/newsfirstlive-kannada/media/post_attachments/wp-content/uploads/2023/05/rain-2.jpg)
ರಾಯಚೂರು: ಸಿಡಿಲು ಬಡಿದು ವ್ಯಕ್ತಿಯೋರ್ವ ಸಾವನ್ನಪ್ಪಿರೋ ಘಟನೆ ಸಿರವಾರ ತಾಲೂಕಿನ ಬಲ್ಲಟಗಿ ಗ್ರಾಮದಲ್ಲಿ ನಡೆದಿದೆ. ಬಲ್ಲಟಗಿ ಗ್ರಾಮದ ನಿವಾಸಿ ಬೀರಪ್ಪ (55) ಮೃತ ವ್ಯಕ್ತಿ. ಮೃತ ವ್ಯಕ್ತಿ ಬೀರಪ್ಪ ಕುರಿದೊಡ್ಡಿಯಲ್ಲಿ ಮಲಗಿಕೊಂಡಿದ್ದರು. ಈ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಸಿರವಾರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ