newsfirstkannada.com

ಮಹೀಂದ್ರಾ ಥಾರ್​ಗೆ ಸೆಡ್ಡು ಹೊಡೆಯಲು ಬಂತು ಗೂರ್ಖಾ! ಫೀಚರ್ಸ್​ ಸಖತ್ತಾಗಿದೆ, ಬುಕ್ಕಿಂಗ್​ ಆರಂಭಗೊಂಡಿದೆ.. ಆದ್ರೆ ಬೆಲೆ?

Share :

Published May 3, 2024 at 2:36pm

    5 ಡೋರ್​ ಆವೃತ್ತಿಯೊಂಗಿಗೆ ಮಾರುಕಟ್ಟೆಗೆ ಬಂತು ಹೊಸ ಗೂರ್ಖಾ

    2.6 ಲೀಟರ್​ ಮರ್ಸಿಡಿಸ್​ ಮೂಲದ ಡೀಸೆಲ್​ ಎಂಜಿನ್ನೊಂದಿಗೆ ಎಂತು ಹೊಸ ವಾಹನ

    ಟಿಲ್ಟ್​​ ಮತ್ತು ಟೆಲಿಸ್ಕೋಪಿಕ್​ ಸ್ಟೀರಿಂಗ್​​ ವೀಲ್​ನೊಂದಿಗೆ ಬಂತ ಫೋರ್ಸ್​ ಗೂರ್ಖಾ

ಬಹುತೇಕರು ಕಾಯುತ್ತಿದ್ದ ಫೋರ್ಸ್​ ಗೂರ್ಖಾ ಅಂತಿಮವಾಗಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹೊಸ ಅವತಾರದ ಜೊತೆಗೆ ಹಲವು ಫೀಚರ್ಸ್​​ಗಳನ್ನು ಹೊಸ ವಾಹನ ಹೊಂದಿದೆ.

ಹೊಸ ಫೋರ್ಸ್​ ಗೂರ್ಖಾ 5 ಡೋರ್​ ಆವೃತ್ತಿಯೊಂಗಿಗೆ ಮಾರುಕಟ್ಟೆಗೆ ಬಂದಿದೆ. ಈ ಹಿಂದೆ ಪರಿಚಯಿಸಿದ್ದ 3 ಡೋರ್​ ನವೀಕರಣವನ್ನು ಪಡೆಯುವ ಮೂಲಕ ಭಾರತದ ಮಾರುಕಟ್ಟೆಗೆ ಕಾಲಿಟ್ಟಿದೆ.

ಡೆಲಿವರಿ ಆರಂಭ

ಈಗಾಗಲೇ ಬುಕ್ಕಿಂಗ್​ ಆರಂಭಗೊಂಡಿದ್ದು, ಮುಂಗಡವಾಗಿ 25 ಸಾವಿರ ರೂಪಾಯಿ ನೀಡಬೇಕಿದೆ. ಇದಲ್ಲದೆ, ಈ ವಾರದಿಂದ ಡೆಲಿವರಿ ನೀಡುತ್ತಿದೆ. ಜೊತೆಗೆ ಟೆಸ್ಟ್​ ಡ್ರೈವ್​ ಅವಕಾಶವನ್ನು ನೀಡಿದೆ.

ಹೊಸ ಗೂರ್ಖಾ ಮರುವಿನ್ಯಾಸದೊಂದಿಗೆ ಬಂದಿದೆ. ಸಿಂಗಲ್​ ಸ್ಲ್ಯಾಟ್​​ ಗ್ರಿಲ್​, ಎಲ್​ಇಡಿ ಹೆಡ್​ಲ್ಯಾಂಪ್​, ಫಾಗ್​ಲ್ಯಾಂಪ್​ ಒಳಗೊಂಡಿದೆ. 18 ಇಂಚಿನ ಚಕ್ರ, ಟೈಲ್​ಗೇಟ್​ -ಮೌಂಡೆಟ್​​ ಸ್ಪೇರ್​ ವೀಲ್​ ಜೊತೆಗೆ ಬಂದಿದೆ.

ವಿಶೇಷತೆ ಹೇಗಿದೆ?

2024ರ ಫೋರ್ಸ್​ ಗೂರ್ಖಾ 9.0 ಇಂಚಿನ ಟಚ್​ಸ್ಕ್ರೀನ್​ ಇನ್ಫೋಟೈನ್​ಮೆಂಟ್​​ ಸಿಸ್ಟಂ, ಆ್ಯಪಲ್​ ಕಾರ್​ಪ್ಲೇ, ಆ್ಯಂಡ್ರಾಯ್ಡ್​​ ಅಟೋ, ಡಿಟಿಜಲ್​ ಇನ್ಟ್ಸ್ಟ್ರುಮೆಂಟ್​​ ಕ್ಲಸ್ಟರ್​, ಟಿಲ್ಟ್​​ ಮತ್ತು ಟೆಲಿಸ್ಕೋಪಿಕ್​ ಸ್ಟೀರಿಂಗ್​​ ವೀಲ್​, ಹಿಂಬದಿ ಕ್ಯಾಮೆರಾ, ಟೈರ್​ ಪ್ರೆಶರ್​ ಮಾನಿಟರಿಂಗ್​ ಸಿಸ್ಟಂ ಹೇರಿ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿವೆ.

ಎಂಜಿನ್

ನೂತನ ಗೂರ್ಖಾ 2.6 ಲೀಟರ್​ ಮರ್ಸಿಡಿಸ್​ ಮೂಲದ ಡೀಸೆಲ್​ ಎಂಜಿನ್​ ಹೊಂದಿದೆ. 140 ಬಿಹೆಚ್​ಪಿ ಮತ್ತು 320 ಎನ್​ಎಮ್​ ಟ್ಯೂನ್​ ಮಾಡಲಾಗಿದೆ.

ಥಾರ್​ಗೆ ಪೈಪೋಟಿ

ಮಹೀಂದ್ರಾ ಥಾರ್​ಗೆ ನೂತನ ಫೋರ್ಸ್​ ಗೂರ್ಖಾ ಪ್ರತಿಸ್ಪರ್ಧಿಯಾಗಿದೆ. ಸದ್ಯ 3 ಡೋರ್​ ಥಾರ್​ಗೆ ಪೈಪೋಟಿ ನೀಡಲು 5 ಡೋರ್​ನೊಂದಿಗೆ ಮಾರುಕಟ್ಟೆಗೆ ಬಂದಿದೆ. ಮಹೀಂದ್ರಾ ಸದ್ಯದಲ್ಲೇ 5 ಡೋರ್​ ಥಾರ್​ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ.

ಇದನ್ನೂ ಓದಿ: ವಾರೆವ್ಹಾ.. ಸಖತ್ತಾಗಿದೆ ಹೊಸ ಮಾರುತಿ ಸುಜುಕಿ ಸ್ವಿಫ್ಟ್; ಮೇ 9ಕ್ಕೆ ಲಾಂಚ್​, ಬೆಲೆ ಎಷ್ಟು?

ಬೆಲೆ ಎಷ್ಟು?

ಮಾರುಕಟ್ಟೆಯಲ್ಲಿ ಫೋರ್ಸ್​ ಗೂರ್ಖಾ 3 ಡೋರ್​ ಬೆಲೆ 16.75 ಲಕ್ಷವಿದೆ. ಆದರೆ ಹೊಸ ಫೋರ್ಸ್​ ಗೂರ್ಖಾ 5 ಡೋರ್​ ಬೆಲೆ 18 ಲಕ್ಷ ರೂಪಾಯಿ ಇರಲಿದೆ.(ಹೆಚ್ಚಿನ ಮಾಹಿತಿಗಾಗಿ ಶೋ ರೂಂ ವಿಚಾರಿಸಿರಿ)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹೀಂದ್ರಾ ಥಾರ್​ಗೆ ಸೆಡ್ಡು ಹೊಡೆಯಲು ಬಂತು ಗೂರ್ಖಾ! ಫೀಚರ್ಸ್​ ಸಖತ್ತಾಗಿದೆ, ಬುಕ್ಕಿಂಗ್​ ಆರಂಭಗೊಂಡಿದೆ.. ಆದ್ರೆ ಬೆಲೆ?

https://newsfirstlive.com/wp-content/uploads/2024/05/Force-Gurkha.jpg

Load More