/newsfirstlive-kannada/media/post_attachments/wp-content/uploads/2025/07/HP-GIRL.jpg)
ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಪ್ರವಾಹದಿಂದ ಆಗುತ್ತಿರುವ ಅನಾಹುತಗಳು ಲೆಕ್ಕಕ್ಕೇ ಸಿಗುತ್ತಿಲ್ಲ. ಹೃದಯ ವಿದ್ರಾವಕ ದುರಂತ ಒಂದರಲ್ಲಿ ಸಿಲುಕಿದ್ದ 20 ವರ್ಷದ ಯುವತಿಯೊಬ್ಬಳು ಪವಾಡಸದೃಶ್ಯ ರೀತಿಯಲ್ಲಿ ಬದುಕಿ ಬಂದಿದ್ದಾಳೆ. ಭೂಕುಸಿತದ ಹೊಡೆತಕ್ಕೆ ಮಣ್ಣಿನಲ್ಲಿ ಮುಚ್ಚಿ ಹೋಗಿದ್ದ ಯುವತಿ ಬರೋಬ್ಬರಿ 5 ಗಂಟೆಗಳ ಕಾಲ ಸಾವು, ಬದುಕಿನ ಹೋರಾಟ ಮಾಡಿ ಗೆದ್ದುಬಂದಿದ್ದಾರೆ ಗಟ್ಟಿಗಿತ್ತಿ!
ಮಣ್ಣಿನಡಿ ಸಿಲುಕಿ ಜೀವಂತ ಸಮಾಧಿಯಾಗಿ ಮತ್ತೆ ಎದ್ದು ಬಂದ ಕತೆಯೇ ರೋಚಕವಾಗಿದೆ.. ಜುಲೈ 1, ಮಂಡಿ ಜಿಲ್ಲೆಯ ಸೆರಾಜ್ ವಿಧಾನಸಭಾ ವ್ಯಾಪ್ತಿಯಲ್ಲಿ (Seraj Assembly constituency) ಭಾರೀ ಮಳೆ ಸುರಿಯುತ್ತಿತ್ತು. ಅದರಂತೆ ಬಗ್ಸ್ಯಾದ್ ಕಣಿಯ (Bagsyad valley) ಶರಣ ಎಂಬ ಕುಗ್ರಾಮದಲ್ಲಿ ದೊಡ್ಡ ಅನಾಹುತವೇ ಸಂಭವಿಸಿಬಿಟ್ಟಿತ್ತು. ಘೋರ ಗಾಳಿ, ಮಳೆಯ ಹೊಡೆತಕ್ಕೆ ಗ್ರಾಮದಲ್ಲಿ ಭೂಕುಸಿತ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ 22 ವರ್ಷದ ತನುಜಾ ಟಾಕೂರ್ (Tuneja Thakur) ಎಂಬ ಯುವತಿ ಸಿಲುಕಿಕೊಂಡಿದ್ದಳು..
ಆಕೆಯೇ ಹೇಳುವಂತೆ..
ಅಂದು ಸೆರಾಜ್ ಕಣಿವೆಯಲ್ಲಿ ನಿರಂತರ ಮಳೆ ಸುರಿಯುತ್ತಿತ್ತು. ಕತ್ತಲೆಯಾಗಿತ್ತು. ಜನ ಕೂಗುವುದು ಕೇಳುತ್ತಿತ್ತು. ಕೆಲವೇ ಸೆಕೆಂಡುಗಳಲ್ಲಿ ನಾನು ನಿಂತಿದ್ದ ಭೂಮಿ ಜಾರಿತು. ನನ್ನ ಸುತ್ತ ಎಲ್ಲವೂ ಕುಸಿದಂತೆ ಅನಿಸಿತು. ಏನು ಆಗ್ತಿದೆ ಅನ್ನುವಷ್ಟರಲ್ಲಿ ನಾನು ಭೂಮಿಯ ಆಳಕ್ಕೆ ಹೋಗಿಬಿಟ್ಟೆ. ನಾನು ಅಲುಗಾಡುತ್ತಿದ್ದೆ. ಆದರೆ ಅದರಿಂದ ಹೊರ ಬರಲು ನನಗೆ ಯಾವುದೇ ಆಯ್ಕೆಗಳಿರಲಿಲ್ಲ. ಬೆಳಕಿಲ್ಲ ಮತ್ತು ಗಾಳಿಯೂ ಬರುತ್ತಿರಲಿಲ್ಲ. ಬರೀ ಕತ್ತಲೆ..
ನನ್ನ ಕಾಲುಗಳನ್ನು ಅಲುಗಾಡದ ರೀತಿಯಲ್ಲಿ ಬಿಗಿಯಾಗಿ ಮಣ್ಣಿನೊಳಗೆ ಹೂತು ಹೋಗಿದ್ದವು. ದೇಹವು ಬಿಗಿಯಾಗುತ್ತ ಹೋಯಿತು. ಕೂಗಿದರೂ ಯಾರಿಗೂ ಕೇಳುತ್ತಿರಲಿಲ್ಲ. ಆದರೆ ನನಗೆ ಕಿರುಚಲು ಸಾಧ್ಯವಾಗಲಿಲ್ಲ. ಆಗಲೇ ನಾನು ಅಂದುಕೊಂಡೆ, ಅಲ್ಲಿಂದ ಜೀವಂತವಾಗಿ ಹೊರಬರಬೇಕು ಅಂತಾ!
ನನ್ನದು ಬದುಕುಳಿಯಲು ಕರುಳು ಹಿಂಡುವ ಹೋರಾಟ. ಜಾರುವಾಗ ನನ್ನ ಕೈಗಳು ಮೇಲಿದ್ದರಿಂದ ಅನುಕೂಲ ಆಯಿತು. ಮಣ್ಣಿನಡಿ ನುಸುಳಿ ಬರುತ್ತಿದ್ದ ಗಾಳಿ, ನನ್ನ ಉಳಿವಿಗೆ ಸಹಕಾರ ನೀಡಿತು. ಎರಡೂ ಕೈಗಳಿಂದ ಆದಷ್ಟು ಮಣ್ಣನ್ನು ಜಾರಿಸುತ್ತಿದ್ದೆ. ಆಗ ಉಸಿರಾಡಲು ಅವಕಾಶ ಆಗುತ್ತಿತ್ತು. ಮತ್ತೆ ಮತ್ತೆ ಮಣ್ಣು ಜಾರಿದಾಗಲೂ ಮಣ್ಣನ್ನು ಸರಿಸಿ ಉಸಿರಾಟಕ್ಕೆ ಅನುಕೂಲ ಮಾಡಿಕೊಳ್ಳುತ್ತಿದ್ದೆ ಎನ್ನುತ್ತಾರೆ.
ಐದು ಗಂಟೆಗಳ ರಕ್ಷಣಾಕಾರ್ಯ
ಅಷ್ಟರಲ್ಲೇ ತುನುಜಾಳ ರಕ್ಷಣಾ ಕಾರ್ಯ ಶುರುವಾಗಿತ್ತು. ಆದರೆ ತುನುಜಾ ಎಲ್ಲಿದ್ದಾಳೆ. ಹೇಗಿದ್ದಾಳೆ ಅನ್ನೋದು ಮಣ್ಣು ಅಗೆಯುತ್ತಿರೋರಿಗೆ ಗೊತ್ತಾಗಿಲ್ಲ. ಇತ್ತ, ಆಕೆಯ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಅವಳ ಹೆಸರನ್ನು ಕರೆಯುತ್ತಾ ಹತಾಶವಾಗಿ ಹುಡುಕುತ್ತಿದ್ದರು. ಅವಳು ಜೀವಂತವಾಗಿದ್ದಾಳೆ, ಉಸಿರಾಟ ಇನ್ನೂ ನಿಂತಿಲ್ಲ. ಮತ್ತೆ ಬದುಕಿ ಬರುತ್ತಾಳೆ ಅನ್ನೋ ಭರವಸೆ ಯಾರಿಗೂ ಇರಲಿಲ್ಲ. ಹೀಗೆ ಐದು ಗಂಟೆಗಳ ಕಾಲ ರಕ್ಷಣಾ ಕಾರ್ಯ ನಡೆಯಿತು.
ಇದನ್ನೂ ಓದಿ: ಹೆಣ್ಮಕ್ಕಳೇ ಹುಷಾರ್, ಬೆಂಗಳೂರಲ್ಲಿ ಇಂಥವರೂ ಇರುತ್ತಾರೆ ಎಚ್ಚರ..! ಅಸಲಿಗೆ ಈತ ಮಾಡಿದ್ದೇನು..?
ಅವರು ನನಗಾಗಿ ಹುಡುಕಾಡುತ್ತಿದ್ದರು. ನಿಧಾನವಾಗಿ ಮೇಲಿಂದ ಅವರು ಕೂಗೋದು ಕೇಳಿಸಲು ಶುರುವಾಯಿತು. ಅದರಿಂದ ನನಗೆ ಮತ್ತಷ್ಟು ಧೈರ್ಯ ಬಂತು. ನಂತರ ನನ್ನನು ಸುರಕ್ಷಿತವಾಗಿ ಹೊರ ತೆಗೆದರು ಅಂತಾ ತನುಜಾ ಹೇಳಿದ್ದಾಳೆ. ಐದು ಗಂಟೆಗಳ ಕಾಲ ಮಣ್ಣಿನಡಿ ಸಿಲುಕಿ ಸಾವನ್ನು ಗೆದ್ದುಬಂದ ತನುಜಾಳ ರೋಚಕ ಸ್ಟೋರಿ ದೇಶದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಹಿಮಾಚಲ ಪ್ರದೇಶದ ವಿರೋಧ ಪಕ್ಷದ ನಾಯಕ ಜೈ ರಾಮ್ ಠಾಕೂರ್ ಹಾಗೂ ಉಪಮುಖ್ಯಮಂತ್ರಿ ಮುಕೇಶ್ ಅಗ್ನಿಹೋತ್ರಿ ಅವರು ತನುಜಾರನ್ನು ಭೇಟಿ ಮಾಡಿದ್ದಾರೆ. ಅವರ ಸ್ಫೂರ್ತಿದಾಯಕ ಕತೆಯನ್ನು ಕೇಳಿ ಸೆಲ್ಯೂಟ್ ಹೊಡೆದಿದ್ದಾರೆ. ಅಲ್ಲದೇ ಭೂಕುಸಿತದಿಂದ ಆಗಿರುವ ಹಾನಿಯ ಎಲ್ಲಾ ವೆಚ್ಚವನ್ನು ಭರಿಸುವ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: Big news: ಡಿ.ಕೆ.ಶಿವಕುಮಾರ್ಗೆ ಹೆಚ್ಚು ಶಾಸಕರ ಬೆಂಬಲ ಇಲ್ಲ, 5 ವರ್ಷ ನಾನೇ ಮುಖ್ಯಮಂತ್ರಿ – ಸಿದ್ದರಾಮಯ್ಯ
बेटी के हौसले को सलाम!
सराज प्रवास के दौरान भारी बारिश के कारण हुए जानमाल का नुकसान देखकर मन बहुत दुःखी है।
लेकिन ऐसी आपदा में बगस्याड़ के शरण गांव की बेटी दीक्षा ने अपनी हिम्मत का परिचय देते हुए भूस्खलन की चपेट में आने के बावजूद खुद को मलबे से सुरक्षित निकाला, जोकि प्रेरणा से… pic.twitter.com/kTYO5li38O— Jairam Thakur (@jairamthakurbjp) July 2, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ