ಅತ್ತ.. ಇತ್ತ.. ಸುತ್ತ.. ಮುತ್ತ.. ಪಾಕ್​​ಗೆ ಹೊಡ್ತ; 20 ಪಾಕ್​ ಸೈನಿಕರ ಜೀವ ತೆಗೆದ ತಾಲಿಬಾನ್ ಉಗ್ರರು..!

author-image
Ganesh
Updated On
ಅತ್ತ.. ಇತ್ತ.. ಸುತ್ತ.. ಮುತ್ತ.. ಪಾಕ್​​ಗೆ ಹೊಡ್ತ; 20 ಪಾಕ್​ ಸೈನಿಕರ ಜೀವ ತೆಗೆದ ತಾಲಿಬಾನ್ ಉಗ್ರರು..!
Advertisment
  • ಅತ್ತ ಬಲೂಚಿಸ್ತಾನ, ಇತ್ತ ಭಾರತದಿಂದ ಮಾಸ್ಟರ್ ಸ್ಟ್ರೋಕ್
  • ಈಗ ಪಾಕ್ ಸೇನೆ ವಿರುದ್ಧ ತಾಲಿಬಾನ್ ಉಗ್ರರು ಸ್ಟ್ರೈಕ್
  • ಮರೆಯಲಾಗದ ಏಟು ಕೊಟ್ಟ ತಾಲಿಬಾನ್ ಉಗ್ರರು

ನಿನ್ನೆ ತಡರಾತ್ರಿ ನಡೆದ ಪ್ರಮುಖ ದಾಳಿಯಲ್ಲಿ ನಿಷೇಧಿತ ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಯ ಉಗ್ರಗಾಮಿಗಳು ದಕ್ಷಿಣ ವಜಿರಿಸ್ತಾನದ ಶಕೈನಲ್ಲಿರುವ ಪಾಕಿಸ್ತಾನಿ ಮಿಲಿಟರಿ ಬೇಸ್​ ಮೇಲೆ ದಾಳಿ ನಡೆಸಿದ್ದಾರೆ.

ವರದಿಗಳ ಪ್ರಕಾರ, ಕಾರ್ಯಾಚರಣೆಯ ಮೊದಲ ಹಂತದಲ್ಲಿ ಟಿಟಿಪಿ ಉಗ್ರರು, ರೈಫಲ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದಾಗ ಆರು ಸೈನಿಕರು ಸಾವನ್ನಪ್ಪಿದ್ದಾರೆ. ನಂತರ ಪೋಸ್ಟ್ ಮೇಲೆ ಭಾರೀ ಮತ್ತು ಹಗುರವಾದ ಶಸ್ತ್ರಾಸ್ತ್ರಗಳ ದಾಳಿ ನಡೆಸಿದ್ದಾರೆ. ಇದರ ಪರಿಣಾಮವಾಗಿ ಮತ್ತಷ್ಟು ಸಾವುನೋವುಗಳು ಸಂಭವಿಸಿವೆ.

ಒಟ್ಟಾರೆಯಾಗಿ, ಕಾರ್ಯಾಚರಣೆಯಲ್ಲಿ 20 ಭದ್ರತಾ ಸಿಬ್ಬಂದಿ ಪ್ರಾಣಬಿಟ್ಟಿದ್ದಾರೆ. ಐದು ಮಂದಿ ಗಾಯಗೊಂಡಿದ್ದಾರೆ ಎಂದು ಟಿಟಿಪಿ ಹೇಳಿಕೊಂಡಿದೆ. ಐದು ರೈಫಲ್‌ಗಳು, ರಾಕೆಟ್ ಲಾಂಚರ್, ರಾತ್ರಿ ದೃಷ್ಟಿ ಉಪಕರಣಗಳು ಮತ್ತು ಇತರ ಮಿಲಿಟರಿ ಶಸ್ತ್ರಾಸ್ತ್ರಗಳನ್ನು  ವಶಪಡಿಸಿಕೊಂಡಿದ್ದೇವೆ ಎಂದು ಗುಂಪು ಹೇಳಿಕೊಂಡಿದೆ.

ಇದನ್ನೂ ಓದಿ: ಚೀನಾದ ಮರ್ಯಾದೆ ಮೂರು ಕಾಸಿನ ಹರಾಜಿಗೆ ಇಟ್ಟ ಪಾಕ್.. ತನಗೂ ಸೇಫ್ಔಟ್​, ಆಪ್ತ ಮಿತ್ರನಿಗೂ ಮುಖ ಇಲ್ಲ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment