newsfirstkannada.com

ಕೋಟಿಗೊಬ್ಬ ರಾಮುಲು.. ಬಳ್ಳಾರಿ BJP ಅಭ್ಯರ್ಥಿ ಆಸ್ತಿ ವಿವರ ಘೋಷಣೆ; ಹೆಚ್ಚಾಗಿದ್ದು ಎಷ್ಟು ಕೋಟಿ?

Share :

Published April 12, 2024 at 9:32pm

    ಚುನಾವಣಾ ಆಯೋಗಕ್ಕೆ ಸಂಪೂರ್ಣ ಆಸ್ತಿ ವಿವರ ಸಲ್ಲಿಸಿದ ಬಿ. ಶ್ರೀರಾಮುಲು

    ಬಿ. ಶ್ರೀರಾಮುಲು ಪತ್ನಿ ಭಾಗ್ಯಲಕ್ಷ್ಮೀ ಬಳಿ ಇರುವ ಒಟ್ಟು ಆಸ್ತಿಯ ಮೌಲ್ಯ ಎಷ್ಟು?

    ಪತ್ನಿ ಭಾಗ್ಯಲಕ್ಷ್ಮಿ ಹಾಗೂ ಶಾಸಕ ಕೃಷ್ಣ ನಾಯಕ್ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ

ಬಳ್ಳಾರಿ: ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಲೋಕಸಭಾ ಚುನಾವಣೆಯ ಅಭ್ಯರ್ಥಿಗಳು ಬಿರು ಬಿಸಿಲಿನಲ್ಲಿ ಪ್ರಚಾರದಲ್ಲಿ ಬ್ಯುಸಿಯಾಗಿದ್ದರೆ, ಇನ್ನೂ ಕೆಲವರು ನಾಮಪತ್ರ ಸಲ್ಲಿಸುವಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರೋ ಬಿ. ಶ್ರೀರಾಮುಲು ಇಂದು ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಸುವ ವೇಳೆ ಬಿ. ಶ್ರೀರಾಮುಲು ಅವರು ತಮ್ಮ ಆಸ್ತಿ ಬಗ್ಗೆ ವಿವರ ನೀಡಿದ್ದಾರೆ. ಬಳ್ಳಾರಿ ಲೋಕಸಭಾ ಬಿಜೆಪಿ‌ ಅಭ್ಯರ್ಥಿಯಾಗಿರೋ ಬಿ. ಶ್ರೀರಾಮುಲು ಅವರ ಬಳಿ ಒಟ್ಟು ಆಸ್ತಿಯ ಮೌಲ್ಯ 45.88 ಕೋಟಿ ರೂಪಾಯಿ ಇದೆ. ಪ್ರಸ್ತುತವಾಗಿ ಅವರ ಬಳಿ ಇರುವ ನಗದು 5.50 ಲಕ್ಷ ರೂಪಾಯಿ. ಬಿ. ಶ್ರೀರಾಮುಲು ಅವರ ಒಟ್ಟು ಚರಾಸ್ತಿ ಸುಮಾರು 6.22 ಕೋಟಿ ರೂಪಾಯಿ. ಒಟ್ಟು ಸ್ಥಿರಾಸ್ತಿ 39.65 ಕೋಟಿ ಇದೆ. ಬಿ. ಶ್ರೀರಾಮುಲು ಅವರ ಬಳಿ ಬಿಎಂಡಬ್ಲ್ಯು, ಇನೋವಾ ಕಾರು, ಅಶೋಕ್‌ ಲೇಲ್ಯಾಂಡ್ ಬಸ್‌ ಇದೆ. 4.27 ಕೆ.ಜಿ ಚಿನ್ನ, 9.50 ಕೆ.ಜಿ ಬೆಳ್ಳಿ ಇದ್ದು, ಬಿ. ಶ್ರೀರಾಮುಲು ಮಾಡಿರುವ ಒಟ್ಟು ಸಾಲ 6.69 ಕೋಟಿ ರೂಪಾಯಿ. ಇವರ ಮೇಲೆ ಒಟ್ಟು 4 ಕ್ರಿಮಿನಲ್​ ಕೇಸ್​ಗಳು ದಾಖಲಾಗಿವೆ.

ಇದನ್ನೂ ಓದಿ: ಕೂಲ್‌.. ಕೂಲ್‌.. ರಾಜ್ಯದಲ್ಲಿ ಇಂದು ಗುಡುಗು ಸಿಡಿಲು ಸಹಿತ ಭಾರೀ ಮಳೆ; ಎಲ್ಲೆಲ್ಲಿ ವರ್ಷಧಾರೆ?

ಇನ್ನು, ಪತ್ನಿ ಭಾಗ್ಯಲಕ್ಷ್ಮೀ ಬಳಿ ಇರುವ ಒಟ್ಟು ಆಸ್ತಿಯ ಮೌಲ್ಯ 22.57 ಕೋಟಿ ರೂಪಾಯಿ ಇದೆ. ನಗದು 2.50 ಲಕ್ಷ ಇದ್ದು, ಪತ್ನಿ ಭಾಗ್ಯಲಕ್ಷ್ಮೀ ಬಳಿ ಇರೋ ಒಟ್ಟು ಚರಾಸ್ತಿ 2.28 ಕೋಟಿ, ಸ್ಥಿರಾಸ್ತಿ 20.29 ಕೋಟಿ ಇದೆ. ಪತ್ನಿ ಭಾಗ್ಯಲಕ್ಷ್ಮೀ ಬಳಿ 2.33 ಕೆ.ಜಿ ಚಿನ್ನ ಇದ್ದು, ಬೆಳ್ಳಿ ಹಾಗೂ ಯಾವುದೇ ಕೈ ಸಾಲ ಮಾಡಿಕೊಂಡಿಲ್ಲ. ಬಿ. ಶ್ರೀರಾಮುಲು ಅವರು ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರಿಗೆ ಉಮೇದುವರಿಕೆ ಸಲ್ಲಿಸಿದರು. ಬಿ. ಶ್ರೀರಾಮುಲು ಅವರ ಜೊತೆಗೆ ಪತ್ನಿ ಭಾಗ್ಯಲಕ್ಷ್ಮಿ, ಪುತ್ರಿಯರು, ಜನಾರ್ದನ ರೆಡ್ಡಿ ಪತ್ನಿ ಅರುಣಾ, ಮಾಜಿ ಸಚಿವ ಆನಂದ್ ಸಿಂಗ್, ಶಾಸಕ ಕೃಷ್ಣ ನಾಯಕ್, ನೇಮರಾಜ್ ನಾಯಕ್‌ ಕೂಡ ಬಂದಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೋಟಿಗೊಬ್ಬ ರಾಮುಲು.. ಬಳ್ಳಾರಿ BJP ಅಭ್ಯರ್ಥಿ ಆಸ್ತಿ ವಿವರ ಘೋಷಣೆ; ಹೆಚ್ಚಾಗಿದ್ದು ಎಷ್ಟು ಕೋಟಿ?

https://newsfirstlive.com/wp-content/uploads/2023/11/SRI_RAMULU.jpg

Load More