ತಾಯಿಯ ಕಳೆಬರಹದೊಂದಿಗೆ 9 ದಿನಗಳನ್ನು ಕಳೆದ ಹೆಣ್ಣು ಮಕ್ಕಳು; ಇದು ಕಣ್ಣಂಚಲ್ಲಿ ನೀರು ತರಿಸುವ ಘಟನೆ

author-image
Gopal Kulkarni
Updated On
ಪ್ರೀತಿಸಿದ ಹುಡುಗಿ ಜೊತೆ ಕಿರಿಕ್‌.. ಪೊಲೀಸ್ ಠಾಣೆ ಗೇಟ್ ಬಳಿ ಕತ್ತು ಸೀಳಿ ಹತ್ಯೆ ಮಾಡಿದ ಯುವಕ
Advertisment
  • ತಾಯಿಯ ಕಳೆಬರಹದೊಂದಿಗೆ 9 ದಿನ ಕಳೆದ ಇಬ್ಬರು ಹೆಣ್ಣು ಮಕ್ಕಳು
  • ಪೊಲೀಸರು ಬಂದು ಬಾಗಿಲು ತೆರೆಸಿ ನೋಡುವವರೆಗೂ ಹಾಗೇ ಇದ್ದರು
  • ಪೊಲೀಸರ ಎದುರು ತಮ್ಮ ಪರಿಸ್ಥಿತಿ ವಿವರಿಸಿ ಕಣ್ಣೀರಿಟ್ಟ ಎರಡು ಮಕ್ಕಳು

45 ವರ್ಷದ ತಾಯಿ ತೀರಿ ಹೋದರು ಆಕೆಯ 25 ಹಾಗೂ 22 ವರ್ಷದ ಹೆಣ್ಣು ಮಕ್ಕಳು ತಾಯಿಯ ಕಳೆಬರಹದೊಂದಿಗೆ 9 ದಿನಗಳ ಕಾಲ ಹಾಗೆಯೇ ಇದ್ದ ಘಟನೆ ಹೈದ್ರಾಬಾದ್​ನಲ್ಲಿ ನಡೆದಿದೆ. ಜನವರಿ 23 ರಂದೇ ತಾಯಿಯು ಜೀವವನ್ನು ಬಿಟ್ಟಿದ್ದಾರೆ. ತಾಯಿ ಕಳೆದುಕೊಂಡ ಖಿನ್ನತೆಯಲ್ಲಿ ಇಬ್ಬರು ಸಹೋದರಿಯರು ಯಾರಿಗೂ ತಿಳಿಸದೇ ಅಮ್ಮನ ಕಳೆಬರಹದೊಂದಿಗೆ ಸುಮಾರು ದಿನಗಳ ಕಾಲ ಕಳೆದಿದ್ದಾರೆ.

ಪೊಲೀಸರು ಮನೆಯ ಬಾಗಿಲನ್ನು ತೆರೆಸಿ ನೋಡಿದಾಗ ಈ ಘಟನೆ ಜನವರಿ 31 ರಂದು ಬೆಳಕಿಗೆ ಬಂದಿದೆ. ಇಬ್ಬರು ಹೆಣ್ಣು ಮಕ್ಕಳ 45 ವಯಸ್ಸಿನ ತಾಯಿ ರಾತ್ರಿ ಮಲಗಿದವರು ಏದ್ದೇ ಇಲ್ಲ. ಮಕ್ಕಳು ಎಬ್ಬಿಸಲು ಹೋದಾಗ ಅವರು ಮೃತಪಟ್ಟಿರುವುದು ದೃಢವಾಗಿದೆ. ಉಸಿರಾಟ ನಿಂತಿದ್ದು. ಹೃದಯ ಬಡಿತ ನಿಂತಿದ್ದು ಕಂಡು ಮಕ್ಕಳು ತಾಯಿ ಮೃತಪಟ್ಟಿದ್ದಾಳೆ ಎಂದು ನಿಶ್ಚಯ ಮಾಡಿದ್ದಾರೆ. ಆದ್ರೆ ಇದನ್ನು ಯಾರಿಗೂ ಹೇಳಿಲ್ಲ. ಸುಮಾರು 9 ದಿನಗಳ ಕಾಲ ಮನೆಯ ಬಾಗಿಲು ಹಾಕಿಕೊಂಡು ಅಮ್ಮನ ಕಳೆಬರಹದೊಂದಿಗೆನೇ ಇದ್ದಾರೆ.

ಇದನ್ನೂ ಓದಿ:10 ಲಕ್ಷಕ್ಕಾಗಿ ಗಂಡನ ಕಿಡ್ನಿ ಮಾರಿಸಿದ ಕಿಲಾಡಿ ಹೆಂಡತಿ; ಆಮೇಲೆ ಆಕೆ ಮಾಡಿದ್ದೇ ಅನಾಹುತ ಕೆಲಸ

ತಾಯಿ ಮೃತಪಟ್ಟಿದ್ದರಿಂದ ಸಂಪೂರ್ಣವಾಗಿ ಖಿನ್ನತೆಗೆ ಒಳಗಾದ ಹೆಣ್ಣು ಮಕ್ಕಳು ಮುಂದೆ ಏನು ಮಾಡಬೇಕು ಎಂದು ಗೊತ್ತಾಗದೆ ಆಕೆಯ ಮೃತದೇಹದೊಂದಿಗೆ ಮನೆಯಲ್ಲಿಯೇ ಉಳಿದಿದ್ದಾರೆ. ಕೊನೆಗೆ ನೆರೆಹೊರೆಯವರಿಗೆ ಸುಮಾರು ದಿನಗಳ ಕಾಲ ಮನೆಯ ಬಾಗಿಲು ಹಾಕಿದ್ದನ್ನು ನೋಡಿ ಅನುಮಾನಗೊಂಡು ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಮನೆಗೆ ಬಂದು ಬಾಗಿಲು ತೆರೆಸಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ:ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾದಲ್ಲಿ ನಟಿಸಲ್ವಾ.. ಪಡೆದ ಅಡ್ವಾನ್ಸ್​ ಹಣ ವಾಪಸ್ ಕೊಟ್ರಾ?

ತಾಯಿ ಮೃತಪಟ್ಟ ನಂತರ ನಮಗೆ ಏನು ಮಾಡಬೇಕು ಎಂದು ಗೊತ್ತಾಗಲಿಲ್ಲ. ಅವಳ ಅಂತ್ಯಸಂಸ್ಕಾರಕ್ಕೂ ಕೂಡ ನಮ್ಮ ಬಳಿ ಹಣವಿರಲಿಲ್ಲ ಹೀಗಾಗಿ ಚಿಂತೆಗೆ ಬಿದ್ದು ತಾಯಿಯೊಂದಿಗೆ ಹಾಗೆ ಕುಳಿತುಬಿಟ್ಟೆವು ಎಂದು ಇಬ್ಬರು ಹೆಣ್ಣು ಮಕ್ಕಳು ತಮ್ಮ ನೋವನ್ನು ಪೊಲೀಸರೆದರು ತೋಡಿಕೊಂಡಿದ್ದಾರೆ. ಪೊಲೀಸರು ಮೃತದೇಹನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದರೆ. ಇಬ್ಬರು ಹೆಣ್ಣು ಮಕ್ಕಳು ಡಿಗ್ರಿ ಮುಗಿದ ಬಳಿಕ ಸೇಲ್ಸ್ ಗರ್ಲ್ಸ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಅವರ ತಂದೆ ತುಂಬಾ ವರ್ಷಗಳ ಹಿಂದೆಯೇ ಕುಟುಂಬವನ್ನು ತೊರೆದು ಹೋಗಿದ್ದರು ಎಂದು ಪೊಲೀಸರ ಮುಂದೆ ಹೆಣ್ಣು ಮಕ್ಕಳು ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment