2 ವರ್ಷದ ಎರಾಸ್ ಟೂರ್ ಸಕ್ಸಸ್.. ಟೇಲರ್ ಸ್ವಿಫ್ಟ್‌ ಕಾರ್ಯಕ್ಕೆ ಭಾರೀ ಮೆಚ್ಚುಗೆ; ಮಾಡಿದ್ದೇನು?

author-image
admin
Updated On
2 ವರ್ಷದ ಎರಾಸ್ ಟೂರ್ ಸಕ್ಸಸ್.. ಟೇಲರ್ ಸ್ವಿಫ್ಟ್‌ ಕಾರ್ಯಕ್ಕೆ ಭಾರೀ ಮೆಚ್ಚುಗೆ; ಮಾಡಿದ್ದೇನು?
Advertisment
  • ತಮ್ಮ ಎರಾಸ್ ಪ್ರವಾಸ ಮುಗಿಸುವುದರ ಜೊತೆಗೆ ಮಹತ್ವದ ನಿರ್ಧಾರ
  • ಪ್ರದರ್ಶಕರು, ಟ್ರಕ್ ಡ್ರೈವರ್‌, ಕ್ಯಾಟರಿಂಗ್‌ನವರಿಗೂ ಬೋನಸ್‌ ಘೋಷಣೆ
  • 10 ಮಿಲಿಯನ್‌ಗೂ ಹೆಚ್ಚು ಜನರಿಂದ ಟೇಲರ್ ಶಿಫ್ಟ್‌ ಶೋ ವೀಕ್ಷಣೆ

ಅಮೆರಿಕಾದ ಪ್ರಖ್ಯಾತ ಗಾಯಕಿ ಟೇಲರ್ ಸ್ವಿಫ್ಟ್‌ ಅವರು ಇತ್ತೀಚೆಗೆ ತಮ್ಮ ಎರಾಸ್ ಟೂರ್‌ ಅನ್ನ ಯಶಸ್ವಿಯಾಗಿ ಮುಗಿಸಿದ್ದಾರೆ. ಸುಮಾರು 2 ವರ್ಷಗಳ ಕಾಲ ಟೇಲರ್ ಸ್ವಿಫ್ಟ್ ಅವರ ತಂಡ ಜಗತ್ತಿನಾದ್ಯಂತ ಹಲವಾರು ಶೋಗಳನ್ನ ಸಂಗೀತ ಪ್ರಿಯರು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

ಟೇಲರ್ ಸ್ವಿಫ್ಟ್ ಅವರು ತಮ್ಮ ಎರಾಸ್ ಪ್ರವಾಸವನ್ನ ಮುಗಿಸುವುದರ ಜೊತೆಗೆ ಮಹತ್ವದ ನಿರ್ಧಾರವೊಂದನ್ನ ಘೋಷಣೆ ಮಾಡಿದ್ದಾರೆ. ಕಳೆದ 2 ವರ್ಷಗಳಲ್ಲಿ ಜೊತೆಯಲ್ಲಿದ್ದು ಶ್ರಮವಹಿಸಿದ ತಮ್ಮ ಇಡೀ ತಂಡಕ್ಕೆ ಭಾರೀ ಮೊತ್ತದ ಬೋನಸ್‌ ಹಣವನ್ನ ಘೋಷಣೆ ಮಾಡಿದ್ದಾರೆ.

publive-image

ಟೇಲರ್ ಸ್ವಿಫ್ಟ್ ತನ್ನ ಟೂರ್ ಪ್ರದರ್ಶಕರು, ಸಿಬ್ಬಂದಿಗೆ 197 ಮಿಲಿಯನ್ ಡಾಲರ್‌ ಬೋನಸ್‌ಗಳನ್ನು ಬಹುಮಾನವಾಗಿ ನೀಡಲು ನಿರ್ಧರಿಸಿದ್ದಾರೆ. 197 ಮಿಲಿಯನ್ ಡಾಲರ್ ಅಂದ್ರೆ ಭಾರತದ ರೂಪಾಯಿ ಮೌಲ್ಯದಲ್ಲಿ 1,672 ಕೋಟಿ ರೂಪಾಯಿಗೂ ಹೆಚ್ಚು.

publive-image

ಎರಾಸ್ ಪ್ರವಾಸದಲ್ಲಿ ಟೇಲರ್ ಸ್ವಿಫ್ಟ್ ಅವರ ಸ್ಟೇಜ್ ಶೋಗಳನ್ನು 10 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ. ಟೇಲರ್ ಸ್ವಿಫ್ಟ್‌ನ ಈ ಟೂರ್ ಜಗತ್ತಿನಾದ್ಯಂತ ಭರ್ಜರಿ ಹಿಟ್ ಆಗಿದೆ. ಈ ಯಶಸ್ಸಿನ ಹಿನ್ನೆಲೆಯಲ್ಲಿ ಟೇಲರ್ ಸ್ವಿಫ್ಟ್ ಅವರು ತನ್ನ ತಂಡದ ಸದಸ್ಯರ ಶ್ರಮವನ್ನು ಗುರುತಿಸಿ ಈ ಬೋನಸ್ ಬಹುಮಾನವನ್ನ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: BBK11: ಬೆಂಕಿ ತನಿಷಾ ಮಾತಿಗೆ ಕರಗಿ ಹೋದ್ರಾ ಮೋಕ್ಷಿತಾ, ಮಂಜಣ್ಣ; ಮುನಿಸು ತೊರೆದು ಮತ್ತೆ ಒಂದಾಗ್ತಾರಾ? 

ಟೇಲರ್ ಸ್ವಿಫ್ಟ್‌ ಘೋಷಣೆ ಮಾಡಿರುವ ಬಹುಮಾನದಲ್ಲಿ ವೇದಿಕೆಯ ಪ್ರದರ್ಶಕರು, ಟ್ರಕ್ ಡ್ರೈವರ್‌ಗಳು, ಕ್ಯಾಟರಿಂಗ್‌ನವರು, ದೈಹಿಕ ಚಿಕಿತ್ಸಕರು, ವೀಡಿಯೋ ತಂಡ ಮತ್ತು ಜೊತೆಗಿದ್ದ ಪ್ರತಿಯೊಬ್ಬರನ್ನು ಸೇರಿಸಿಕೊಂಡಿದ್ದಾರೆ. ಕಳೆದ 21 ತಿಂಗಳಲ್ಲಿ ಸ್ವಿಫ್ಟ್ ಅವರು ಒಟ್ಟು 149 ಸ್ಟೇಜ್ ಶೋಗಳನ್ನ ನೀಡಿ ಗಮನ ಸೆಳೆದಿದ್ದಾರೆ. 149 ಪ್ರದರ್ಶನಗಳಲ್ಲಿ 2.2 ಬಿಲಿಯನ್ ಲಾಭಗಳಿಸಿರುವ ಟೇಲರ್ ಶಿಫ್ಟ್‌ ಅವರು ಹೊಸ ದಾಖಲೆಯನ್ನು ಬರೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment