ಬಲೆಗೆ ಬಿದ್ದ ದೈತ್ಯಾಕಾರದ ಮೀನು.. ಇದು ಎಷ್ಟು KG ಇದೆ ಎಂದ್ರೆ..?

author-image
Bheemappa
Updated On
ಬಲೆಗೆ ಬಿದ್ದ ದೈತ್ಯಾಕಾರದ ಮೀನು.. ಇದು ಎಷ್ಟು KG ಇದೆ ಎಂದ್ರೆ..?
Advertisment
  • ದೊಡ್ಡ ಗಾತ್ರದ ಮೀನು ಹಿಡಿದಿರುವುದು ಯಾವ ನದಿಯಲ್ಲಿ?
  • ಇದುವರೆಗೆ ಸಿಕ್ಕ ಮೀನುಗಳಲ್ಲಿ ಇದು ಅತ್ಯಂತ ದೊಡ್ಡದಂತೆ
  • ಅಬ್ಬಾಬ್ಬ.! ಇಷ್ಟೊಂದು ದೊಡ್ಡ ಮೀನಾ ಎಂದು ಆಶ್ಚರ್ಯ

ರಾಯಚೂರು: ಮೀನು ಹಿಡಿಯುವುದು ಎಂದರೆ ಹಲವರಿಗೆ ಇಷ್ಟದ ಕೆಲಸ. ಇನ್ನು ಕೆಲವರು ಟೈಮ್​ ಪಾಸ್​ಗಾಗಿ ಫಿಶಿಂಗ್ ಮಾಡುತ್ತಾರೆ. ಸ್ವಲ್ಪ ಜನ ಜೀವನ ಸಾಗಿಸಲು ಮೀನು ಹಿಡಿಯುವುದನ್ನೇ ತಮ್ಮ ಕಾಯಕ ಮಾಡಿಕೊಂಡಿರುತ್ತಾರೆ. ಬಲೆ, ಗಾಳ ನೀರಿಗೆ ಹಾಕಿದಾಗ ಅದಕ್ಕೆ ಮೀನು ಸಿಕ್ಕಿಕೊಂಡರೆ ಆ ಖುಷಿ ಬೇರೆಯದ್ದೇ ಆಗಿರುತ್ತದೆ. ಇದಕ್ಕೆ ಪೂರಕ ಎನ್ನುವಂತೆ ಇಲ್ಲೊಬ್ಬರ ಮೀನುಗಾರನ ಬಲೆಗೆ ಬೃಹತ್ ಗಾತ್ರದ ಮೀನೊಂದು ಬಿದ್ದಿದೆ.

ರಾಯಚೂರಿನ ಮಾನ್ವಿ ತಾಲೂಕಿನ ರಾಜಲಬಂಡ ಆಣೆಕಟ್ಟೆಯಲ್ಲಿ ಮೀನುಗಾರ ಒಬ್ಬ ಎಂದಿನಂತೆ ಬಲೆ ಹಾಕಿದ್ದಾನೆ. ಯಾವಾಗಲೂ ಬೀಳುವಂತೆ ಸಣ್ಣ ಸಣ್ಣ ಮೀನುಗಳು ಬೀಳುತ್ತವೆ ಎಂದು ಬಲೆಯನ್ನು ನೀರಿನಿಂದ ಎತ್ತುತ್ತಿದ್ದನು. ಈ ವೇಳೆ ದೈತ್ಯಾಕಾರದ ಮೀನೊಂದು ಬಲೆಗೆ ಬಿದ್ದಿರುವುದು ನೋಡಿ ಆಕಾಶಕ್ಕೆ ಹಾರಿದಂತೆ ಖುಷಿಯಾಗಿದ್ದಾನೆ. ಮೀನನ್ನು ನದಿಯಿಂದ ದಡಕ್ಕೆ ತರಲು ಮೀನುಗಾರ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅಬ್ಬಾಬ್ಬ ಇಷ್ಟೊಂದು ದೊಡ್ಡ ಮೀನಾ ಎಂದು ಆಶ್ಚರ್ಯ ಪಟ್ಟಿದ್ದಾನೆ.

publive-image

ಇದನ್ನೂ ಓದಿ:BBK11; ಗಿಫ್ಟ್​ ಕೊಟ್ಟು ‘ತ್ರಿವಿಕ್ರಮ್​ ವೇರಿ ಸ್ವೀಟ್’ ಎಂದ ಭವ್ಯ.. ಕಿಚ್ಚನ ಮಾತಿಗೆ ನಾಚಿ ನೀರಾದ ಬ್ಯೂಟಿ

ಸದ್ಯ ಮೀನುಗಾರನ ಬಲೆಗೆ ಬಿದ್ದಿರುವ ಮೀನು 20 ಕೆಜಿ ತೂಕ ಇದ್ದು ಇದು ಕಾಟ್ಲ ಮೀನು ಎಂದು ಗುರುತಿಸಲಾಗಿದೆ. ಈ ಬಾರಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ತುಂಗಭದ್ರ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಹೀಗಾಗಿ ಜಲಾಶಯದಲ್ಲಿನ ಬಾರಿ ಗಾತ್ರದ ಮೀನುಗಳು ನದಿಗೆ ಹರಿದು ಬರುತ್ತಿದ್ದರಿಂದ ಮೀನುಗಾರರಿಗೆ ಸಂತಸ ಸುದ್ದಿಯಾಗಿದೆ. ತಾಲೂಕಿನ ರಾಜಲಬಂಡೆ ಅಣೆಕಟ್ಟೆಯಲ್ಲಿ ದೈತ್ಯಾಕಾರದ ಮೀನುಗಳು ಬಲೆಗೆ ಬಿಳುತ್ತಿವೆ.

ಮೀನುಗಾರರಿಗೆ 20 ಕೆಜಿ ತೂಕ ಇರುವ ದೈತ್ಯಾಕಾರ ಕಾಟ್ಲ ಮೀನು ಇದುವರೆಗೂ ಸಿಕ್ಕ ಭಾರೀ ಮೀನುಗಳಲ್ಲಿ ಅತ್ಯಂತ ದೊಡ್ಡ ಮೀನು ಎನಿಸಿಕೊಂಡಿದೆ. ಬಲೆಗೆ ಬೀಳುತ್ತಿದ್ದ ರೌ, ಬಾಳೆ, ಜಿಲೇಬಿ ಮೀನುಗಳು ಒಂದೊಂದು ಎಂದರೆ ಕನಿಷ್ಠ 5 ರಿಂದ 7 ಕೆ.ಜಿ ಮಾತ್ರ ಇರುತ್ತಿದ್ದವು. ಆದರೆ ಈ ಸಲ 20 ಕೆ.ಜಿಯ ಕಾಟ್ಲ ಮೀನು ಸಿಕ್ಕಿರುವುದು ಮೀನು ಪ್ರಿಯರಿಗೆ ಪ್ರಮುಖ ಆಕರ್ಷಣೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment