/newsfirstlive-kannada/media/post_attachments/wp-content/uploads/2025/05/Suhas-shetty-8.jpg)
ಮಂಗಳೂರು ಮತ್ತೆ ಗಲಾಟೆಗೆ ಸುದ್ದಿ ಆಗಿದೆ. ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಬರ್ಬರ ಹತ್ಯೆಯಾಗಿದ್ದು, ಇಡೀ ಕರಾವಳಿ ಬೆಚ್ಚಿಬಿದ್ದಿದೆ. ಇದೀಗ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯೂ ಪ್ರತೀಕಾರವಾಗಿ ನಡೆಯಿತಾ ಎಂಬ ಅನುಮಾನಗಳು ಶುರುವಾಗಿವೆ.
ಇದನ್ನೂ ಓದಿ: ಮಂಗಳೂರಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನ ಕೊಚ್ಚಿ ಕೊಂದ 6 ದುಷ್ಕರ್ಮಿಗಳು
ಯಾಕೆಂದರೆ ಕರಾವಳಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಈ ರೀತಿಯ ಪ್ರಕರಣಗಳು ಆಗಾಗ ನಡೆಯುತ್ತಲೇ ಇದೆ. ಒಂದು ಸಮುದಾಯದ ವ್ಯಕ್ತಿ ಕೊಲೆಯಾದ್ರೆ ಅದರ ಪ್ರತೀಕಾರದ ಹತ್ಯೆ ಕೆಲ ದಿನದಲ್ಲೇ ನಡೆಯುತ್ತಿದೆ. ಪ್ರತೀಕಾರದ ಕೊಲೆ, ರಕ್ತದೋಕುಳಿಗೆ ಕಡಲತಡಿ ಬೆಚ್ಚಿಬಿದ್ದಿದೆ. 2017ರಿಂದ ಕರಾವಳಿ ಭಾಗದಲ್ಲಿ ನಡೆದ ಕೊಲೆಗಳ ಪ್ರಕರಣಗಳು ಹೀಗಿವೆ.
ಕರಾವಳಿಯ ಕೊಲೆಗಳು!
ಪ್ರಕರಣ 01: 2017 ಜೂನ್ 21
ಎಸ್ಡಿಪಿಐ ಮುಖಂಡ ಅಶ್ರಫ್ ಕಲಾಯಿ ಹತ್ಯೆ
ಪ್ರತೀಕಾರ : 2017 ಜುಲೈ 4
RSS ಕಾರ್ಯಕರ್ತ ಶರತ್ ಮಡಿವಾಳ ಕೊಲೆ
ಪ್ರಕರಣ 2: 2018 ಜನವರಿ 3
ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ
ಪ್ರತೀಕಾರ: 2018 ಜನವರಿ 3
ದೀಪಕ್ ಹತ್ಯೆ ದಿನವೇ ಬಶೀರ್ ಮರ್ಡರ್
ಪ್ರಕರಣ 3: 2022 ಜುಲೈ 19
ಸುಳ್ಯದ ಬೆಳ್ಳಾರೆಯಲ್ಲಿ ಮಸೂದ್ ಹತ್ಯೆ
ಪ್ರತೀಕಾರ : 2022 ಜುಲೈ 26
ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ
ಪ್ರಕರಣ 4: 2022 ಜುಲೈ 28
ಫಾಜಿಲ್ ಬರ್ಬರ ಹತ್ಯೆ
ಪ್ರತೀಕಾರ : 2025 ಮೇ 1
ಪ್ರತೀಕಾರಕ್ಕೆ ಸುಹಾಸ್ ಶೆಟ್ಟಿ ಹತ್ಯೆ?
ಇದನ್ನೂ ಓದಿ: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಹಿಂದೆ ಪ್ರವೀಣ್ ನೆಟ್ಟಾರು ಪ್ರಕರಣ ಲಿಂಕ್..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ