newsfirstkannada.com

‘ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನ ATM ಮಾಡಿಕೊಂಡಿದೆ’ ಸಿದ್ದು ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ

Share :

Published March 16, 2024 at 3:03pm

Update March 16, 2024 at 3:28pm

  ಲೋಕಸಭೆಗೆ ರಣಕಹಳೆ ಮೊಳಗಿಸಿದ ಪ್ರಧಾನಿ ಮೋದಿ

  ಯಡಿಯೂರಪ್ಪ, ವಿಜಯೇಂದ್ರ ಸೇರಿ ಪಕ್ಷದ ಗಣ್ಯರು ಭಾಗಿ

  ಕಾಂಗ್ರೆಸ್​ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ

ಕಲಬುರಗಿ: ಕಳೆದ ಬಾರಿಯಂತೆ ಈ ಬಾರಿ ಕರುನಾಡಿನಿಂದ ನಮೋ ಪತಾಕೆ ಹಾರಿಸಲು ಕೇಸರಿ ಬ್ರಿಗೇಡ್ ಬೃಹತ್ ಕಾರ್ಯಕ್ರಮ ಆಯೋಜಿಸಿದೆ. ಕರ್ನಾಟಕದಿಂದ ರಣಕಹಳೆ ಮೊಳಗಿಸಲು ಪ್ರಧಾನಿ ಮೋದಿಯವರು ನಗರದ ಎನ್​ವಿ ಕಾಲೇಜು ಮೈದಾನಕ್ಕೆ ಆಗಮಿಸಿದ್ದು ಜನರನ್ನುದ್ದೇಶಿಸಿ ಮಾತನಾಡಿದ್ದಾರೆ.

ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿಯವರು, ಶಿವಶರಣರ, ಬಸವೇಶ್ವರರ ನಾಡು ಕಲಬುರಗಿಯ ಜನತೆಗೆ ನಮಸ್ಕಾರಗಳು ಎಂದು ಹೇಳಿದರು. ಈ ಎಲೆಕ್ಷನ್​​ನಲ್ಲಿ ನಿಮ್ಮ ಉತ್ಸಾಹ ನೋಡಿ ಅತ್ಯಂತ ದಾಖಲೆ ಮಟ್ಟದಲ್ಲಿ ಗೆಲ್ಲುತ್ತೇವೆ ಎಂದು ಈಗಾಗಲೇ ಮಾತು ಕೊಟ್ಟಾಗಿದೆ. ಇದಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೇಕು. ಇನ್ನು ಚುನಾವಣೆ ಘೋಷಣೆ ಆಗಬೇಕಿದೆ. ಆದರೆ ಈಗಾಗಲೇ ನೀವು ಎಲ್ಲದಕ್ಕೂ ಉತ್ತರ ಕೊಟ್ಟಿದ್ದೀರಿ ಎಂದು ಹೇಳಿದ್ದಾರೆ.

ಮೋದಿ ಭಾಷಣದಲ್ಲಿ ಇನ್ನೇನು ಹೇಳಿದರು? 

 • ಬರಬೇಕಾದರೆ ಹೆಲಿಪ್ಯಾಡ್​ ಮೂಲಕ ಕೆಳಗೆ ನೋಡಿದೆ ನಿಮ್ಮೆಲ್ಲರ ಉತ್ಸಾಹ ಜಾಸ್ತಿ ಆಗಿದೆ
 • ಅತ್ಯಂತ ದೊಡ್ಡ ಮಟ್ಟದಲ್ಲಿ ಜನರು ಆಶೀರ್ವಾದ ಕೊಡಲು ತಯಾರಾಗಿದ್ದೀರಿ
 • ಕೇರಳ, ತಮಿಳುನಾಡು, ತೆಲಂಗಾಣ ಸೇರಿದಂತೆ ಬೇರೆ ಬೇರೆ ರಾಜ್ಯದಲ್ಲಿ ನಮ್ಮ ಪರವಾಗಿದ್ದಾರೆ
 • ದಕ್ಷಿಣ ಭಾರತದ ಪ್ರತಿ ಕ್ಷೇತ್ರದಲ್ಲಿ ಬಿಜೆಪಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡುತ್ತಿದ್ದಾರೆ
 • ರಾಜ್ಯದಲ್ಲಿನ ಕಾಂಗ್ರೆಸ್​ ಸರ್ಕಾರ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದೆ
 • ಬೇರೆ ಜನರ ಜೇಬು ತುಂಬಿಸಲು ಇದೀಗ ಕರ್ನಾಟಕವನ್ನು ಬಳಸಿಕೊಳ್ಳಲಾಗುತ್ತಿದೆ.
 • ಮೋದಿ ಭಾಷಣದ ವೇಳೆ ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ವಾಗ್ದಾಳಿ
 • ಸದ್ಯ ಸಿದ್ದರಾಮಮಯ್ಯ ಸರ್ಕಾರದ ಬಳಿ ಹಣವಿಲ್ಲ
 • ರಾಜ್ಯದ ಕಾಂಗ್ರೆಸ್​ ಸರ್ಕಾರದ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ
 • ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕೆಟ್ಟು ಹೋಗಿದೆ
 • ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ರಾಜ್ಯ ಸರ್ಕಾರ ಜನರಿಗೆ ಬೇಡವಾಗಿದೆ
 • ಬಿಜೆಪಿಗೆ ಈ ಬಾರಿ ಕರ್ನಾಟಕದ ಜನರು ಆಶೀರ್ವಾದ ಮಾಡುತ್ತಾರೆ
 • ಅನುಭವ ಮಂಟಪದ ಸ್ಪೂರ್ತಿಯಿಂದ ಭಾರತ ಮಂಟಪ ಹೆಸರು ಇಡಲಾಗಿದೆ.
 • ಕರ್ನಾಟಕದಲ್ಲಿ ಉಜ್ವಲಾ ಯೋಜನೆ ಮೂಲಕ 40 ಲಕ್ಷ ಮಹಿಳೆಯರಿಗೆ ಉಪಯೋಗವಾಗಿದೆ
 • ಮಹಿಳೆಯರಿಗೆ ಉಜ್ವಲಾ ಯೋಜನೆಯಿಂದ ಹೆಚ್ಚು ಉಪಯೋಗವಾಗಿದೆ
 • ಪಿಎಂ ಆವಾಸ್ ಯೋಜನೆಯಡಿ 8 ಲಕ್ಷ ಜನರಿಗೆ ಮನೆಗಳನ್ನ ನೀಡಲಾಗಿದೆ

 • ಕಲ್ಯಾಣ ಕರ್ನಾಟಕವನ್ನು ಕಾಂಗ್ರೆಸ್​ನವರು ಯಾವುದೇ ಅಭಿವೃದ್ಧಿ ಮಾಡಿರಲಿಲ್ಲ
 • ಕಲ್ಯಾಣ ಕರ್ನಾಟಕದ ವಿಕಾಸದ ಅಭಿವೃದ್ಧಿಯನ್ನು ಬಿಜೆಪಿ ಮಾಡಿದೆ
 • ಕಲಬುರಗಿಯಿಂದ ಬೆಂಗಳೂರಿಗೆ ವಂದೇ ಭಾರತ್ ಟ್ರೈನ್ ಪ್ರಾರಂಭಿಸಲಾಯಿತು
 • ಬಿಜೆಪಿ ಇಲ್ಲಿ ಅಭಿವೃದ್ಧಿ ಜೊತೆ ಜೊತೆಗೆ ಉದ್ಯೋಗಗಳನ್ನು ಕೂಡ ನೀಡಿದೆ
 • ನಾವು ಎಲ್ಲ ಗ್ಯಾರಂಟಿಳನ್ನು ಕೊಟ್ಟಿದ್ದೇವೆ. ಆದರೆ ನಮಗೆ ನಿಮ್ಮ ಒಂದೇ ಒಂದು ಗ್ಯಾರಂಟಿ ಬೇಕಾಗಿದೆ
 • ಕಾಂಗ್ರೆಸ್​ನವರು ಎಷ್ಟೇ ಸುಳ್ಳು ಹೇಳಿದರು, ಅವರಿಗೆ ಗ್ಯಾರಂಟಿ ಕೊಡಬೇಡಿ
 • ಅತಿ ಹೆಚ್ಚಿನ ದಾಖಲೆ ಮಟ್ಟದಲ್ಲಿ ಬಿಜೆಪಿಯನ್ನು ಗೆಲ್ಲಿಸಿಕೊಡಬೇಕು
 • ರಾಜ್ಯದಲ್ಲಿನ ಬಿಜೆಪಿ ಅಭ್ಯರ್ಥಿಗಳನ್ನು ಭಾರೀ ಅಂತರದಿಂದ ಗೆಲ್ಲಿಸಿಕೊಡಿ
 • ಸೋಷಿಯಲ್ ಮೀಡಯಾದಲ್ಲಿ ನಮೋ (NAMO) ಕನ್ನಡ ಎಂದು ಶೇರ್ ಮಾಡಿ

ಕಾರ್ಯಕ್ರಮದಲ್ಲಿ ಇರುವ ಎಲ್ಲರೂ ತಮ್ಮ ಮೊಬೈಲ್​ ಅಲ್ಲಿ ಪ್ಲ್ಯಾಶ್ ಲೈಟ್ ಆನ್ ಮಾಡಿ, ಕನ್ನಡ ಭಾಷೆಗೆ ಗೌರವ ಕೊಡಬೇಕು ಎಂದು ಮೋದಿ ಹೇಳುತ್ತಿದ್ದಂತೆ ಜನರೆಲ್ಲ  ಪ್ಲ್ಯಾಶ್ ಲೈಟ್ ಆನ್ ಮಾಡಿ ಗೌರವ ಸೂಚಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನ ATM ಮಾಡಿಕೊಂಡಿದೆ’ ಸಿದ್ದು ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ

https://newsfirstlive.com/wp-content/uploads/2024/03/MODI_1.jpg

Load More