newsfirstkannada.com

ವೈದ್ಯರ ಎಡವಟ್ಟು; ಬರೋಬ್ಬರಿ 6 ವರ್ಷ ಕೋಮಾದಲ್ಲಿದ್ದ ಬಾಲಕ; ಆಮೇಲೇನಾಯ್ತು?

Share :

Published January 12, 2024 at 10:19pm

  ಒಂದಲ್ಲ ಎರಡಲ್ಲ ಬರೋಬ್ಬರಿ 6 ವರ್ಷ ಬಾಲಕ ಕೋಮಾಗೆ ಹೋಗಿದ್ದ

  ಕಬ್ಬಡ್ಡಿ, ಖೋ ಖೋ, ಕರಾಟೆ ಕ್ರೀಡೆಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದ ಬಾಲಕ

  ಮಗನ ಮೇಲೆ ಆಸೆ ಇಟ್ಟುಕೊಂಡಿದ್ದ ಪೋಷಕರ ಕನಸುಗಳು ನುಚ್ಚುನೂರು

ವೈದ್ಯರು ಮಾಡಿದ ಎಡವಟ್ಟಿನಿಂದ ಪುಟ್ಟ ಬಾಲಕ ಕೋಮಾಗೆ ಹೋಗಿದ್ದ. ಒಂದಲ್ಲ ಎರಡಲ್ಲ ಆರು ವರ್ಷ ನರಕ ಯಾತನೆ ಅನುಭವಿಸಿದ ಹುಡುಗ ಈಗ ಕೊನೆಯುಸಿರುಳೆದಿದ್ದಾನೆ. ಆದ್ರೆ ಹುಡುಗನ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದ ಕುಟುಂಬಕ್ಕೆ ನೆರವಾಗ್ತೀವಿ ಎಂದಿದ್ದ ಆಸ್ಪತ್ರೆ ಕೈ ಎತ್ತಿದೆ. ಇದೀಗ ಮಗನನ್ನ ಕಳೆದುಕೊಂಡು, ಹಣವು ಇಲ್ಲದ ಈ ಕುಟುಂಬ ಅಕ್ಷರಶಃ ಕಂಗಲಾಗಿದೆ. ಬಾಲ್ಯ ಅನ್ನೋದು ಪ್ರತಿಯೊಬ್ಬರು ಜೀವನದ ಬಂಗಾರದ ಕ್ಷಣಗಳು. ಆದ್ರೆ ಈ ಯುವಕನ ಪಾಲಿಗೆ ಅಂತ ಬಂಗಾರದ ಕ್ಷಣಗಳನ್ನ ಅನುಭವಿಸುವ ಕಾಲ ಕೂಡಿ ಬರಲೇ ಇಲ್ಲ. ಆಟ ಆಡ್ಕೊಂಡು ಜಾಲಿ ಮಾಡ್ಕೊಂಡು ಇರಬೇಕಾಗಿದ್ದ ಹುಡುಗ ಆಸ್ಪತ್ರೆಯಲ್ಲಿ ನರಳಾಟ ಅನುಭಿಸಿದ್ದ ಕೊನೆಗೆ ಪ್ರಾಣವೂ ಬಿಟ್ಟಿದ್ದಾನೆ.

ಆಸ್ಪತ್ರೆ ಎಡವಟ್ಟು ಕೋಮಾದಲ್ಲೇ ನರಳಿ ಪ್ರಾಣ ಬಿಟ್ಟ

ವಿಘ್ನೇಶ್ ಓದುವುದರಲ್ಲಿ ಮಾತ್ರವಲ್ಲ. ಸ್ಫೋರ್ಟ್ಸ್​ ಕರಾಟೆಯಲ್ಲಿ ನಿಪುಣನಾಗಿದ್ದ. ಆದ್ರೆ ದುರದೃಷ್ಟವಶಾತ್ 16ನೇ ವಯಸ್ಸಲ್ಲಿ ಈ ಬಾಲಕನಿಗೆ ಅರ್ನಿಯಾ ಸಮಸ್ಯೆಯಾಗಿದೆ. ಅಂದ್ರೆ 2017ರ ಏಪ್ರಿಲ್​ನಲ್ಲಿ ವಿಘ್ನೇಶ್ ಈ ಸಮಸ್ಯೆಗೆ ತುತ್ತಾಗಿದ್ದ. ಹೀಗಾಗಿ ಬಾಲಕನನ್ನ ಸುಬ್ರಹ್ಮಣ್ಯ ನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿರುತ್ತೆ. ಆಸ್ಪತ್ರೆಯವರು ಏನು ತೊಂದರೆಯಾಗಲ್ಲ, ಅರ್ಧ ಘಂಟೆ ಆಪರೇಷನ್ ಅಂತ ಹೇಳಿದ್ರಂತೆ. ಶಸ್ತ್ರ ಚಿಕಿತ್ಸೆ ಮಾಡುವಾಗ ಒಂದಲ್ಲ ಎರಡಲ್ಲ ಮೂರು ಬಾರಿ ಅನೇಸ್ತಿಶಿಯಾ ಕೊಟ್ಟಿದ್ದಾರಂತೆ. ಲೋ ಬಿಪಿ, ಹೈ ಬಿಪಿ ಆಗಿ ಪಿಟ್ಸ್ ಬಂದಿದೆ ಅಂತ ಆಸ್ಪತ್ರೆಯವರು ಹೆದರಿಸಿದ್ರಂತೆ. ಬಳಿಕ ಕುಟುಂಬದವರು ಮಗನನ್ನ ತಿಲಕ ನಗರದ ಆಸ್ಪತ್ರೆಗೆ ದಾಖಲಿಸಿದಾಗ ವಿಘ್ನೇಶ್​​ಗೆ ಕಾರ್ಡಿಯಾಕ್ ಅರೆಸ್ಟ್ ಆಗಿದ್ದು ಗೊತ್ತಾಗಿದೆ. ಬಳಿಕ ವಿಘ್ನೇಶ್ ಕೋಮಾಗೆ ಹೋಗಿಬಿಟ್ಟಿದ್ದಾನೆ. ಬರೋಬ್ಬರಿ 6 ವರ್ಷಗಳ ಕಾಲ ವಿಘ್ನೇಶ ಕೋಮಾದಲ್ಲೇ ಇದ್ದ.

2017ರಲ್ಲಿ ಕೋಮಾಗೆ ಹೋಗಿದ್ದ ವಿಘ್ನೇಶ ವಾಪಸ್ ಮೇಲೇಳಲೇ ಇಲ್ಲ. ಆಗ ಆಸ್ಪತ್ರೆ ವಿರುದ್ಧ ಕುಟುಂಬದವರು ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ವೇಳೆ ಹುಡುಗನ ಚಿಕಿತ್ಸೆಗಾಗಿ ಖರ್ಚು ಮಾಡಿದ್ದು 19 ಲಕ್ಷದಲ್ಲಿ 5 ಲಕ್ಷವನ್ನು ಆಸ್ಪತ್ರೆಯವರು ಕೊಟ್ಟು ಉಳಿದ ಹಣವನ್ನು ಇನ್ಸೂರೆನ್ಸ್​ನಿಂದ ಪಡೆದುಕೊಳ್ಳಿವಂತೆ ಹೇಳಿದ್ರಂತೆ. ದುರಂತ ಏನಂದ್ರೆ 2017 ರಲ್ಲಿ ಕೋಮಾಗೆ ಹೋಗಿದ್ದ ವಿಘ್ನೇಶ್ ಇದೇ ಜನವರಿ 3 ರಂದು ಪ್ರಾಣ ಬಿಟ್ಟಿದ್ದಾನೆ. ಬರೋಬ್ಬರಿ 6 ವರ್ಷಗಳ ಕಾಲ ನರಳಿ ನರಳಿ ವಿಘ್ನೇಶ ಕೋಮಾದಲ್ಲೇ ಅಸುನೀಗಿದ್ದಾನೆ. ಕೇವಲ 20 ವರ್ಷಕ್ಕೆ ಆಸ್ಪತ್ರೆಯವರು ಮಾಡಿದ ಎಡವಟ್ಟಿನಿಂದ ವಿಘ್ನೇಶ ಪ್ರಾಣ ಹೋಗಿದೆ. ಈಗ ಇದ್ದೊಬ್ಬ ಮಗನನ್ನ ಕಳೆದುಕೊಂಡ ಕುಟುಂಬ ಅಕ್ಷರಶಃ ಕಂಗಲಾಗಿ ಹೋಗಿದೆ.

20 ವರ್ಷಕ್ಕೆ ಪ್ರಾಣ ಬಿಟ್ಟ ಮಗ.. ಹಣವೂ ಇಲ್ಲ.. ಮಗನೂ ಇಲ್ಲ!

ದುರಂತ ಏನಂದ್ರೆ 2017 ರಿಂದ ವಿಘ್ನೇಶ್ ಚಿಕಿತ್ಸೆಗಾಗಿ ಕುಟುಂಬ ಏನಿಲ್ಲ ಅಂದ್ರೂ ಬರೋಬ್ಬರಿ 1 ಕೋಟಿಗೂ ಅಧಿಕ ಹಣ ಖರ್ಚು ಮಾಡಿದೆ. ಅಪ್ಪ ಅಮ್ಮ ಇಬ್ಬರೂ ಮಗನನ್ನು ಉಳಿಸಬೇಕು ಅಂತ ಸಾಲ ಸೋಲ ಮಾಡಿ ಇದ್ದ ಹಣವನ್ನೆಲ್ಲ ಖರ್ಚು ಮಾಡಿಕೊಂಡಿದ್ದಾರೆ. ಮಗನ ಸಂಕಷ್ಟವನ್ನು ಕಣ್ಣಿಂದ ನೋಡಲಾಗದೇ ಮನಸ್ಸಲ್ಲೇ ಸಂಕಟ ಪಟ್ಟು ಮಗನ ಉಳಿವಿಗಾಗಿ ಏನೆಲ್ಲ ಮಾಡ್ಬೇಕು ಮಾಡಿದ್ದಾರೆ. ಆದ್ರೆ ಅಪ್ಪ ಅಪ್ಪನ ಪ್ರಯತ್ನ ವಿಫಲವಾಗಿದೆ. ವಿಧಿ ವಿಘ್ನೇಶ ಉಸಿರನ್ನ ಕಸಿದುಕೊಂಡು ಬಿಟ್ಟಿದೆ. ಜನವರಿ 3 ರಂದು ವಿಘ್ನೇಶ ಬಾರದ ಲೋಕಕ್ಕೆ ಹೋಗಿಬಿಟ್ಟಿದ್ದ. ಇದೀಗ ವಿಘ್ನೇಶ ಕುಟುಂಬ ಆ ಕಡೆ ಹಣವೂ ಇಲ್ಲ. ಈ ಕಡೆ ಮಗನೂ ಇಲ್ಲದೇ ಕಂಗಾಲಾಗಿ ಹೋಗಿದೆ.

ಅಸಲಿಗೆ ವಿಘ್ನೇಶ ಒಬ್ಬ ಒಳ್ಳೆ ಸ್ಪೋರ್ಟ್ಸ್ ಮ್ಯಾನ್. ಕಬ್ಬಡ್ಡಿ, ಖೋ ಖೋ, ಕರಾಟೆ ಕ್ರೀಡೆಗಳಲ್ಲಿ ಪ್ರಶಸ್ತಿ ಪತ್ರ ಕೂಡ ಪಡೆದಿದ್ದ. ಆದ್ರೀಗ ಆಸ್ಪತ್ರೆಯವರು ಮಾಡಿದ್ದ ಒಂದು ಎಡವಟ್ಟಿನಿಂದ ಇನ್ನೂ ಬದುಕಿನ ಪುಟವನ್ನೆ ನೋಟದ ಹುಡುಗ ಅರ್ಧದಲ್ಲೇ ಜೀವನಯಾತ್ರೆ ಮುಗಿಸಿದ್ದಾನೆ. ಇದ್ದೊಬ್ಬ ಮಗನನ್ನ ಕಳ್ಕೊಂಡು ಸಂಕಟ ಅನುಭವಿಸ್ತಿರುವ ವಿಘ್ನೇಶ ಕುಟುಂಬ, ಇನ್ನುಂದೆ ಯಾರಿಗೂ ಈ ರೀತಿ ಅನ್ಯಾಯ ಆಗಬಾರದು. ವಿಘ್ನೇಶಗೆ ಚಿಕಿತ್ಸೆ ಕೊಟ್ಟ ಆಸ್ಪತ್ರೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಅಂತ ಆಕ್ರೋಶ ಹೊರ ಹಾಕಿದ್ದಾರೆ. ಜೀವನದಲ್ಲಿ ಏನಾದ್ರೂ ಮಾಡ್ಬೇಕು ಅಂತ ಕನಸು ಕಟ್ಟಕೊಂಡಿದ್ದ ಹುಡುಗನ ಪ್ರಾಣ ಆಸ್ಪತ್ರೆಯವರ ನಿರ್ಲಕ್ಷಕ್ಕೆ ಬಲಿಯಾಗಿದೆ. ಇನ್ನೊಂದೆಡ ಮಗನ ಬಗ್ಗೆ ನೂರಾರು ಆಸೆ ಇಟ್ಕೊಂಡಿದ್ದ ಅಪ್ಪ ಅಮ್ಮನಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಅದೇನೆ ಇರಲಿ ಇನ್ನಾದರೂ ಇಂಥಾ ಆಸ್ಪತ್ರೆ ಮತ್ತು ವೈದ್ಯರ ವಿರುದ್ಧ ಕಠಿಣ ಕ್ರಮ ಆಗಲೇಬೇಕು. ಇಲ್ಲವಾದ್ರೆ ಇನ್ನೂ ಅದೆಷ್ಟು ಅಮಾಯಕ ಜೀವಗಳು ಕಿಲ್ಲರ್​ ಡಾಕ್ಟರ್​ ಕೃತ್ಯಕ್ಕೆ ಬಲಿಯಾಗುತ್ತೋ ಗೊತ್ತಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೈದ್ಯರ ಎಡವಟ್ಟು; ಬರೋಬ್ಬರಿ 6 ವರ್ಷ ಕೋಮಾದಲ್ಲಿದ್ದ ಬಾಲಕ; ಆಮೇಲೇನಾಯ್ತು?

https://newsfirstlive.com/wp-content/uploads/2024/01/boy-death.jpg

Load More