ಹೊತ್ತಿ ಉರಿದ ಮಹಾರಾಷ್ಟ್ರದ ನಾಗ್ಪುರ.. ಔರಂಗಜೇಬ್ ಸಮಾಧಿ ವಿಚಾರಕ್ಕೆ ಗುಂಪು ಘರ್ಷಣೆ

author-image
Gopal Kulkarni
Updated On
ಹೊತ್ತಿ ಉರಿದ ಮಹಾರಾಷ್ಟ್ರದ ನಾಗ್ಪುರ.. ಔರಂಗಜೇಬ್ ಸಮಾಧಿ ವಿಚಾರಕ್ಕೆ ಗುಂಪು ಘರ್ಷಣೆ
Advertisment
  • ಹಿಂಸಾಚಾರಕ್ಕೆ ತಿರುಗಿದ ಔರಂಗಜೇಬ್​ನ ಸಮಾಧಿ!
  • ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ ಹಚ್ಚಿ ಗಲಾಟೆ!
  • ವದಂತಿಯಿಂದ ಕೆರಳಿದ ಒಂದು ಕೋಮುನಿಂದ ಗಲಾಟೆ

ಮಹಾರಾಷ್ಟ್ರದ ನಾಗ್ಪುರ್​ ನಿನ್ನೆ ಧಗಧಗಿಸ್ತು.. ಮೊಘಲ್‌ ದೊರೆ ಔರಂಗಜೇಬ್ ಸಮಾಧಿ ವಿಚಾರವಾಗಿ ಎರಡು ಗುಂಪುಗಳ ನಡುವೆ ಸಂಘರ್ಷ ಉಂಟಾಗಿದೆ.. ಭಾರೀ ಹಿಂಸಾಚಾರಕ್ಕೆ ನಗರ ಅಕ್ಷರಶಃ ನಲುಗಿದೆ..
ಇದು ನಾಗ್ಪುರದಲ್ಲಿ ಸದ್ಯದ ಪರಿಸ್ಥಿತಿ. ಭುಗಿಲೆದ್ದ ಘರ್ಷಣೆ. ಇಷ್ಟೆಲ್ಲ ಹಿಂಸಾಚಾರಕ್ಕೆ, ಉದ್ವಿಗ್ನ ಪರಿಸ್ಥಿತಿಗೆ ಕಾರಣ ಮೊಘಲ್​ ದೊರೆ ಔರಂಗಜೇಬ್ ಸಮಾಧಿಯಾದ ಸ್ಥಳಕ್ಕಾಗಿ ಎದ್ದ ವಿವಾದ..
ಛಾವಾ ಸಿನಿಮಾ ಯಾವಾಗ ರಿಲೀಸ್​ ಆಯ್ತೋ. ಆವತ್ತಿನಿಂದ ಮಹಾರಾಷ್ಟ್ರದಲ್ಲಿ ಔರಂಗಜೇಬ್ ಕಟಕಟೆಯಲ್ಲಿ ನಿಲ್ಲುವಂತೆ ಮಾಡಿದೆ. ಸಂಬಾಜಿನಗರ ಜಿಲ್ಲೆಯಲ್ಲಿನ ಔರಂಗಜೇಬ್​ನ ಸಮಾಧಿ ವಿವಾದಕ್ಕೆ ಕಾರಣ ಆಗಿದೆ. ಕೆಲ ದಿನಗಳಿಂದ ಪ್ರತಿಭಟನೆ ಕಿಚ್ಚು ಹಬ್ಬಿದೆ. ಈ ಕಿಚ್ಚಿನ ಧರ್ಮಗ್ರಂಥಕ್ಕೆ ಬೆಂಕಿ ಬಿದ್ದಿದೆ ಎಂಬ ವದಂತಿ ಮತ್ತಷ್ಟು ಧಗಧಗ ಎಬ್ಬಿಸಿದೆ.

publive-image

ಸಂಭಾಜಿನಗರದಲ್ಲಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ ನಡೆಸಿದೆ. ಈ ಬೆನ್ನಲ್ಲೆ ಧರ್ಮಗ್ರಂಥವನ್ನ ಸುಟ್ಟು ಹಾಕಲಾಗಿದೆ ಅಂತ ವದಂತಿಯೊಂದು ಕಾಡ್ಗಿಚ್ಚಿನಂತೆ ಹಬ್ಬಿದೆ. ಈ ವದಂತಿಯಿಂದ ಕೆರಳಿದ ಒಂದು ಕೋಮು ಗಲಾಟೆಗೆ ಇಳಿದಿದೆ. ಇದರ ಪ್ರತೀಕಾರಕ್ಕೆ ಇಳಿದ ಎದುರಾಳಿ ಮತ್ತೊಂದು ಗುಂಪು ಸಹ ಕಲ್ಲು ತೂರಾಟ ನಡೆಸಿದೆ. ಆ ಬಳಿಕ ಘರ್ಷಣೆಯಿಂದ ವಾಹನಗಳಿಗೆ ಬೆಂಕಿ ಬಿದ್ದಿದೆ. ಪರಿಸ್ಥಿತಿ ನಿಯಂತ್ರಿಸಲು ಬಂದ ಪೊಲೀಸರಿಗೆ ಕಲ್ಲು ತೂರಾಟದಿಂದ ಗಾಯಗೊಂಡಿದ್ದಾರೆ. ಇನ್ನು, ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ರಾತ್ರಿಯಿಡಿ ಜಾಗರಣೆ ಮಾಡಿದ್ದಾರೆ.

ಇದನ್ನೂ ಓದಿ:₹400 ಕೋಟಿ ತೆರಿಗೆ ಕಟ್ಟಿದ ಅಯೋಧ್ಯಾ ರಾಮಮಂದಿರ ಟ್ರಸ್ಟ್​.. ಒಂದೇ ವರ್ಷದಲ್ಲಿ ದೇಗುಲಕ್ಕೆ ಭೇಟಿ ನೀಡಿದ ಭಕ್ತರ ಸಂಖ್ಯೆ ಎಷ್ಟು?

publive-image

ನಿನ್ನೆ ಸಂಜೆ ಇಡೀ ನಾಗ್ಪುರ್​​ನಲ್ಲಿ ಪತ್ಥರ್​​​ಬಾಜಿ ನಡೆದಿದೆ. ದೊಣ್ಣೆಗಳನ್ನ ಹಿಡಿದು ರಸ್ತೆಗಳಲ್ಲಿ ದಾಂಧಲೆ ನಡೆದಿದೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ನಗರದಲ್ಲಿ 144 ಸೆಕ್ಷನ್​ ಜಾರಿ ಮಾಡ್ಲಾಗಿದೆ.. ವದಂತಿಗೆ ಯಾರೂ ಕಿವಿಗೊಡದೇ, ಶಾಂತಿ ಕಾಪಾಡುವಂತೆ ನಾಗ್ಪುರ್​​​ ಲೋಕಲ್​​​ ಲೀಡರ್ಸ್​​​ ಕೇಂದ್ರ ಸಚಿವ ಗಡ್ಕರಿ ಮತ್ತು ಸಿಎಂ ಫಡ್ನವೀಸ್ ಮನವಿ ಮಾಡಿದ್ದಾರೆ. ಸದ್ಯಕ್ಕೆ ನಾಗ್ಪುರದಲ್ಲಿ ಪರಿಸ್ಥಿತಿ ಶಾಂತವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment