/newsfirstlive-kannada/media/post_attachments/wp-content/uploads/2025/06/piyush-chawla-2.jpg)
ಟೀಂ ಇಂಡಿಯಾದ ಮಾಜಿ ಆಟಗಾರ, 2 ವರ್ಲ್ಡ್ ಕಪ್ ಗೆದ್ದ ತಂಡದ ಸ್ಟಾರ್ ಆಟಗಾರ ಪಿಯೂಷ್ ಚಾವ್ಲಾ ಅವರು ಇಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಲೆಗ್ ಸ್ಪಿನ್ನರ್ ಖ್ಯಾತಿಯ ಪಿಯೂಷ್ ಚಾವ್ಲಾ 2007ರ T20 ವಿಜೇತ ಹಾಗೂ 2011ರ ಏಕದಿನ ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಆಟಗಾರರಾಗಿದ್ದರು.
ಟೀಂ ಇಂಡಿಯಾಗೆ ಬಹಳ ದೊಡ್ಡ ಕೊಡುಗೆ ನೀಡಿದ್ದ ಪಿಯೂಷ್ ಚಾವ್ಲಾ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲೂ ಗಮನಾರ್ಹ ಸಾಧನೆ ಮಾಡಿದ್ದಾರೆ. ಪಿಯೂಷ್ ಚಾವ್ಲಾ IPL ಇತಿಹಾಸದಲ್ಲೇ ಅತಿ ಹೆಚ್ಚು ವಿಕೆಟ್ ತೆಗೆದ 3ನೇ ಆಟಗಾರ ಅನ್ನೋ ಖ್ಯಾತಿಗಳಿಸಿದ್ದಾರೆ.
ಇದನ್ನೂ ಓದಿ: ಆರ್ಸಿಬಿಗೆ ಸಂಕಷ್ಟದ ಮೇಲೆ ಸಂಕಷ್ಟ.. ಪೊಲೀಸರು ದಾಖಲಿಸಿದ FIR ನಲ್ಲಿ ಏನೇನಿದೆ?
ಎಲ್ಲಾ ಮಾದರಿಯ ಕ್ರಿಕೆಟ್‌ಗೂ ಗುಡ್‌ಬೈ ಹೇಳಿರುವ ಪಿಯೂಷ್, ತಮ್ಮ ನಿರ್ಧಾರವನ್ನು Instagramನಲ್ಲಿ ಪೋಸ್ಟ್ ಮಾಡೋ ಮೂಲಕ ಬಿಗ್ ಶಾಕ್ ಕೊಟ್ಟಿದ್ದಾರೆ.
38 ವರ್ಷದ ಪಿಯೂಷ್ ಚಾವ್ಲಾ ಅವರು ಐಪಿಎಲ್‌ನಲ್ಲಿ ಒಟ್ಟು 4 ತಂಡದ ಪರ ಆಟವಾಡಿದ್ದಾರೆ. ಪಂಜಾಬ್ ಕಿಂಗ್ಸ್, ಕೊಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ ಹಾಗೂ ಮುಂಬೈ ಇಂಡಿಯನ್ಸ್ ಪರ 192 ಪಂದ್ಯಗಳನ್ನು ಆಡಿದ್ದಾರೆ. 192 ಐಪಿಎಲ್ ಪಂದ್ಯದಲ್ಲಿ 192 ವಿಕೆಟ್‌ಗಳನ್ನು ಪಿಯೂಷ್ ಚಾವ್ಲಾ ತೆಗೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ