/newsfirstlive-kannada/media/post_attachments/wp-content/uploads/2025/03/Harry-Brook.jpg)
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ಗೆ ಇನ್ನೇನು 10 ದಿನಗಳು ಮಾತ್ರ ಬಾಕಿ ಇದೆ. ಹೇಗಾದ್ರೂ ಮಾಡಿ ಈ ಬಾರಿ ಕಪ್ ಗೆಲ್ಲಲೇಬೇಕು ಎಂದು ಎಲ್ಲಾ ಐಪಿಎಲ್ ತಂಡಗಳು ಸಜ್ಜಾಗಿವೆ. ಇದೇ ತಿಂಗಳು 22ನೇ ತಾರೀಕಿನಿಂದ ಈ ಮೆಗಾ ಟೂರ್ನಿ ಶುರುವಾಗಲಿದೆ. ಇದರ ಮಧ್ಯೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಶಾಕಿಂಗ್ ನ್ಯೂಸ್ ಒಂದಿದೆ.
ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟರ್ ಹ್ಯಾರಿ ಬ್ರೂಕ್ ಐಪಿಎಲ್‌ನಿಂದ ಹೊರ ನಡೆದಿದ್ದಾರೆ. ಇವರು ಐಪಿಎಲ್‌ನಿಂದ ಹೊರ ನಡೆದಿರುವುದು ಇದು ಮೊದಲೇನಲ್ಲ. ಹೀಗಾಗಿ ಬ್ರೂಕ್ ಮೇಲೆ 2 ವರ್ಷಗಳ ಕಾಲ ಐಪಿಎಲ್ ಆಡದಂತೆ ನಿಷೇಧ ಹೇರಲಾಗಿದೆ.
ಬ್ರೂಕ್ ಮೇಲಿನ ನಿಷೇಧಕ್ಕೆ ಕಾರಣವೇನು?
ಫಾರಿನ್ ಪ್ಲೇಯರ್ಸ್ ಐಪಿಎಲ್ ಆಡೋದು ಸಾಮಾನ್ಯ. ಎಲ್ಲಾ ಫ್ರಾಂಚೈಸಿಗಳು ಸ್ಟ್ರಾಟಜಿ ಮಾಡಿ ಫಾರಿನ್ ಪ್ಲೇಯರ್ಸ್ ಖರೀದಿ ಮಾಡುತ್ತಾರೆ. ಖರೀದಿ ಮಾಡಿದ ಬಳಿಕ ಐಪಿಎಲ್‌ನಿಂದ ಒಬ್ಬ ಪ್ಲೇಯರ್ ಹಿಂದೆ ಸರಿದರೆ ಫ್ರಾಂಚೈಸಿಗಳಿಗೆ ಸಮಸ್ಯೆ ಆಗುತ್ತದೆ. ಈ ಕಾರಣಕ್ಕೆ ಬ್ರೂಕ್ ಮೇಲೆ ನಿಷೇಧ ಹೇರಲಾಗಿದೆ ಎಂದು IPL ಆಡಳಿತ ಮಂಡಳಿ ತಿಳಿಸಿದೆ.
ಆಟಗಾರರು ದಿಢೀರ್ ಐಪಿಎಲ್‌ನಿಂದ ಹೊರ ನಡೆದರೆ ಫ್ರಾಂಚೈಸಿಗಳಿಗೆ ತೊಂದರೆ ಆಗುತ್ತದೆ. ಇವರ ಜಾಗಕ್ಕೆ ಯಾರನ್ನು ರೀಪ್ಲೇಸ್ ಮಾಡಬೇಕು ಅನ್ನೋ ಚರ್ಚೆ ಶುರುವಾಗುತ್ತದೆ. ಈ ಕುರಿತು ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ಒಂದು ದೊಡ್ಡ ನಿಯಮವನ್ನು ಬಿಸಿಸಿಐ ಜಾರಿಗೊಳಿಸಿದೆ. ಆರೋಗ್ಯ ಸಮಸ್ಯೆ ಹೊರತುಪಡಿಸಿ ಯಾವುದೇ ಕಾರಣಕ್ಕೂ ಐಪಿಎಲ್‌ನಿಂದ ಹಿಂದೆ ಸರಿದರೆ ಅವರ ಮೇಲೆ ನಿಷೇಧ ಅಸ್ತ್ರ ಪ್ರಯೋಗ ಮಾಡಲಾಗುತ್ತದೆ.
ಇದನ್ನೂ ಓದಿ:ಡಿವೋರ್ಸ್ ವದಂತಿಗೆ ಬಿಗ್ ಟ್ವಿಸ್ಟ್ ಕೊಟ್ಟ ಧನಶ್ರೀ ವರ್ಮಾ; ಚಹಾಲ್ ಜೊತೆಗಿನ ಕ್ಷಣಗಳು ರಿಸ್ಟೋರ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ