜಮೀನುಗಳಿಗೆ ವಕ್ಫ್​ ನೋಟಿಸ್​​.. ಇಂದು ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಒಟ್ಟಾರೆ. ಹೆಣ್ಣಿಗೆ ಹೆಣ್ಣೆ ಶತ್ರು ಅನ್ನೋ ಗಾದೆ ಮಾತಿನಂತೆ ಮಾನ್ಸಿ ತನ್ನ ಗಂಡನ ಮೊದಲ ಪತ್ನಿ ಜಯಾಗೆ ಭೀಕರ ಹಲ್ಲೆ ಮಾಡಿದ್ದಾರೆ. ಸದ್ಯ ಇದರ ಹಿಂದಿನ ಅಸಲಿ ಕಾರಣವನ್ನು ಪೊಲೀಸರು ಪತ್ತೆ ಹಚ್ಚಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment