newsfirstkannada.com

ವಾಟ್ಸಾಪ್‌, ಫೇಸ್‌ಬುಕ್‌ನಲ್ಲಿ ಹುಡುಗಿಯರಿಗೆ ಹಾರ್ಟ್‌ ಸಿಂಬಲ್ ಕಳುಹಿಸಿದ್ರೆ 2 ವರ್ಷ ಜೈಲು ಶಿಕ್ಷೆ!

Share :

Published August 1, 2023 at 1:37pm

Update August 1, 2023 at 1:43pm

    ಹಾಯ್.. ಹಲೋ ಓಕೆ.. ‘ಹಾರ್ಟ್’ ಕಳುಹಿಸಿದ್ರೆ ಜೋಕೆ

    ಹುಡುಗಿಯರಿಗೆ ಹಾರ್ಟ್‌ ಕಳುಹಿಸಿದ್ರೆ 2 ವರ್ಷ ಜೈಲು ಶಿಕ್ಷೆ

    ಪದೇ ಪದೆ ತಪ್ಪು ಮಾಡುವವರಿಗೆ 5 ವರ್ಷ ಜೈಲು ಪಕ್ಕಾ!

ಹಾಯ್.. ಹಲೋ ಓಕೆ.. ವಾಟ್ಸಾಪ್‌, ಫೇಸ್‌ಬುಕ್‌ನಲ್ಲಿ ಹುಡುಗಿಯರಿಗೆ ಕೆಂಪು ಬಣ್ಣದ ಹಾರ್ಟ್ ಸಿಂಬಲ್ ಕಳುಹಿಸಿದವರಿಗೆ ಜೈಲು ಶಿಕ್ಷೆ ಗ್ಯಾರಂಟಿ. ಹೆದರಬೇಡಿ ಇಂತಹ ಕಠಿಣವಾದ ಕಾನೂನು ಜಾರಿ ಆಗ್ತಿರೋದು ನಮ್ಮ ದೇಶದಲ್ಲಿ ಅಲ್ಲ. ಕುವೈತ್‌ನಲ್ಲಿ ಯಾರಾದ್ರೂ ಸೋಷಿಯಲ್ ಮೀಡಿಯಾದಲ್ಲಿ ಹುಡುಗಿಯರಿಗೆ ಹಾರ್ಟ್‌ ಸಿಂಬಲ್ ಕಳುಹಿಸಿದ್ರೆ 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಲಿದ್ದಾರೆ. ಅಷ್ಟೇ ಅಲ್ಲ ದಂಡವನ್ನೂ ಕಟ್ಟಬೇಕಾಗಿದೆ. ಇಂತಹದೊಂದು ಕಾನೂನನ್ನು ಕುವೈತ್ ಸರ್ಕಾರ ಜಾರಿಗೆ ತಂದಿದೆ. ಸೌದಿ ಅರೇಬಿಯಾದಲ್ಲೂ ಕೂಡ ಈ ರೀತಿಯ ನಡವಳಿಕೆಯನ್ನು ಅಪರಾಧ ಎಂದು ಪರಿಗಣಿಸಲಾಗುತ್ತಿದೆ.

ಕುವೈತ್ ಮತ್ತು ಸೌದಿ ಅರೇಬಿಯಾಗಳಲ್ಲಿ ಇನ್ಮುಂದೆ ಹುಡುಗಿಯರಿಗೆ ಹಾರ್ಟ್‌ ಎಮೋಜಿಗಳನ್ನು ಕಳಿಸುವಂತಿಲ್ಲ. ಪ್ರಮುಖ ಸೋಷಿಯಲ್ ಮೀಡಿಯಾಗಳಾದ ವಾಟ್ಸಾಪ್‌, ಫೇಸ್‌ಬುಕ್‌ಗಳಲ್ಲಿ ಹುಡುಗಿಯರಿಗೆ ಹಾರ್ಟ್‌ ಸಿಂಬಲ್ ಕಳುಹಿಸಿದ್ರೆ ಅಪರಾಧವೆಂದು ಪರಿಗಣಿಸಲಾಗುತ್ತಿದೆ. ಕುವೈತ್‌ನಲ್ಲಿ ಈ ರೀತಿಯ ಹೃದಯದ ಎಮೋಜಿಯನ್ನು ಕಳುಹಿಸಿದರೆ 2 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 2,000 ಕುವೈತ್ ದಿನಾರ್‌ಗಳ ದಂಡ ಕಟ್ಟಬೇಕಾಗಿದೆ.

ಇದನ್ನೂ ಓದಿ: ಅಂದು ನಾಯಿ ಇಂದು ತೋಳ; 20 ಲಕ್ಷ ಖರ್ಚು ಮಾಡಿ ಮಹದಾಸೆ ಈಡೇರಿಸಿಕೊಂಡ ಮನುಷ್ಯ!

ಸೌದಿ ಅರೇಬಿಯಾದಲ್ಲಿ ಈ ಕಾನೂನು ಮತ್ತಷ್ಟು ಕಠಿಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಹುಡುಗಿಯರಿಗೆ ಹಾರ್ಟ್ ಸಿಂಬಲ್ ಕಳುಹಿಸಿದರೆ 2ರಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಇದರ ಜೊತೆ 1 ಲಕ್ಷ ಸೌದಿ ರಿಯಾಲ್‌ಗಳನ್ನು ದಂಡವಾಗಿ ಕಟ್ಟಬೇಕಾಗುತ್ತದೆ. ಸೌದಿ ಅರೇಬಿಯಾದ ವಂಚನೆಯ ವಿರೋಧಿ ಸಂಘದ ಸದಸ್ಯ ಈ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ. ಈ ದೇಶದಲ್ಲಿ ಆನ್‌ಲೈನ್‌ ಚಾಟಿಂಗ್‌ನಲ್ಲಿ ಯಾರಾದ್ರೂ ಹಾರ್ಟ್‌ ಎಮೋಜಿಗಳನ್ನು ಕಳುಹಿಸಿದ್ರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮೆಸೇಜ್ ಕಳುಹಿಸುವವರ ವಿರುದ್ಧ ಹುಡುಗಿಯರು ದೂರು ನೀಡಿದರೆ ಅದನ್ನು ಕಿರುಕುಳದ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಇದೇ ರೀತಿಯ ಪ್ರಕರಣ ಪದೇ ಪದೆ ಮರುಕಳಿಸಿದರೆ ಅಪರಾಧಿಗೆ 5 ವರ್ಷ ಜೈಲು ಶಿಕ್ಷೆ, 3 ಲಕ್ಷ ಸೌದಿ ರಿಯಾಲ್‌ಗಳನ್ನು ದಂಡವಾಗಿ ಕಟ್ಟಬೇಕಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ವಾಟ್ಸಾಪ್‌, ಫೇಸ್‌ಬುಕ್‌ನಲ್ಲಿ ಹುಡುಗಿಯರಿಗೆ ಹಾರ್ಟ್‌ ಸಿಂಬಲ್ ಕಳುಹಿಸಿದ್ರೆ 2 ವರ್ಷ ಜೈಲು ಶಿಕ್ಷೆ!

https://newsfirstlive.com/wp-content/uploads/2023/08/Heart-Emojis.jpg

Load More