ಪಾಕ್​ ವಿಫಲ ಡ್ರೋಣ್ ದಾಳಿ.. ಗುರಿ ಮುಟ್ಟುವ ಮೊದಲೇ ಫಿನಿಶ್ ಮಾಡಿದ ಭಾರತೀಯ ಸೇನೆ

author-image
Bheemappa
Updated On
ಕಾಶ್ಮೀರ ಕೇಸರಿ ಈಗ ಸಿಕ್ಕಾಪಟ್ಟೆ ದುಬಾರಿ; 1 KG ಸಫ್ರಾನ್​ ಲಕ್ಷ ಲಕ್ಷ ರೂಪಾಯಿ
Advertisment
  • ಟಾರ್ಗೆಟ್ ಮಾಡಿ, ಡ್ರೋಣ್ ಹೊಡೆದುರುಳಿಸಿದ ಭಾರತೀಯ ಸೇನೆ
  • ವಾಯುನೆಲೆಯ ಮೇಲೆ ಗುರಿಯಾಗಿರಿಸಿಕೊಂಡು ದಾಳಿಗೆ ಪ್ರಯತ್ನ.!
  • ಪಾಕಿಸ್ತಾನದಿಂದ 20 ನಗರಗಳ ಮೇಲೆ ಮತ್ತೆ ವಿಫಲ ಡ್ರೋಣ್ ದಾಳಿ

ಜಮ್ಮುಕಾಶ್ಮೀರ, ಪಂಜಾಬ್, ರಾಜಸ್ಥಾನ ಹಾಗೂ ಗುಜರಾತ್​ನ 20 ನಗರಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನವು ಸತತ 2ನೇ ದಿನ ಡ್ರೋಣ್​ ದಾಳಿಗೆ ವಿಫಲ ಯತ್ನ ನಡೆಸಿದೆ. ಏಕೆಂದರೆ ಪಾಕಿಸ್ತಾನದ ಡ್ರೋಣ್​ಗಳು ಗುರಿ ಮುಟ್ಟುವ ಮೊದಲೇ ಭಾರತೀಯ ವಾಯು ಸೇನೆ ಹೊಡೆದುರುಳಿಸಿ ನೆಲಕ್ಕೆ ಕೆಡವಿವೆ.

ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್‌, ಅವಂತಿಪೋರಾದ ವಾಯುನೆಲೆಯ ಮೇಲೆ ಗುರಿಯಾಗಿರಿಸಿಕೊಂಡು ದಾಳಿಗೆ ಯತ್ನಿಸಿತ್ತು. ಆದರೆ ಇದನ್ನು ಮೊದಲೇ ಮನಗಂಡಿದ್ದ ಭಾರತೀಯ ವಾಯು ಸೇನೆ, ಪಾಕಿಸ್ತಾನದ ಎಲ್ಲ ಡ್ರೋನ್​ಗಳನ್ನು ಛಿದ್ರಛಿದ್ರ ಮಾಡಿದೆ. ಇದರಿಂದ ಬಂದ ದಾರಿಗೆ ಸುಂಕವಿಲ್ಲ ಎಂದು ಪಾಕ್​ ಅಳುತ್ತಿದೆ. ​

ಇದನ್ನೂ ಓದಿ: ಪಾಕ್​ನ 500 ಡ್ರೋಣ್ ಹೊಡೆದುರುಳಿಸಿದ್ದು ಹೇಗೆ..? ಭಾರತದ ರಕ್ಷಣಾ ಮೂಲಗಳಿಂದ ವಿಡಿಯೋ ರಿಲೀಸ್

publive-image

ಪಾಕಿಸ್ತಾನವು ಜಮ್ಮುಕಾಶ್ಮೀರ, ಜಮ್ಮು, ಸಾಂಬಾ, ರಾಜೌರಿ, ಪಂಜಾಬ್‌ನ ಪಠಾಣ್‌ಕೋಟ್, ಅಮೃತಸರ, ರಾಜಸ್ಥಾನದ ಪೋಖ್ರಾನ್ ಮೇಲೆ ಡ್ರೋನ್‌ ಹಾರಿಸಲು ಯೋಜಿಸಿತ್ತು. ಉತ್ತರ ಕಾಶ್ಮೀರ ಜಿಲ್ಲೆಯ ಕುಪ್ವಾರಾದ ಎಲ್‌ಒಸಿ ಉದ್ದಕ್ಕೂ ಹಾಗೂ ಸಾಂಬಾ, ಪೂಂಚ್, ಉರಿ, ನೌಗಮ್ ಹಂದ್ವಾರ ವಲಯಗಳಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ.

ಭಾರತದ ಮೇಲೆ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಪಾಕಿಸ್ತಾನ ಹಾರಿಸಲು ಯತ್ನಿಸಿದೆ. ಆದ್ರೆ ಇವುಗಳನ್ನು ಭಾರತೀಯ ಸೇನೆ ಯಶಸ್ವಿಯಾಗಿ ತಡೆಹಿಡಿಯಲಾಗಿದೆ. ಪ್ರತೀಕಾರ ತೀರಿಸಿಕೊಂಡಿರುವ ಭಾರತ, ಪಾಕಿಸ್ತಾನದ 4 ವಾಯು ರಕ್ಷಣಾ ತಾಣಗಳ ಮೇಲೆ ಸಶಸ್ತ್ರ ಡ್ರೋನ್‌ಗಳನ್ನು ಹಾರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment