newsfirstkannada.com

2023ರ MLA ಚುನಾವಣೆಗೂ ಗೈರು.. ಈ ಬಾರಿಯಾದ್ರೂ ಮೋಹಕ ತಾರೆ ರಮ್ಯಾ ಮತ ಚಲಾಯಿಸ್ತಾರಾ?

Share :

Published April 25, 2024 at 2:11pm

Update April 25, 2024 at 2:12pm

    2018 ರಿಂದ ಯಾವುದೇ ಚುನಾವಣೆಗಳಲ್ಲಿ ಮತ ಹಾಕದ ಮಾಜಿ ಸಂಸದೆ

    ಮಂಡ್ಯದ ವಿದ್ಯಾನಗರದಲ್ಲಿ ಮತ ಚಲಾಯಿಸುವ ಹಕ್ಕು ಹೊಂದಿರುವ ರಮ್ಯಾ

    2023ರ MLA ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸಿ ಮತ ಹಾಕದೆ ನಿರ್ಲಕ್ಷ

 ಮಂಡ್ಯ: 2018 ರಿಂದ ಯಾವುದೇ ಚುನಾವಣೆಗಳಲ್ಲಿ ಮತ ಹಾಕದ ಮಾಜಿ ಸಂಸದೆ ರಮ್ಯ ಈ ಬಾರಿಯಾದ್ರು ಮತ ಚಲಾಯಿಸುತ್ತಾರಾ? ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡಿದೆ. ಅನೇಕರು ನಟಿ ರಮ್ಯಾ ಬರುವಿಕೆಗಾಗಿ ಕಾಯುತ್ತಿದ್ದಾರೆ.

ಮೋಹಕ ತಾರೆ ರಮ್ಯ ಮಂಡ್ಯದಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ. ಮಂಡ್ಯದ ವಿದ್ಯಾನಗರದ ಮತಗಟ್ಟೆಯಲ್ಲಿ ಮತ ಹಾಕಬೇಕಿದೆ. ಆದರೆ ಎರಡು ಎಂಎಲ್​ಎ ಚುನಾವಣೆ, ತಲಾ ಒಂದು ಎಂಪಿ ಬೈ ಎಲೆಕ್ಷನ್ ಹಾಗೂ ಸಾರ್ವತ್ರಿಕ ಚುನಾವಣೆಗಳಲ್ಲಿ ಮತದಾನಕ್ಕೆ ಗೈರಾಗಿದ್ದರು. ಈ ಬಾರಿಯಾದರೂ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರಾ ಎಂಬ ಪ್ರಶ್ನೆ ಎಲ್ಲರನ್ನು ಕಾಡಿದೆ.

ಸ್ಯಾಂಡಲ್ ವುಡ್ ಕ್ವೀನ್ ಸ್ಥಳೀಯ ಸಂಸ್ಥೆ ಚುನಾವಣೆಗೂ ಮತಚಲಾಯಿಸಿರಲಿಲ್ಲ. 2023ರ ಎಂಎಲ್ಎ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸಿಯು ಮತ ಹಾಕದೆ ನಿರ್ಲಕ್ಷ ವಹಿಸಿದ್ದರು. ಮಾತ್ರವಲ್ಲದೆ, ಈ ಬಾರಿಯ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದಾರೆ.

ಇದನ್ನೂ ಓದಿ: Loksabha Election 2024: ಮತದಾನದಂದು ಫೋಟೋ ಕ್ಲಿಕ್ಕಿಸಿ.. 25 ಸಾವಿರ ರೂಪಾಯಿ ಬಹುಮಾನ ಗೆಲ್ಲಿ

ಆದರೆ ಪ್ರಚಾರದಿಂದ ದೂರ ಉಳಿದರು ಈ ಬಾರಿ ಮತ ಚಲಾಯಿಸಿ ಜವಾಬ್ದಾರಿ ನಿರ್ವಹಿಸುತ್ತಾರಾ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಯುವ ಜನರಿಗೆ ಮಾದರಿಯಾಗಬೇಕಿದ್ದ ರಮ್ಯ ಮತದಾನದ ವಿಚಾರದಲ್ಲಿ ನಿರ್ಲಕ್ಷ್ಯವಹಿಸದೆ ಮತದಾನದಲ್ಲಿ ಭಾಗಿಯಾಗಲಿದ್ದಾರಾ ಎಂದು ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

2023ರ MLA ಚುನಾವಣೆಗೂ ಗೈರು.. ಈ ಬಾರಿಯಾದ್ರೂ ಮೋಹಕ ತಾರೆ ರಮ್ಯಾ ಮತ ಚಲಾಯಿಸ್ತಾರಾ?

https://newsfirstlive.com/wp-content/uploads/2024/04/Ramya.jpg

Load More