/newsfirstlive-kannada/media/post_attachments/wp-content/uploads/2023/05/Harish-Poonja.jpg)
24 ಹಿಂದೂ ಕಾರ್ಯಕರ್ತರನ್ನ ಸಿಎಂ ಸಿದ್ದರಾಮಯ್ಯ ಹತ್ಯೆ ಮಾಡಿದ್ದಾರೆ ಎಂದು ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಸಿದ್ದರಾಮಯ್ಯ ವಿರುದ್ಧ ಈ ಆರೋಪ ಮಾಡಿದ್ದಾರೆ. ಸದ್ಯ ಹರೀಶ್ ಪೂಂಜ ಕಾರ್ಯಕ್ರಮದಲ್ಲಿ ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು, ಪೂಂಜಾರ ಈ ಹೇಳಿಕೆ ಕಾಂಗ್ರೆಸ್ಸಿಗರು ಕಿಡಿಕಾರಿದ್ದಾರೆ.
ಬೆಳ್ತಂಗಡಿಯ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಶಾಸಕ ಹರೀಶ್ ಪೂಂಜಾ ‘ಕೈ’ ಪರ ಪ್ರಚಾರ ಮಾಡಿದ ಸತ್ಯಜಿತ್ ಸುರತ್ಕಲ್ ವಿರುದ್ಧ ಆಕ್ರೋಶ ಹೊರಹಾಕಿದರು. ಈ ವೇಳೆ ಮಾತನಾಡುತ್ತಾ ಅವರು, 24 ಜನ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿದ ಸಿದ್ದರಾಮಯ್ಯಗೆ ವೋಟ್ ಕೇಳಿದ್ರಲ್ವಾ?. ಬಜರಂಗದಳವನ್ನು ಬ್ಯಾನ್ ಮಾಡುತ್ತೇನೆಂದು ಹೇಳಿದ ಕಾಂಗ್ರೆಸ್ಗೆ ನೀವು ವೋಟ್ ಕೇಳಿದ್ರಲ್ವಾ?. ಇವತ್ತು ಬೆಳ್ತಂಗಡಿ ತಾಲೂಕಿನ ಜನ ಕೇಳುತ್ತಿದ್ದಾರೆ. ಇದು ಯಾವ ನಮೂನೆಯ ಹಿಂದುತ್ವ ಅಂತ ಜನ ಕೇಳುತ್ತಿದ್ದಾರೆ. ಇದಕ್ಕೆ ಸತ್ಯಣ್ಣ ಉತ್ತರ ಕೊಡಬೇಕು. ನಾನು ಯಾವ ರೀತಿ ತಪ್ಪು ಮಾಡಿದ್ದೇನೆ ಅಂತ ಸತ್ಯಣ್ಣ ಉತ್ತರ ಕೊಡಬೇಕು. ನಾನು ಹಿಂದುತ್ವಕ್ಕೆ ದ್ರೋಹ ಮಾಡಿದ್ರೆ, ಸತ್ಯಣ್ಣ ನೀವು ಹರೀಶ್ ಪೂಂಜಾರನ್ನು ಸೋಲಿಸಲು ಪ್ರಯತ್ನ ಮಾಡುತ್ತಿದ್ರು ನಾನು ಒಪ್ಪಿಕೊಳ್ಳುತ್ತಿದ್ದೆ. ನಾನು ಹಿಂದುತ್ವದ ಸಿದ್ಧಾಂತ ಬಿಟ್ಟಿದ್ದೇನೆ ಅಂತಾದ್ರೆ ನೀವು ಇಲ್ಲಿ ಬಂದು ಹಿಂದುತ್ವದ ವಿರುದ್ಧ ಕಾಂಗ್ರೆಸ್ಗೆ ವೋಟ್ ಹಾಕಿ ಎಂದು ಹೇಳುವುದನ್ನು ತೆಗೆದುಕೊಳ್ಳುತ್ತಿದ್ದೆ ಎಂದು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಸದ್ಯ ಹರೀಶ್ ಪೂಂಜ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ಅತ್ತ ಕಾಂಗ್ರೆಸ್ಸಿಗರು ಹರೀಶ್ ಪೂಂಜರ ಹೇಳಿಕೆ ಕುರಿತಾಗಿ ದೂರು ದಾಖಲಿಸಲು ಮುಂದಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ