/newsfirstlive-kannada/media/post_attachments/wp-content/uploads/2024/05/Ramanagara-ATM-Cash.jpg)
ATMನಲ್ಲಿ ಹಣ ಡ್ರಾ ಮಾಡಲು ಹೋದ ಯುವತಿ ಫುಲ್ ಶಾಕ್ ಆದ ಘಟನೆ ರಾಮನಗರದ KSRTC ಬಸ್ ನಿಲ್ದಾಣದಲ್ಲಿ ನಡೆದಿದೆ. ಎಟಿಎಂನಲ್ಲಿ 500 ರೂಪಾಯಿ ನೋಟಿನ ಬದಲು 20 ರೂಪಾಯಿಯ ನೋಟುಗಳು ಡ್ರಾ ಆಗಿದೆ. 500 ರೂಪಾಯಿ ನೋಟಿನ ಮಧ್ಯೆ 20 ರೂಪಾಯಿ ನೋಟುಗಳನ್ನ ನೋಡಿ ಯುವತಿ ದಂಗಾಗಿ ಹೋಗಿದ್ದಾರೆ.
/newsfirstlive-kannada/media/post_attachments/wp-content/uploads/2024/05/Ramnagar-ATM-Cash.jpg)
ರಾಮನಗರ KSRTC ಬಸ್ ನಿಲ್ದಾಣದಲ್ಲಿ ಇಂಡಿಯಾ 1 ಎಟಿಎಂ ಇದೆ. ಈ ಎಟಿಎಂಗೆ ಹೋದ ಯುವತಿ 5 ಸಾವಿರ ರೂಪಾಯಿ ಹಣ ಬಿಡಿಸಿಕೊಳ್ಳಲು ಮುಂದಾಗಿದ್ದಾರೆ. ATMನಲ್ಲಿ 4 ಸಾವಿರ ರೂಪಾಯಿ 500 ನೋಟುಗಳ ಬಂದಿದೆ. ಉಳಿದ 1 ಸಾವಿರಕ್ಕೆ 500 ರೂ. ನೋಟಿನ ಬದಲಿಗೆ 20 ರೂ ನೋಟುಗಳು ಬಂದಿದೆ.
ಇದನ್ನೂ ಓದಿ:ಹೇಳಿದ್ದು ₹1 ಲಕ್ಷ, ಬಿಲ್ ಮಾಡಿದ್ದು ₹30 ಲಕ್ಷ; ಬೆಂಗಳೂರಲ್ಲಿ ವೈದ್ಯರ ಹಣದಾಹಕ್ಕೆ ಬಾಣಂತಿ ಬಲಿ? ಕರುಣಾಜನಕ ಸ್ಟೋರಿ!
ನಾಲ್ಕು ಸಾವಿರ ಹಣದ ಜೊತೆಗೆ ಉಳಿದ 1 ಸಾವಿರ ರೂಪಾಯಿಗೆ ಕೇವಲ ಎರಡು 20 ರೂಪಾಯಿ ಮುಖಬೆಲೆಯ ನೋಟುಗಳು ಬಂದಿದೆ. ಅಂದ್ರೆ 5000 ರೂಪಾಯಿ ಬದಲಿಗೆ 4040 ರೂಪಾಯಿ ಡ್ರಾ ಆಗಿದೆ. 500ರ ಬದಲಿಗೆ 20 ರೂ. ನೋಟ್ ನೋಡಿ ಗ್ರಾಕರು ಶಾಕ್ ಆಗಿದ್ದಾರೆ.
ಎಟಿಎಂನಲ್ಲಿ ಈ ಯಡವಟ್ಟು ಆದ ಬಳಿಕ ಸಾರ್ವಜನಿಕರು ತಮ್ಮ ಎದುರಿಗೆ ATM ಬಾಕ್ಸ್ ಓಪನ್ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ. ಸ್ಥಳಕ್ಕೆ ಐಜೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೂಡಲೇ ಹಣ ಸರಿಪಡಿಸುವಂತೆ ಎಟಿಎಂ ಸಿಬ್ಬಂದಿಗೆ ಪೊಲೀಸರು ಸೂಚನೆ ನೀಡಿದ್ದು, ATM ಸಿಬ್ಬಂದಿಗಳು ಹಣ ವಾಪಸ್ ಮಾಡುವುದಾಗಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us