newsfirstkannada.com

2023ರ ಐಸಿಸಿ ಏಕದಿನ ತಂಡ; ಭಾರತದ ಆಟಗಾರರಿಗೆ ಹೆಚ್ಚು ಸ್ಥಾನ; ಕಾರಣವೇನು? ​

Share :

Published January 23, 2024 at 5:47pm

Update January 23, 2024 at 5:56pm

    2023ರ ಏಕದಿನ ತಂಡ ಪ್ರಕಟಿಸಿದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ

    ಐಸಿಸಿ 2023 ಏಕದಿನ ತಂಡದ ಕ್ಯಾಪ್ಟನ್​ ಆಗಿ ರೋಹಿತ್​​ ಶರ್ಮಾ!

    ರೋಹಿತ್​ ಸೇರಿದಂತೆ ಭಾರತ ತಂಡದ ಈ ಆಟಗಾರರಿಗೂ ಸ್ಥಾನ

2023ರ ಏಕದಿನ ತಂಡವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ. ಈ ತಂಡದ ಕ್ಯಾಪ್ಟನ್​ ಆಗಿ ಭಾರತ ಸ್ಟಾರ್​​ ಬ್ಯಾಟರ್​ ರೋಹಿತ್​ ಶರ್ಮಾ ಆಯ್ಕೆಯಾಗಿದ್ದಾರೆ. ಕ್ಯಾಪ್ಟನ್​ ರೋಹಿತ್​ ಶರ್ಮಾ ಜತೆಗೆ ಸ್ಟಾರ್​ ಕ್ರಿಕೆಟರ್​ ವಿರಾಟ್​ ಕೊಹ್ಲಿಗೂ ಸ್ಥಾನ ಸಿಕ್ಕಿದೆ.

ಇನ್ನು, ತಂಡದಲ್ಲಿ ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್​​ ಮತ್ತು ಸೌತ್​ ಆಫ್ರಿಕಾ ಆಟಗಾರರಿಗೆ ಅವಕಾಶ ನೀಡಲಾಗಿದೆ. ತಂಡದ ಓಪನರ್ಸ್​ ಆಗಿ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಆಯ್ಕೆಯಾಗಿದ್ದಾರೆ. 3ನೇ ಕ್ರಮಾಂಕದಲ್ಲಿ ಟ್ರಾವಿಸ್ ಹೆಡ್, 4ನೇ ಕ್ರಮಾಂಕದಲ್ಲಿ ಭಾರತದ ದಿಗ್ಗಜ ವಿರಾಟ್ ಕೊಹ್ಲಿಗೆ ಅವಕಾಶ ನೀಡಲಾಗಿದೆ. ನಂತರ ಡ್ಯಾರಿಲ್ ಮಿಚೆಲ್, ಹೆನ್ರಿಚ್ ಕ್ಲಾಸೆನ್ ಮತ್ತು ಮಾರ್ಕೊ ಜಾನ್ಸೆನ್ ಸ್ಥಾನ ಪಡೆದಿದ್ದಾರೆ.

ರೋಹಿತ್​ ಶರ್ಮಾ ಕಳೆದ ವರ್ಷ 52ರ ಸರಾಸರಿಯಲ್ಲಿ 1,255 ರನ್ ಗಳಿಸಿದ್ರು. ವಿರಾಟ್ ಕೊಹ್ಲಿ ಕಳೆದ ವರ್ಷ ಏಕದಿನ ಪಂದ್ಯಗಳಲ್ಲಿ 1,337 ರನ್ ಮೂಲಕ 2ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಆಗಿದ್ದರು. ಇನ್ನೂ ಶುಭ್ಮನ್​ ಗಿಲ್​ ಜತೆ ಸಿರಾಜ್​​, ಕುಲ್ದೀಪ್​ ಯಾದವ್​, ಶಮಿಗೂ ಅವಕಾಶ ಕೊಡಲಾಗಿದೆ. ಈ ತಂಡದಲ್ಲಿ ಹೆಚ್ಚು ಭಾರತೀಯರಿಗೆ ಸ್ಥಾನ ಕೊಡಲು ಅವರ ಅದ್ಭುತ ಪ್ರದರ್ಶನವೇ ಕಾರಣ ಆಗಿದೆ.

ಐಸಿಸಿ ವರ್ಷದ ಏಕದಿನ ತಂಡ

ರೋಹಿತ್ ಶರ್ಮಾ (ಕ್ಯಾಪ್ಟನ್​), ಶುಭ್ಮನ್ ಗಿಲ್, ಟ್ರಾವಿಸ್ ಹೆಡ್, ವಿರಾಟ್ ಕೊಹ್ಲಿ, ಡ್ಯಾರಿಲ್ ಮಿಚೆಲ್, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಮಾರ್ಕೊ ಜಾನ್ಸೆನ್, ಆ್ಯಡಮ್ ಝಂಪಾ, ಮೊಹಮ್ಮದ್ ಸಿರಾಜ್, ಕುಲ್ದೀಪ್​​ ಯಾದವ್, ಮೊಹಮ್ಮದ್ ಶಮಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

2023ರ ಐಸಿಸಿ ಏಕದಿನ ತಂಡ; ಭಾರತದ ಆಟಗಾರರಿಗೆ ಹೆಚ್ಚು ಸ್ಥಾನ; ಕಾರಣವೇನು? ​

https://newsfirstlive.com/wp-content/uploads/2024/01/Rohit_Kohli_2.jpg

Load More