/newsfirstlive-kannada/media/post_attachments/wp-content/uploads/2025/06/smg-boys-death.jpg)
ಶಿವಮೊಗ್ಗ: ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಯುವಕರು ಬಲಿಯಾಗಿರೋ ಘಟನೆ ಯಡವಾಲ ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ಗೌತಮ್ ನಾಯ್ಕ್ (22) ಹಾಗೂ ಚಿರಂಜೀವಿ(22) ಮೃತ ಯುವಕರು.
ಇದನ್ನೂ ಓದಿ:ನಾ ನಿನ್ನ ಬಿಡಲಾರೆ ದುರ್ಗಾಗೆ ಸರ್ಪ್ರೈಸ್ ಕೊಟ್ಟ ಸೀರಿಯಲ್ ತಂಡ.. ಏನದು?
ಗೌತಮ್ ನಾಯ್ಕ್ ಯಡವಾಲ ಗ್ರಾಮದ ನಿವಾಸಿ, ಹಾಗೂ ಚಿರಂಜೀವಿ ನಗರದ ಕುಂಬಾರಗುಂಡಿ ನಿವಾಸಿ. ಇತ್ತೀಚಿಗಷ್ಟೇ ಡೆಲಿವರಿಯಾಗಿದ್ದ ಸ್ನೇಹಿತನ ತಂಗಿಯ ಮಗು ನೋಡಲು ಸ್ನೇಹಿತನ ಮನೆಗೆ 10 ಯುವಕರು ತೆರಳಿದ್ದರು.
ಆಗ ಅವರ ಮನೆಗೆ ಭೇಟಿ ನೀಡಿದ ಬಳಿಕ ಸ್ನೇಹಿತರೆಲ್ಲಾ ತೋಟದಲ್ಲಿ ಪಾರ್ಟಿಗೆ ಹೋಗಿದ್ದರು. ಪಾರ್ಟಿ ಮಧ್ಯದಲ್ಲೇ ಕೃಷಿ ಹೊಂಡದ ಬಳಿ ತೆರಳಿದ್ದಾರೆ. ಇದೇ ವೇಳೆ ಕಾಲು ಜಾರಿ ಓರ್ವ ಯುವಕ ಬಿದ್ದಿದ್ದಾನೆ. ಆತನ ರಕ್ಷಣೆಗೆ ಧಾವಿಸಿದ್ದ ಇನ್ನೊಬ್ಬ ಯುವಕ ಸಹ ನೀರುಪಾಲು ಆಗಿದ್ದಾನೆ. ಸದ್ಯ ಯುವಕರ ಮೃತದೇಹಗಳ ಮೆಗ್ಗಾನ್ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ. ಈ ಘಟನೆ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ