Advertisment

₹200 ಕೋಟಿ ಪ್ರೈವೆಟ್ ಜೆಟ್​.. ಬೆಂಗಳೂರಲ್ಲಿ ಪೂಜೆಗೆ ಬಂದಿದ್ದು ಅಂಬಾನಿ ಮನೆಯ ಖ್ಯಾತ ಪೂಜಾರಿ!

author-image
admin
Updated On
₹200 ಕೋಟಿ ಪ್ರೈವೆಟ್ ಜೆಟ್​.. ಬೆಂಗಳೂರಲ್ಲಿ ಪೂಜೆಗೆ ಬಂದಿದ್ದು ಅಂಬಾನಿ ಮನೆಯ ಖ್ಯಾತ ಪೂಜಾರಿ!
Advertisment
  • G280 ಹೆಸರಿನ 200 ಕೋಟಿಯ ಪ್ರೈವೆಟ್ ಜೆಟ್‌ಗೆ ವಿಶೇಷ ಪೂಜೆ
  • ದೇಶದ ಕುಬೇರ ಮುಖೇಶ್ ಅಂಬಾನಿ ಮನೆಯ ಪೂಜಾರಿ ಇವರು
  • ಖರೀದಿ ಮಾಡಿದ್ದ ಜೆಟ್‌ಗೆ ಪೂಜೆ ಮಾಡಿಸಿದ ಬೆಂಗಳೂರು ಉದ್ಯಮಿ

ನಾವೆಲ್ಲಾ ಹೊಸ ಬೈಕ್, ಕಾರು ತೆಗೆದುಕೊಂಡಾಗ ಪೂಜೆ ಮಾಡಿಸೋದನ್ನ ನೋಡಿದ್ದೇವೆ. ಆದರೆ ವೈರಲ್ ಆಗಿರೋ ಈ ಪೂಜೆ ವಿಡಿಯೋ ಎಲ್ಲರಿಗೂ ಸರ್​ಪ್ರೈಸ್ ನೀಡಿದೆ.

Advertisment

ಇದು ಯಾವುದೋ ಕಾರು, ಬೈಕ್​ ಪೂಜೆಯಲ್ಲ ಇದೊಂದು ಪ್ರೈವೆಟ್ ಜೆಟ್ ಪೂಜೆ. ಇದು ಸಾಮಾನ್ಯ ಪ್ರೈವೆಟ್ ಜೆಟ್ ಕೂಡ ಅಲ್ಲ. G280 ಹೆಸರಿನ 200 ಕೋಟಿಯ ಪ್ರೈವೆಟ್ ಜೆಟ್. ಇದೇ ಪ್ರೈವೆಟ್​ ಜೆಟ್​ಗೆ ಮಾಡಿರೋ ಪೂಜೆಯ ವಿಡಿಯೋ ಈಗ ಇಂಟರ್​ನೆಟ್​ನಲ್ಲಿ ಹಲ್​​ಚಲ್ ಎಬ್ಬಿಸಿದೆ. ಅರೆ ಅದ್ರಲ್ಲೇನಿದೆ ವಿಶೇಷ. ಎಲ್ಲರೂ ಪೂಜೆ ಮಾಡ್ತಾರೆ ಅಲ್ವಾ ಅಂತ ನೀವು ಅಂದುಕೊಳ್ಳಬಹುದು. ಆದ್ರೆ ಇಲ್ಲಿ ಪೂಜೆಗಿಂತ ಪೂಜೆ ಮಾಡಿದ ಪೂಜಾರಿ ಬ್ಯಾಗ್ರೌಂಡ್ ಟ್ರೆಂಡ್​​ನಲ್ಲಿದೆ.

publive-image

ಈ ಜೆಟ್ ಪೂಜೆ ಮಾಡಿದ್ದು, ಚಂದ್ರಶೇಖರ್ ಶರ್ಮಾ. ಇವ್ರು ಸಾಮಾನ್ಯ ಪೂಜಾರಿ ಅಲ್ಲ. ದೇಶದ ಕುಬೇರ ಮುಖೇಶ್ ಅಂಬಾನಿ ಮನೆಯ ಪೂಜಾರಿ ಇವರು. ಇದೇ ಪೂಜಾರಿಯನ್ನ ಬೆಂಗಳೂರಿನ ಉದ್ಯಮಿಯೊಬ್ಬರು ಕರೆಸಿ ತಾವು ಖರೀದಿ ಮಾಡಿದ್ದ ಹೊಸ ಜೆಟ್ ಪೂಜೆ ಮಾಡಿಸಿದ್ದಾರೆ. ಖುದ್ದು ಅಂಬಾನಿ ಮನೆಯ ಪೂಜಾರಿಯೇ ಈ ವಿಡಿಯೋವನ್ನ ಶೇರ್ ಮಾಡಿದ್ದಾರೆ. ಇನ್​ಸ್ಟಾದಲ್ಲಿ ಫೋಟೋ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಬರೋಬ್ಬರಿ 30 ಕೆಜಿ.. ನೀತಾ ಅಂಬಾನಿ ಮೆಚ್ಚಿದ ಈ ಐಷಾರಾಮಿ ಕೇಕ್‌ನ ವಿಶೇಷತೆಗಳು ಒಂದೆರಡಲ್ಲ! ಏನು ಗೊತ್ತಾ? 

Advertisment

ಒಂದ್ಕಡೆ ಪೂಜೆ ವೈರಲ್ ಆಗಿದ್ರೂ ಈ ಜೆಟ್ ಓನರ್​ ಯಾರು? ಅನ್ನೋದು ಮಾತ್ರ ನಿಗೂಢವಾಗಿಯೇ ಉಳಿದಿದೆ. ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಏನಂದ್ರೆ ಈ ಜೆಟ್​​ ಅನ್ನು ಕ್ಯಾಲಿಫೋರ್ನಿಯಾದ ಎಂಪೈರ್ ಎವಿಯೇಷನ್​ ರಿಜಿಸ್ಟರ್ ಆಗಿದೆ.

publive-image

G280 ಜೆಟ್​​ ಸ್ಪೆಷಾಲಿಟಿ ಏನು?
ಗಲ್ಫಸ್ಟ್ರೀಮ್​ 280 ಹೈ ಎಂಡ್ ಪ್ರೈವೆಟ್ ಜೆಟ್​ ಇದು. ಈ ಜೆಟ್​ಲ್ಲಿ 10 ಜನ ಕೂರಬಹುದು. ಒಂದು ಜೆಟ್​ಗೆ ಕಮ್ಮಿ ಅಂದ್ರೂ 150 ಕೋಟಿ ಬೇಕು. ಗಲ್ಫಸ್ಟ್ರೀಮ್​ 280 ಜೆಟ್​ನಲ್ಲಿ ಹನಿವೆಲ್​ HTF7250G turbofan ಇಂಜಿನ್​ಗಳಿವೆ.. ಪ್ರತಿ ಇಂಜಿನ್​ 33 ಕಿಲೋನ್ಯೂಟನ್‌ಗಳಷ್ಟು ಒತ್ತಡ ಇದ್ದು, ವರ್ಲ್ಡ್​ ಕ್ಲಾಸ್​ ಜೆಟ್​ ಕೊಡುವಷ್ಟು ಬಲ ಮತ್ತು ಸ್ಪೀಡ್ ಕೊಡುತ್ತೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment