newsfirstkannada.com

‘ಅಷ್ಟು ಬೇಗ ಸೋಲಲ್ಲ.. ನಮ್ದು ಏಕ್​ ಮಾರ್ ದೋ ತುಕ್ಡಾ’ ಎಂದು ದರ್ಶನ್ ಹೇಳಿದ್ದು ಯಾರಿಗೆ?

Share :

Published February 4, 2024 at 9:22am

  ಹಾಯ್ ಅಲ್ಲಿ ಸಿಗ್ತೀನಿ, ಇಲ್ಲಿ ಸಿಗ್ತೀನಿ ಅಂತ ಡವ್ ಮಾಡೋಕೆ ಬರಲ್ಲ

  ಹಂಪಿ ಉತ್ಸವದಲ್ಲಿ ಸಚಿವ ಜಮೀರ್​ ಅಹ್ಮದ್​ರನ್ನ ಹೊಗಳಿದ ನಟ

  ಎಲೆಕ್ಷನ್​ ಟೈಮ್​ನಲ್ಲಿ ನನ್ನಿಂದ ಯಾವುದೇ ಸಹಾಯ ಪಡೆದುಕೊಂಡಿಲ್ಲ

ಹಂಪಿ ಉತ್ಸವದ 2ನೇ ದಿನಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸ್ಯಾಂಡಲ್​ವುಡ್​ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅದ್ಧೂರಿ ಚಾಲನೆ ನೀಡಿದರು. ದರ್ಶನ್ ಆಗಮನದಿಂದ ಉತ್ಸವಕ್ಕೂ, ಕಾರ್ಯಕ್ರಮಕ್ಕೂ ಮತ್ತಷ್ಟು ಮೆರುಗು ಬಂದಿತು. ಇದೇ ವೇಳೆ ಉತ್ಸವದ ವೇದಿಕೆಯಲ್ಲಿ ದರ್ಶನ್ ಅವರು ಮಾತನಾಡಿದ್ದಾರೆ.

ನಾನು ಯಾರ ಹತ್ತಿರನೂ ಅಷ್ಟು ಬೇಗ ಸೋಲಲ್ಲ. ತುಂಬಾ ಕ್ಯಾಲ್ಕುಲೇಟೆಡ್ ಮಾಡಿ ಹೇಳ್ತಿದ್ದೀನಿ.. ಬೇಡಪ್ಪಾ ನೀವು ಅಲ್ಲೇ ಇರಿ, ನಾವು ಇಲ್ಲೇ ಇರುತ್ತೇನೆ. ಯಾಕಂದರೆ ನಮ್ಮದು ಏಕ್​ ಮಾರ್ ದೋ ತುಕ್ಡಾ. ಹಾಯ್ ಅಲ್ಲಿ ಸಿಗ್ತೀನಿ, ಇಲ್ಲಿ ಸಿಗ್ತೀನಿ ಎಂದು ಡವ್ ಮಾಡೋಕೆಲ್ಲ ನಂಗೆ ಬರಲ್ಲ. ಇಷ್ಟ ಆದರೆ ತುಂಬಾ ಇಷ್ಟದಿಂದ ಹೇಳುತ್ತೇವೆ. ಕಷ್ಟ ಆದ್ರೆ ಅಪ್ಪಾ ಅಲ್ಲೇ ಇದ್ದು ಬಿಡಪಾ, ನಾನು ಇಲ್ಲೇ ಇರುತ್ತೀನಿ ಎಂದು ಹೇಳ್ತೇನೆ ಎಂದು ದರ್ಶನ್ ಕುಟುಕಿದ್ದಾರೆ.

ಇದೇ ವೇಳೆ ಸಚಿವ ಜಮೀರ್ ಅಹಮ್ಮದ್​​ರನ್ನು ಹೊಗಳಿದ ದರ್ಶನ್, ಅವರು ಇದುವರೆಗೂ ಯಾವುದೇ ಕಾರ್ಯಕ್ರಮಕ್ಕೆ ಕರೆದಿಲ್ಲ. ರಾಮನಗರದಲ್ಲಿ ಯಾವುದೋ ಒಂದು ಆಂಜನೇಯ ದೇವಾಸ್ಥಾನ ಉದ್ಘಾಟನೆಗೆ ಕರೆದುಕೊಂಡು ಹೋಗಿದ್ದರು. ಅದೇ ಎಲೆಕ್ಷನ್​ ಟೈಮ್​ನಲ್ಲಿ ನಾವೇನಾದರೂ ಬರ್ಲಾ ಅಳಿಲು ಸೇವೆಗೆ ಎಂದು ಕೇಳಿದ್ದೆ. ಆದರೆ ಅವರು ಬೇಡ ಎಂದರು. ಬೇರೆಯವರಿಗಾಗಿ ಬೇಜಾನ್ ಕ್ಯಾಂಪೇನ್ ಮಾಡಿದ್ದೇವೆ. ಆದರೆ ಅವರು ಗೆದ್ದ ಮೇಲೂ, ಸೋತ ಮೇಲೂ ನಮ್ಮನ್ನ ತಿರುಗಿ ನೋಡಲೇ ಇಲ್ಲ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಅಷ್ಟು ಬೇಗ ಸೋಲಲ್ಲ.. ನಮ್ದು ಏಕ್​ ಮಾರ್ ದೋ ತುಕ್ಡಾ’ ಎಂದು ದರ್ಶನ್ ಹೇಳಿದ್ದು ಯಾರಿಗೆ?

https://newsfirstlive.com/wp-content/uploads/2024/02/DARSHAN-3.jpg

Load More