/newsfirstlive-kannada/media/post_attachments/wp-content/uploads/2025/01/THAILAND-PM.jpg)
ಥೈಲ್ಯಾಂಡ್​ನ ಪ್ರಧಾನ ಮಂತ್ರಿ ಪೇಟೊಂಗ್ಟಾರನ್ ಶಿನವತ್ರಾ ಜಗತ್ತಿನ ಐಷಾರಾಮಿ ಜೀವನ ನಡೆಸುವ ಪ್ರಧಾನಮಂತ್ರಿಯಲ್ಲೊಬ್ಬರು. ಅವರ ಶ್ರೀಮಂತಿಕೆಗೆ ಅವರು ಬಳಸುವ ವಾಚ್​ಗಳು ಹಾಗೂ ಅವರ ಹ್ಯಾಂಡ್​ಬ್ಯಾಗ್​ಗಳು ಸದಾ ಸಾಕ್ಷಿ ನುಡಿಯುತ್ತವೆ. ಇತ್ತೀಗಷ್ಟೇ ಅವರು ತಮ್ಮ ಬಳಿ ಇರುವ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಅವರ ಪಕ್ಷವು ಹೇಳುವ ಪ್ರಕಾರ ಅವರ ಬಳಿ ಸುಮಾರು 3,400 ಕೋಟಿಗೂ ಅಧಿಕ ಆಸ್ತಿಯಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:2025ರಲ್ಲಿ ಟೇಕ್ ಆಫ್ ಆಗಿ 2024ರಲ್ಲಿ ಲ್ಯಾಂಡ್ ಆದ ವಿಮಾನ.. ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ!
ಸದ್ಯ ಅವರ ಬಳಿ ಒಟ್ಟು 200ಕ್ಕೂ ಹೆಚ್ಚು ಡಿಸೈನ್ ಇರುವ ಹ್ಯಾಂಡ್​ಬ್ಯಾಗ್​ಗಳಿವೆ. ಅವುಗಳ ಮೌಲ್ಯವೇ ಸುಮಾರು 17 ಕೋಟಿ ರೂಪಾಯಿಗೂ ಅಧಿಕ ಎಂದು ಹೇಳಲಾಗುತ್ತಿದೆ ಇನ್ನು ಅವರ ಬಳಿ ಇರುವ 75 ಐಷಾರಾಮಿ ವಾಚ್​ಗಳ ಮೌಲ್ಯ 43 ಕೋಟಿ ರೂಪಾಯಿಗೂ ಅಧಿಕ ಬೆಲೆ ಬಾಳುತ್ತವೆ ಎಂದು ಹೇಳಲಾಗಿದೆ.
/newsfirstlive-kannada/media/post_attachments/wp-content/uploads/2025/01/THAILAND-PM-1.jpg)
ಥೈಲ್ಯಾಂಡ್​ನ ಮಾಜಿ ಪ್ರಧಾನಿಯಾದ ಥಕ್ಸಿನ್ ಶಿನವಾತ್ರ ಅವರ ಕಿರಿಯ ಪುತ್ರಿಯಾದ ಪೇಟೊಂಗ್ಟಾರನ್ ಕಳೆದ ಸೆಪ್ಟಂಬರ್​ನಲ್ಲಿ ಪ್ರಧಾನಿಯಾಗಿ ಅಧಿಕಾರವಹಿಸಿದಕೊಂಡರು. ಇವರು ಇತ್ತೀಚೆಗೆ ಭ್ರಷ್ಟಾಚಾರ ನಿಗ್ರಹ ಮಂಡಳಿಯ ಎದುರು ತಮ್ಮ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2025/01/THAILAND-PM-2.jpg)
ಅವರ ಬಳಿ ಥೈಲ್ಯಾಂಡ್ ಕರೆನ್ಸಿಯ ಒಟ್ಟು 13.8 ಬಿಲಿಯನ್ ಬಾಹ್ತ್ ಅಂದ್ರೆ ಭಾರತೀಯ ರೂಪಾಯಿಗಳಲ್ಲಿ 29 ಸಾವಿರ ಕೋಟಿ ರೂಪಾಯಿಯಷ್ಟು ಆಸ್ತಿಯಿದೆ ಎಂದು ಘೋಷಿಸಿಕೊಂಡಿದ್ದು. ಎಲ್ಲ ದಾಖಲೆಗಳನ್ನು ಮಾಧ್ಯಮ ವೆಬ್​ಸೈಟ್​ನಲ್ಲಿ ಕೂಡ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ:ಚೀನಾ ಮತ್ತೆ ಪ್ರಕ್ಷುಬದ್ಧ! ಮತ್ತೊಂದು ಹೊಸ ವೈರಸ್ ಸೃಷ್ಟಿ.. ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ..
ಘೋಷಿಸಿಕೊಂಡಿರುವ ಆಸ್ತಿಯಲ್ಲಿ 75 ಐಷಾರಾಮಿ ವಾಚ್​ಗಳು, 39 ಟೈಮ್​ಪೀಸ್​​ಗಳು ಹಾಗೂ 217 ಐಷಾರಾಮಿ ಬ್ಯಾಗ್​ಗಳು ತಮ್ಮ ಬಳಿ ಇವೆ ಎಂದು ಹೇಳಿಕೊಂಡಿದ್ದಾರೆ. ಅವರ ತಂದೆ ಥಸ್ಕಿನ್ ಬಳಿಯೂ ಕೂಡ 21 ಸಾವಿರ ಕೋಟಿಗೂ ಆಧಿಕ ಆಸ್ತಿಯಿರುವುದನ್ನು ಹೇಳಿಕೊಂಡಿದ್ದಾರೆ. ಅವರು ಮ್ಯಾಂಚೆಸ್ಟರ್​ಸಿಟಿ ಫುಟ್​ಬಾಲ್​ ಕ್ಲಬ್​ನ ಮಾಲೀಕರು ಕೂಡ ಹೌದು. ಈಗ ಮಗಳು ಕೂಡ ಅಪ್ಪನ ಆಸ್ತಿಯನ್ನು ಮೌಲ್ಯವನ್ನು ಮೀರಿಸುವಷ್ಟು ಆಸ್ತಿ ಗಳಿಸಿದ್ದಾರೆ. ಥೈಲ್ಯಾಂಡ್​ನ ಅತ್ಯಂತ ಟಾಪ್​ 10​ ಶ್ರೀಮಂತರ ಪಟ್ಟಿಯಲ್ಲಿ ತಂದೆ ಮಗಳು ಹೆಸರು ಕೂಡ ಸೇರಿಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us