/newsfirstlive-kannada/media/post_attachments/wp-content/uploads/2025/07/Ring-road-Shubha-case-3.jpg)
ರಿಂಗ್ ರೋಡ್ ಶುಭಾ (Ring road Shubha) ಅಂಡ್ ಟೀಮ್ ನಿಂದ ಇಂಜಿನಿಯರ್ ಗೀರೀಶ್ ಹತ್ಯೆ ಕೇಸ್​​ನ ತೀರ್ಪು ಅನ್ನು ಸುಪ್ರೀಂಕೋರ್ಟ್ ಪ್ರಕಟಿಸಿದೆ. ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಕಾಯಂಗೊಳಿಸಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಹೈಕೋರ್ಟ್ ನೀಡಿದ್ದ ತೀರ್ಪು ಅನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಅಪರಾಧಿ ಅರುಣ್ ವರ್ಮಾ, ವೆಂಕಟೇಶ್, ದಿನೇಶ್, ಶುಭಾಗೆ ಜೀವಾವಧಿ ಶಿಕ್ಷೆ ಕಾಯಂಗೊಳಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್​ನ ಜಸ್ಟೀಸ್ ಎಂ.ಎಂ. ಸುಂದರೇಶ್, ಜಸ್ಟೀಸ್ ಅರವಿಂದ್ ಕುಮಾರ್ ಅವರನ್ನೊಳಗೊಂಡ ಪೀಠ ಶಿಕ್ಷೆ ಕಾಯಂಗೊಳಿಸಿ ತೀರ್ಪು ನೀಡಿದೆ. ಕೆಳ ನ್ಯಾಯಾಲಯ ಹಾಗೂ ಹೈಕೋರ್ಟ್ ನೀಡಿದ್ದ ತೀರ್ಪು ಅನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.
ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಮತ್ತೊಂದು ಸೋಲು, ನಾಯಕ ಶುಬ್ಮನ್ ಗಿಲ್ ಏನಂದ್ರು..?
ಮುಂದಿನ 8 ವಾರಗಳಲ್ಲಿ ಕ್ಷಮಾದಾನ ಕೋರಿ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಲು ಅವಕಾಶ ಅಪರಾಧಿಗಳಿಗೆ ನೀಡಲಾಗಿದೆ. ರಾಜ್ಯಪಾಲರು ಅಪರಾಧಿಗಳ ಕ್ಷಮಾದಾನ ಅರ್ಜಿ ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ರಾಜ್ಯಪಾಲರು ಕ್ಷಮಾದಾನ ಅರ್ಜಿಗಳ ಬಗ್ಗೆ ತೀರ್ಮಾನಿಸುವವರೆಗೂ ಜಾಮೀನಿನ ಮೇಲಿರುವ ಅಪರಾಧಿಗಳನ್ನು ಬಂಧಿಸಬಾರದು ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ. ಹೀಗಾಗಿ ಅಪರಾಧಿಗಳ ಭವಿಷ್ಯ ಈಗ ರಾಜ್ಯಪಾಲರ ಕೈಯಲ್ಲಿದೆ. ರಾಜ್ಯಪಾಲರ ರಾಜ್ಯ ಸರ್ಕಾರದ ಸಲಹೆ, ಶಿಫಾರಸ್ಸು ಮೇರೆಗೆ ಸೂಕ್ತ ತೀರ್ಮಾನವನ್ನು ಕೈಗೊಳ್ಳಬಹುದು.
ಕೊಲೆಯ ಅಪರಾಧ ಕೃತ್ಯ ಎಸಗಿದಾಗ, ಅಪರಾಧಿಗಳೆಲ್ಲಾ ಯೌವ್ವನದಲ್ಲಿದ್ದರು. ಇಷ್ಟ ಇಲ್ಲದ ಮದುವೆ ಸಮಸ್ಯೆಯನ್ನು ತಪ್ಪು ವಿಧಾನದಲ್ಲಿ ನಿಭಾಯಿಸಲಾಗಿದೆ ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ತಿಳುವಳಿಕೆ ಕೊರತೆಯಿಂದ ಇಂಜಿನಿಯರ್ ಗಿರೀಶ್ ನನ್ನು ಕೊಲೆ ಮಾಡಲಾಗಿದೆ. ಘಟನೆ ನಡೆದು 2 ದಶಕಗಳೇ ಕಳೆದಿವೆ. ಆರೋಪಿಗಳು ಜೈಲಿನಲ್ಲಿ ಸನ್ನಡತೆ ತೋರಿದ್ದಾರೆ . ಅಪರಾಧಿಗಳು ಹುಟ್ಟಿನಿಂದಲೇ ಕ್ರಿಮಿನಲ್​ಗಳಲ್ಲ. ಅಪರಾಧಿಗಳು ಈಗ ಮಧ್ಯ ವಯಸ್ಕರಾಗಿದ್ದಾರೆ, ಆದ್ದರಿಂದ ಅವರಿಗೆ ಹೊಸ ಜೀವನ ಪ್ರಾರಂಭಿಸಲು ಒಂದು ಅವಕಾಶ ನೀಡಲು ಉದ್ದೇಶವನ್ನು ನಾವು ಹೊಂದಿದ್ದೇವೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಹೀಗಾಗಿ ಕ್ಷಮಾದಾನ ಕೋರಿ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಲು ಅಪರಾಧಿಗಳಿಗೆ 8 ವಾರ ಕಾಲಾವಕಾಶವನ್ನು ಸುಪ್ರೀಂಕೋರ್ಟ್ ನೀಡಿದೆ. ಹೀಗಾಗಿ ರಿಂಗ್ ರೋಡ್ ಶುಭಾ ಅಂಡ್ ಟೀಮ್ ಭವಿಷ್ಯ ಈಗ ರಾಜ್ಯಪಾಲರ ಕೈಯಲ್ಲಿದೆ.
ಇದನ್ನೂ ಓದಿ: ಈ ಗ್ರಾಮದಲ್ಲಿ ಮಹಿಳೆಯರದ್ದೇ ಕಾರುಭಾರು.. ಪುರುಷರಿಗೆ ‘ನೋ ಎಂಟ್ರಿ’ ಹಿಂದೆ ಒಂದು ಕ್ರೂರ ಕತೆ..!
2003ರ ನವಂಬರ್​ನಲ್ಲಿ ಬೆಂಗಳೂರಿನ ರಿಂಗ್ ರೋಡ್​ನಲ್ಲಿ ಇಂಜಿನಿಯರ್ ಗೀರೀಶ್ ಅವರನ್ನು ಮದುವೆ ಆಗಬೇಕಿದ್ದ ಶುಭಾ ಅಂಡ್ ಟೀಮ್ ಹತ್ಯೆ ಮಾಡಿತ್ತು. ಇಂಜಿನಿಯರ್ ಗೀರೀಶ್ ಜೊತೆಗೆ ಶುಭಾ ವಿವಾಹ ನಿಶ್ಚಿತಾರ್ಥ ನೆರವೇರಿತ್ತು. ಗೀರೀಶ್ ಜೊತೆ ವಿವಾಹ ಇಷ್ಟ ಇಲ್ಲದೆ ಸ್ನೇಹಿತ ಅರುಣ್ ವರ್ಮಾ ಜೊತೆ ಸೇರಿ ಶುಭಾ, ಗಿರೀಶ್​ರನ್ನು ಕೊಲೆ ಮಾಡಿಸಿದ್ದಳು. ಬೆಂಗಳೂರಿನ ಹೆಚ್‌ಎಎಲ್ ಬಳಿಯ ರಿಂಗ್ ರೋಡ್‌ನ ನಿರ್ಜನ ಪ್ರದೇಶಕ್ಕೆ ಗಿರೀಶ್ ನನ್ನು ಶುಭಾ ಕರೆದೊಯ್ದಿದ್ದಳು. ಆ ಸ್ಥಳಕ್ಕೆ ತನ್ನ ಸ್ನೇಹಿತ ಅರುಣ್ ವರ್ಮಾ ಹಾಗೂ ಉಳಿದ ಅಪರಾಧಿಗಳನ್ನು ಕರೆಸಿಕೊಂಡು ಹಿಂದಿನಿಂದ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಗಿರೀಶ್ ರನ್ನು ಹತ್ಯೆ ಮಾಡಲಾಗಿತ್ತು.
2003 ರಲ್ಲಿ ಈ ಕೊಲೆ ಕೇಸ್ ಬೆಂಗಳೂರಿನಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿತ್ತು. ಬೆಂಗಳೂರಿನಲ್ಲಿ ರಿಂಗ್ ರೋಡ್ ಬಳಿ ಈ ಹತ್ಯೆ ನಡೆದಿದ್ದರಿಂದ ಅಪರಾಧಿ ಶುಭಾಳನ್ನು ರಿಂಗ್ ರೋಡ್ ಶುಭಾ ಅಂತಾಲೇ ಕರೆಯಲಾಗುತ್ತಿದೆ. ಶುಭಾ ತಂದೆ ವಕೀಲರು. ಶುಭಾ ಕೂಡ ಕಾನೂನು ವ್ಯಾಸಂಗ ಮಾಡುತ್ತಿದ್ದಳು. ಅಪರಾಧಿ ಅರುಣ್ ವರ್ಮಾ ಕೂಡ ಶುಭಾ ಜೊತೆ ಕಾನೂನು ವಿದ್ಯಾರ್ಥಿಯಾಗಿದ್ದ. ಇಂಜಿನಿಯರ್ ಗಿರೀಶ್ ಜೊತೆ ವಿವಾಹ ಇಷ್ಟ ಇಲ್ಲದೇ ಇದ್ದರೆ ಅದನ್ನು ತನ್ನ ಪೋಷಕರಿಗೆ, ಗಿರೀಶ್ ಗೆ ಹೇಳುವ ಅವಕಾಶ ಶುಭಾಗೆ ಇತ್ತು. ಮದುವೆ ಇಷ್ಟ ಇಲ್ಲ ಎಂದು ಹೇಳದೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದ ಗಿರೀಶ್ ನನ್ನು ಊಟಕ್ಕೆ ಕರೆದೊಯ್ದು, ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ತಲೆ ಮೇಲೆ ಕಲ್ಲು ಎತ್ತಿ ಹಾಕಿ, ಕೊಲೆ ಮಾಡಲಾಗಿತ್ತು. ಕೊಲೆ ನಡೆದ 2 ದಶಕ 2 ವರ್ಷದ ಬಳಿಕ ಕೇಸ್​ನ ಅಂತಿಮ ತೀರ್ಪು ಅನ್ನು ಸುಪ್ರೀಂ ಕೋರ್ಟ್ ನೀಡಿದೆ.
ಇದನ್ನೂ ಓದಿ: ಟೀಂ ಇಂಡಿಯಾಗೆ ವಿರೋಚಿತ ಸೋಲು.. ಆಂಗ್ಲರಿಗೆ ನೀರು ಕುಡಿಸಿದ ಜಡೇಜಾ, ಸಿರಾಜ್, ಬೂಮ್ರಾ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ