Advertisment

ಸಾವು ಗೆದ್ದ 20 ತಿಂಗಳ ಕಂದ! 3 ಗಂಟೆ ಉಸಿರು ನಿಲ್ಲಿಸಿ ಯಮಲೋಕ ಸುತ್ತಿ ಬಂದಿದ್ದ ಈ ಪುಟಾಣಿ

author-image
Ganesh Nachikethu
Updated On
ಸಾವು ಗೆದ್ದ 20 ತಿಂಗಳ ಕಂದ! 3 ಗಂಟೆ ಉಸಿರು ನಿಲ್ಲಿಸಿ ಯಮಲೋಕ ಸುತ್ತಿ ಬಂದಿದ್ದ ಈ ಪುಟಾಣಿ
Advertisment
  • ಆಟವಾಡುತ್ತಿದ್ದಾಗ ಉಸಿರು ನಿಲ್ಲಿಸಿದ್ದ 20 ತಿಂಗಳ ಮಗು
  • ಉಸಿರು ನಿಲ್ಲಿಸಿದ್ದ ಮಗು ಮತ್ತೆ ಬದುಕಿ ಬರುತ್ತೆ ಎಂಬ ಭರವಸೆ ಯಾರಿಗೂ ಇರಲಿಲ್ಲ
  • ಸಾವಿಗೆ ಗುಡ್​ ಬೈ ಹೇಳಿದ ವೇಲಾನ್ ಸೌಂಡರ್ಸ್

ಸಾವು ಗೆಲ್ಲೋದು ಅಂದ್ರೆ ಸುಲಭದ ಮಾತಲ್ಲ. ಹಾಗಂತ ಸಾವು ಹೇಳಿ ಕೇಳಿ ಬರುವುದೂ ಇಲ್ಲ. ಆದ್ರೆ ಈ ಪುಟ್ಟ ಕಂದನ ಜೀವನದಲ್ಲಿ ಸಾವು 3 ಗಂಟೆಗಳ ಆಟವಾಡಿತ್ತು. ಕೊನೆಗೆ ಉಸಿರು ನಿಲ್ಲಿಸಿದ್ದ ಮಗು ಸಾವನ್ನು ಗೆದ್ದು ಜಯಿಸಿ ಬಂದಿದೆ. ಆದರೆ ಮತ್ತೆ ಪುನರ್ಜನ್ಮ ಪಡೆದ ಮಗು ಬದುಕಿ ಬಂದ ಕಥೆ ಕೇಳಿದ್ರೆ ನಿಜಕ್ಕೂ ಅಚ್ಚರಿಯಾಗುತ್ತೆ.

Advertisment

ಕೆನಡಾದ ನೈಋತ್ಯ ಒಂಟಾರಿಯೊದ ಪೆಟ್ರೋಲಿಯಾದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. 20 ತಿಂಗಳ ಮಗು ವೇಲಾನ್ ಸೌಂಡರ್ಸ್​ ಹೋಮ್​ಡೇ ಕೇರ್​ನಲ್ಲಿ ಆಟವಾಡುತ್ತಾ ಹೋರಾಂಗಣ ಪೂಲ್​ ಒಳಕ್ಕೆ ಬಿದ್ದಿದೆ. ಈ ಘಟನೆ ನಡೆದಾದಲೇ ಮಗು ಉಸಿರು ಚೆಲ್ಲಿತ್ತು. ಆದರೆ ಬದುಕಿಸುವ ಚಲ ಹೊತ್ತಿದ್ದ ಅಗ್ನಿಶಾಮಕ ದಳದವರು ಕೂಡಲೇ ರಕ್ಷಿಸಿ ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದರು.

ಉಸಿರು ನಿಲ್ಲಿದ್ದ ವೇಲಾನ್​ನನ್ನು ಷಾರ್ಲೆಟ್ ಎಲೀನರ್ ಎಂಗಲ್ಹಾರ್ಟ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಉಸಿರು ನಿಲ್ಲಿಸಿದ್ದ ಮಗು ಮತ್ತೆ ಬದುಕಿ ಬರುತ್ತೆ ಎಂಬ ಭರವಸೆ ಯಾರಿಗೂ ಇರಲಿಲ್ಲ. ಹಾಗಂತ ವೈದ್ಯರೇನು ಕೈಚೆಲ್ಲಲಿಲ್ಲ. ತನ್ನಿಂದ ಏನು ಸಾಧ್ಯವೇ ಅದನ್ನು ಮಾಡಿಯೇ ತೀರಿಸುತ್ತೇಂದು ಮಗುವಿಗೆ ಚಿಕಿತ್ಸೆ ನೀಡಲು ಪ್ರಾರಂಭಿಸುತ್ತಾರೆ.

100 ಕಿಲೋ ಮೀಟರ್​​ ದೂರದಲ್ಲಿದೆ ಆಸ್ಪತ್ರೆ

ಮಗುವಿದ್ದ ಪೆಟ್ರೋಲಿಯಾ ಹೋಮ್​ಡೇ ಕೇರ್​​ ಮತ್ತು ಲಂಡನ್​ಗೆ 100 ಕಿಲೋ ಮೀಟರ್​ ದೂರವಿದೆ. ಇನ್ನು ಆಸ್ಪತ್ರೆಗೆಯಲ್ಲೂ ಸಂಪನ್ಮೂಲ ಮತ್ತು ಸಿಬ್ಬಂದಿಗಳ ಕೊರತೆಯಿದೆ. ಇಂತಹ ಸಮಸ್ಯೆಗಳಿದ್ದರೂ ಸಹ ವೈದ್ಯರು ವೇಲಾನ್ ಸೌಂಡರ್ಸ್ ನೋಡಿ ಸುಮ್ಮನಾಗಲಿಲ್ಲ. ಬದುಕಿ ಬಂದರೆ ಅದೃಷ್ಟವೆಂದು ಚಿಕಿತ್ಸೆ ಮುಂದುವರಿಸುತ್ತಾರೆ.

Advertisment

publive-image

ಸಾವಿಗೆ ಗುಡ್​ ಬೈ ಹೇಳಿದ ವೇಲಾನ್ ಸೌಂಡರ್ಸ್

ಮಗು ಆಸ್ಪತ್ರೆ ತಲುಪಾಗ ಮೈ ಬಿಸಿ ಆರಿತ್ತು. ಉಸಿರು ಸಿಲ್ಲಿಸಿತ್ತು. ಆದರೆ ಆ ದೇವರ ರೂಪದಲ್ಲಿದ್ದ ಡಾಕ್ಟರ್​ ಮತ್ತು ಅಲ್ಲಿನ ಸಿಬ್ಬಂದಿಗಳ ಪರಿಶ್ರಮ ನಿಲ್ಲಿಸಲಿಲ್ಲ. ಮಗುವನ್ನು 3 ಗಂಟೆಗಳ ಕಾಲ ಸತತ ಪರಿಶ್ರಮದ ಮೂಲಕ ಮಗುವಿಗೆ ಚಿಕಿತ್ಸೆ ಮತ್ತು ದೇಹವನ್ನು ಬೆಚ್ಚಗಾಗಿಸಲು ಮುಂದಾಗುತ್ತಾರೆ. ಕೊನೆಗೆ ‘ವೈದ್ಯೋ ನಾರಾಯಣೋ ಹರಿಃ‘ ಎಂಬಂತೆ ಇವರೆಲ್ಲರ ಶ್ರಮದಿಂದ ಉಸಿರು ನಿಲ್ಲಿಸಿದ್ದ ಮಗು ಮತ್ತೆ ಉಸಿರಾಡಲು ಶುರು ಮಾಡುತ್ತೆ.

ಸದ್ಯ ಮಗು ಆರಾಮವಿದ್ದು, ಫೆಬ್ರವರಿ 6 ರಂದು ಮಗು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment