newsfirstkannada.com

ಈ ವರ್ಷ ಮದ್ವೆ ಆಗ್ತಿರೋ ಹೆಣ್ಮಕ್ಕಳಿಗೆ ಮಾದರಿ ಆಗ್ತಿದ್ದಾರೆ ಅಂಬಾನಿ ಸೊಸೆ..!

Share :

Published March 16, 2024 at 5:57am

    ಬಹಳ ಅದ್ಧೂರಿಯಾಗಿ ನೆರವೇರಿದ 3 ದಿನದ ಪ್ರೀ ವೆಡ್ಡಿಂಗ್ ಸಮಾರಂಭ

    ಜುಲೈ 12ಕ್ಕೆ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ

    ವಧುಗಳ ಮದುವೆಗೆ ಅತೀ ಹೆಚ್ಚು ಮುಂಚೂಣಿಯಲ್ಲಿರೋ ಶೇಪ್​ ಇದು

ಮದುವೆ ಎಂಬುವುದು ಎಲ್ಲಾ ಹೆಣ್ಣು ಹಾಗೂ ಗಂಡು ಮಕ್ಕಳ ಜೀವನದಲ್ಲಿ ಬಹು ಮುಖ್ಯ ಸಂಗತಿ. ಎಲ್ಲರ ಜೀವನದಲ್ಲಿ ಮದುವೆಯೂ ಕೇವಲ ಒಂದೇ ಸಾರಿ ಬರುತ್ತದೆ. ಈ ಸಂದರ್ಭದಲ್ಲಿ ವಧುವಿನ ಉಡುಪು ನೆರೆದಿದ್ದವರ ಕಣ್ಣು ಕುಕ್ಕುವಂತೆ ಮಾಡಬೇಕೆಂದು ಸಾಕಷ್ಟು ಜನರು ಡಿಸೈನರ್ ಮೋರೆ ಹೋಗಿ ತಮಗೆ ಇಂಥದ್ದೇ ಬಟ್ಟೆ ಬೇಕು. ಹೀಗೆ ಬ್ಲೌಸ್ ಸ್ಟಿಚಿಂಗ್ ಮಾಡಬೇಕು. ಹೀಗೆ ಹೇರ್ ಸ್ಟೈಲ್ ಮಾಡಬೇಕು ಎಂದು ಹೇಳುತ್ತಾರೆ.

ಇದನ್ನು ಓದಿ: ಸುಮಲತಾ ವಿರುದ್ಧ ಸೋಲು.. ಆ ದಿನಗಳ ನೆನೆದು ನಿಖಿಲ್ ಭಾವುಕ; ಹೇಳಿದ್ದೇನು?

ಆದರೆ ಭಾರತದ ಆಗರ್ಭ ಶ್ರೀಮಂತ ವ್ಯಕ್ತಿಯಾಗಿರುವ ಮುಖೇಶ್ ಅಂಬಾನಿ ಅವರ ಸೊಸೆ ಮದುವೆಗೆ ಯಾವ ರೀತಿಯ ಬಟ್ಟೆಯನ್ನು ಧರಿಸುತ್ತಾರೆ ಎಂದು ಚರ್ಚೆ ಶುರುವಾಗಿ ಬಿಟ್ಟಿದೆ. ಜುಲೈ 12ರಂದು ಮುಖೇಶ್ ಅಂಬಾನಿ ಕಿರಿಯ ಮಗ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮೊನ್ನೆಯಷ್ಟೇ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ 3 ದಿನಗಳ ಕಾಲ ಪ್ರೀ ವೆಡ್ಡಿಂಗ್ ಸಮಾರಂಭ ಜರುಗಿತ್ತು. ಈ ಸಮಾರಂಭಕ್ಕೆ ದೇಶ ವಿದೇಶಗಳಿಂದ ಗಣ್ಯರು ಹಾಜರಿದ್ದರು.

ಜತೆಗೆ ಬಾಲಿವುಡ್ ಸ್ಟಾರ್​ ನಟ ನಟಿಯರು ಪ್ರೀ ವೆಡ್ಡಿಂಗ್ ಸಮಾರಂಭ ನೃತ್ಯ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಅದರಲ್ಲೂ ಅನಂತ್​ ಅಂಬಾನಿ ಭಾವಿ ಪತ್ನಿ ರಾಧಿಕಾ ಮರ್ಚೆಂಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದ್ದವು. ಅವರು 3 ದಿನದ ಪ್ರೀ ವೆಡ್ಡಿಂಗ್ ಸಮಾರಂಭದಲ್ಲಿ ಧರಿಸಿದ್ದ ಲೆಹೆಂಗಾ ಡಿಸೈನ್ಸ್ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು. ಇದೀಗ ಜುಲೈ 12ರಂದು ನಡೆಯುವ ಮದುವೆಗೆ ಯಾವ ರೀತಿಯಲ್ಲಿ ರೆಡಿ ಆಗುತ್ತಾರೆ ಎಂದು ಕಾದು ನೋಡಬೇಕಿದೆ.

ಸೀರೆ ಬ್ಲೌಸ್ ಮತ್ತು ಗೌನ್‌ಗಳಿಂದ ಹಿಡಿದು ಕುರ್ತಾ ಸೆಟ್‌ಗಳವರೆಗಿನ ಮದುವೆಯ ಫ್ಯಾಷನ್ ಮೂಡ್‌ಬೋರ್ಡ್‌ಗಳು ಮುಂಚೂಣಿಯಲ್ಲಿವೆ. ಮಧುವಿಗೆ ವಿಧ ವಿಧದ ಸೀರೆ, ಬ್ಲೌಸ್ ಹಾಗೂ ಗೌನ್​​ ಕುರ್ತಾ ಸೆಟ್​ಗಳು ಮೂಡಿ ಬರುತ್ತಿವೆ. ಹೀಗೆ ನವ ವಧುಗಳು ಹೊಸ ಹೊಸ ಕುರ್ತಾ ಸೆಟ್‌ಗಳ ಮೊರೆ ಹೋಗುತ್ತಿದ್ದಾರೆ. ವಿ ನೆಕ್​​ ಶೇಪ್​ಗಳು ಅತಿ ಹೆಚ್ಚು ಮುಂಚೂಣಿಯಲ್ಲಿದೆ. ಹೀಗಾಗಿ ವಧುಗಳು 2024ರಲ್ಲಿ ಮೂಡಿ ಬರುತ್ತಿರೋ ಟ್ರೆಂಡ್​ಗೆ ಮಾರು ಹೋಗುತ್ತಿದ್ದಾರೆ. ಹೆವಿ ವರ್ಕ್​ಗಳಿಂದ ಕುಡಿದ ಸ್ಲೀವ್‌ಗಳು ಬ್ರೈಡಲ್​ಗೆ ಹೊಸ ಲುಕ್​ ನೀಡುತ್ತಿವೆ.

ರಾಧಿಕಾ ಅವರ ಮದುವೆ ಜುಲೈ 12 ರಂದು ನಡೆದರೂ, ಈ ವರ್ಷ ಮದುವೆ ಆಗ್ತಿರುವ ಹೆಣ್ಮಕ್ಕಳು ಭಾರೀ ನಿರೀಕ್ಷೆಯಲ್ಲಿದ್ದಾರೆ. ಅವರಂತೆಯೇ ಬಟ್ಟೆಯನ್ನು ಧರಿಸಲು ಪ್ಲಾನ್ ಮಾಡ್ತಿದ್ದಾರೆ. ಜುಲೈ ನಂತರ ಆಗುವ ಮದುವೆ ಕಾರ್ಯಕ್ರಮಗಳಲ್ಲಿ ಮದುಮಗಳ ಡ್ರೆಸ್​ ಕೋಡ್ ಅಂಬಾನಿ ಸೊಸೆ ಧರಿಸಿದ ಮಾದರಿಯಲ್ಲೇ ಇದ್ದರೂ ಅಚ್ಚರಿ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ವರ್ಷ ಮದ್ವೆ ಆಗ್ತಿರೋ ಹೆಣ್ಮಕ್ಕಳಿಗೆ ಮಾದರಿ ಆಗ್ತಿದ್ದಾರೆ ಅಂಬಾನಿ ಸೊಸೆ..!

https://newsfirstlive.com/wp-content/uploads/2024/03/radhikamerchant.jpg

Load More