ಹಾಸನದಲ್ಲೂ ಇಂದು ಭೂಕುಸಿತ.. 200 ಮೀಟರ್ ದೂರ ಕೊಚ್ಚಿ ಹೋದ ರಸ್ತೆ; ಫೋಟೋಗಳು ಇಲ್ಲಿವೆ

author-image
admin
Updated On
ಹಾಸನದಲ್ಲೂ ಇಂದು ಭೂಕುಸಿತ.. 200 ಮೀಟರ್ ದೂರ ಕೊಚ್ಚಿ ಹೋದ ರಸ್ತೆ; ಫೋಟೋಗಳು ಇಲ್ಲಿವೆ
Advertisment
  • ಕರ್ನಾಟಕದ ಹಲವೆಡೆ ಮುಂದುವರಿದ ಮಳೆರಾಯನ ಅಬ್ಬರ
  • ಸಕಲೇಶಪುರ ತಾಲೂಕಿನ ಕುಂಬರಡಿ ಸಮೀಪದಲ್ಲಿ ಭೂಕುಸಿತ
  • ರಸ್ತೆ ಕೊಚ್ಚಿ ಹೋಗಿರೋದ್ರಿಂದ ಹತ್ತಾರು ಗ್ರಾಮಗಳ ಸಂಪರ್ಕ ಬಂದ್!

ಹಾಸನ: ಕೇರಳದಲ್ಲಿ ಸಂಭವಿಸಿದ ಭೂಕುಸಿತ ನೂರಾರು ಜನರನ್ನು ಬಲಿ ಪಡೆಯುವ ಆತಂಕ ಸೃಷ್ಟಿಸಿದೆ. ಪ್ರಕೃತಿ ವಿಕೋಪ ಭಯ ಬೀಳಿಸಿರುವ ಮಧ್ಯೆ ಕರ್ನಾಟಕದಲ್ಲೂ ಮಳೆರಾಯನ ಅಬ್ಬರ ಜೋರಾಗಿದೆ. ಹಾಸನದ ಸಕಲೇಶಪುರದಲ್ಲಿ ಬೃಹತ್ ಪ್ರಮಾಣದಲ್ಲಿ ಭೂ ಕುಸಿತ ಸಂಭವಿಸಿದೆ.

ಇದನ್ನೂ ಓದಿ: 25 ಕಿ.ಮೀ ದೂರದಲ್ಲಿ ಪತ್ತೆಯಾದ ಶವಗಳು.. ಕೇರಳದಲ್ಲಿ ಘೋರ ದುರಂತ; ಪ್ರತ್ಯಕ್ಷದರ್ಶಿ ಹೇಳಿದ್ದೇನು? 

publive-image

ಸಕಲೇಶಪುರ ತಾಲೂಕಿನ ಕುಂಬರಡಿ ಸಮೀಪದಲ್ಲಿ ಸಂಭವಿಸಿದ ಭೂಕುಸಿತಕ್ಕೆ ರಸ್ತೆಯ ಸಮೇತ ಭೂಮಿ ಕೊಚ್ಚಿ ಹೋಗಿದೆ. ಕುಂಬರಡಿ ಹಾಗೂ ಹಾರ್ಲೇ ಎಸ್ಟೇಟ್ ಮಧ್ಯೆ ಈ ಭೂಕುಸಿತ ಸಂಭವಿಸಿದೆ.

publive-image

ಸಕಲೇಶಪುರದ ಭೂಕುಸಿತದಲ್ಲಿ 200 ಮೀಟರ್‌ಗೂ ಹೆಚ್ಚು ದೂರು ರಸ್ತೆ ಕೊಚ್ಚಿ ಹೋಗಿದೆ. ಈ ರಸ್ತೆ ಕೊಚ್ಚಿ ಹೋಗಿರೋದ್ರಿಂದ ಹತ್ತಾರು ಗ್ರಾಮಗಳ ಸಂಪರ್ಕ ಬಂದ್ ಆಗಿದೆ.

ಇದನ್ನೂ ಓದಿ: ಸಾವಿನ ದವಡೆಯಲ್ಲಿ 300 ಜನ; ಮುಂಡಕೈನಲ್ಲಿ ಸಂಜೆ 5 ಗಂಟೆಗೇ ಕತ್ತಲು ಆವರಿಸುತ್ತೆ.. ಆತಂಕ ವ್ಯಕ್ತಪಡಿಸಿದ ಶಾಸಕ 

publive-image

ಭೂಕುಸಿತದ ರಸ್ತೆಯ ಪಕ್ಕದಲ್ಲಿ ಎತ್ತಿನಹೊಳೆ ಕಾಮಗಾರಿಗಾಗಿ ಕೆಲಸ ಮಾಡಲಾಗಿತ್ತು. ಎತ್ತಿನಹೊಳೆ ಅವೈಜ್ಞಾನಿಕ ಕಾಮಗಾರಿಯಿಂದಲೇ ಈ ಭೂಕುಸಿತ ಸಂಭವಿಸಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment