newsfirstkannada.com

2024 ಲೋಕಸಭಾ ಚುನಾವಣೆ ದಿನಾಂಕ ಘೋಷಣೆ; ಸುದ್ದಿಗೋಷ್ಟಿಯ ಹೈಲೈಟ್ಸ್‌ ಇಲ್ಲಿದೆ

Share :

Published March 16, 2024 at 3:18pm

Update March 16, 2024 at 4:03pm

  2024ರ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ

  18ನೇ ಲೋಕಸಭಾ ಚುನಾವಣೆಯಲ್ಲಿ 97 ಕೋಟಿ ಮತದಾರರು

  ದೆಹಲಿಯ ವಿಜ್ಞಾನ ಭವನದಲ್ಲಿ ಚುನಾವಣಾ ಆಯೋಗ ಸುದ್ದಿಗೋಷ್ಟಿ

ನವದೆಹಲಿ: 2024ರ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡಲಾಗುತ್ತಿದೆ. ಕೇಂದ್ರ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಸುದ್ದಿಗೋಷ್ಟಿಯಲ್ಲಿ ಚುನಾವಣೆಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಒಟ್ಟು 97 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹತೆಯನ್ನು ಹೊಂದಿದ್ದಾರೆ.

ಚುನಾವಣಾ ಆಯೋಗದ ಸುದ್ದಿಗೋಷ್ಟಿ 

ವಿಶ್ವದ ಅತಿ ದೊಡ್ಡ ಮತದಾನಕ್ಕೆ ನಾವು ತಯಾರಾಗಿದ್ದೇವೆ
ಈ ಬಾರಿ ಒಟ್ಟು 97 ಕೋಟಿ ಜನರು ಮತದಾನ ಮಾಡಲಿದ್ದಾರೆ
ದೇಶಾದ್ಯಂತ 10.9 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತೆ
1.5 ಕೋಟಿ ಸಿಬ್ಬಂದಿ ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ

ದೇಶದಲ್ಲಿ ಒಟ್ಟು ಪುರುಷ ಮತದಾರರ ಸಂಖ್ಯೆ 49.7 ಕೋಟಿ
ದೇಶದಲ್ಲಿ ಒಟ್ಟು ಮಹಿಳಾ ಮತದಾರರ ಸಂಖ್ಯೆ 47.1 ಕೋಟಿ
ದೇಶದಲ್ಲಿ ಮೊದಲ ಬಾರಿ ಮತದಾನ ಮಾಡುವವರ ಸಂಖ್ಯೆ 1.8 ಕೋಟಿ
48,೦೦೦ ಜನ ಲಿಂಗ ಪರಿವರ್ತಿತ ಮತದಾರರಿದ್ದಾರೆ
82 ಲಕ್ಷ ಮತದಾರರು 85 ವರ್ಷ ಮೇಲ್ಪಟ್ಟವರು
2.18 ಲಕ್ಷ ಮತದಾರರು ನೂರು ವರ್ಷ ಪೂರೈಸಿದವರಿದ್ದಾರೆ
88.4 ಲಕ್ಷ ವಿಶೇಷ ಚೇತನ ಮತದಾರರು ಇದ್ದಾರೆ
40ಕ್ಕಿಂತ ಹೆಚ್ಚು ವಿಶೇಷ ಚೇತನ ಮತದಾರರಿದ್ದರೆ ವಿಶೇಷ ಸೌಲಭ್ಯ
ಪ್ರತಿ ಮತಗಟ್ಟೆಯಲ್ಲೂ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ
ಅವರ ಮನೆಗೆ ತೆರಳಿ ಮತ ಪಡೆಯೋ ಕೆಲಸ‌ ಆಯೋಗ ಮಾಡಲಿದೆ
ಕ್ರಿಮಿನಲ್ ಹಿನ್ನೆಲೆ ಇರೋ ವ್ಯಕ್ತಿಗಳು ಇದ್ದರೆ ಅವರ ವಿವರವನ್ನು ಸ್ಥಳೀಯ ಪೇಪರ್ ಮತ್ತು ಟಿವಿಗಳಲ್ಲಿ ಮಾಹಿತಿ ನೀಡಬೇಕು
ರಾಷ್ಟ್ರೀಯ ಪಕ್ಷಗಳು ಅವರ ಅಭ್ಯರ್ಥಿಗಳ ಬಗ್ಗೆ ಮಾಹಿತಿ ನೀಡಬೇಕು
ಚುನಾವಣಾ ಸಮಯದಲ್ಲಿ ಅಕ್ರಮಗಳ ಮೇಲೆ ಹದ್ದಿನ ಕಣ್ಣು
ದೇಶದ ವಿಮಾನ ನಿಲ್ದಾಣದಲ್ಲಿ ಹೈ ಸೆಕ್ಯೂರಿಟಿ, ಪರಿಶೀಲನೆ
ರೈಲ್ವೆ ನಿಲ್ದಾಣ ಹಾಗೂ ರಸ್ತೆ ಮಾರ್ಗದಲ್ಲಿ ಅಕ್ರಮ ಹಣ ಸಾಗಾಣಿಕೆ ಬ್ರೇಕ್‌
ನಗದು ಹಾಗೂ ಹಣ ಸಾಗಾಣಿಕೆಯ ಮೇಲೆ ಚುನಾವಣಾ ಆಯೋಗ ಕಣ್ಣು
ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಮಾಹಿತಿ ಪ್ರಸಾರ ಮಾಡಿದ್ರೆ ಅಪರಾಧ
ಸೋಷಿಯಲ್ ಮೀಡಿಯಾಗಳ ಮೇಲೆ ಈ ಬಾರಿ ತೀವ್ರ ನಿಗಾ
ಮತದಾನ ಮುಕ್ತಾಯವರೆಗೂ ತಪ್ಪು ಸಂದೇಶ ಪ್ರಸಾರ ಮಾಡಿದ್ರೆ ಕಡಿವಾಣ
ರಾಜಕೀಯ ಪಕ್ಷಗಳಿಗೂ ಚುನಾವಣಾ ಆಯೋಗದಿಂದ ಕಠಿಣ ಸಂದೇಶ
ರಾಜಕೀಯ ಪಕ್ಷಗಳು ಪ್ರಚಾರದ ವೇಳೆ ರೆಡ್‌ ಲೈನ್ ಕ್ರಾಸ್‌ ಮಾಡಬೇಡಿ
ಚುನಾವಣಾ ಪ್ರಚಾರದ ಭಾಷಣದ ವೇಳೆ ಅಸಭ್ಯ ಶಬ್ದಗಳ ಬಳಕೆ ಬೇಡ
ಚುನಾವಣಾ ಪ್ರಚಾರ ಕಾರ್ಯದಲ್ಲಿ ಮಕ್ಕಳನ್ನು ಬಳಕೆ ಮಾಡುವಂತಿಲ್ಲ
ಪ್ರಚಾರದಲ್ಲಿ ಮಕ್ಕಳನ್ನು ಬಳಕೆ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುವುದು
ವಿಶೇಷವಾಗಿ 2100 ಚುನಾವಣಾ ವೀಕ್ಷಕರನ್ನು ನೇಮಕ ಮಾಡಲಾಗುತ್ತದೆ
ದೇಶಾದ್ಯಂತ 26 ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ
ಬಿಹಾರ, ಹರಿಯಾಣ, ತೆಲಂಗಾಣ, ಹಿಮಾಚಲ ಪ್ರದೇಶ, ಕರ್ನಾಟಕ
ಕರ್ನಾಟಕದ ಸುರಪುರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ
ಮೇ 13ರಂದು ಆಂಧ್ರಪ್ರದೇಶ ವಿಧಾನಸಭೆ ಚುನಾವಣೆ
ಈ ಬಾರಿಯೂ 7 ಹಂತದಲ್ಲಿ ಲೋಕಸಭಾ ಚುನಾವಣೆ
ಏಪ್ರಿಲ್ 19ರಂದು ಮೊದಲ ಹಂತದ ಚುನಾವಣೆ
ಜೂನ್‌ 04ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟ

ಮೊದಲ ಹಂತ – 19 ಏಪ್ರಿಲ್
ಎರಡನೇ ಹಂತ – 26 ಏಪ್ರಿಲ್
ಮೂರನೇ ಹಂತ – 7 ಮೇ
ನಾಲ್ಕನೇ ಹಂತ – 13 ಮೇ
ಐದನೇ ಹಂತ – 20 ಮೇ
ಆರನೇ ಹಂತ – 25 ಮೇ
7ನೇ ಹಂತ – ಜೂನ್ 1
ಮತಎಣಿಕೆ – ಜೂನ್ 4

ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಿ.. 

ಚುನಾವಣಾ ಆಯೋಗದ ನೇರಪ್ರಸಾರ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ: LIVE : ಎಲೆಕ್ಷನ್ ದಿನಾಂಕ ಘೋಷಣೆ ಎಲೆಕ್ಷನ್ ಕಮಿಷನ್ ಸುದ್ದಿಗೋಷ್ಠಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

2024 ಲೋಕಸಭಾ ಚುನಾವಣೆ ದಿನಾಂಕ ಘೋಷಣೆ; ಸುದ್ದಿಗೋಷ್ಟಿಯ ಹೈಲೈಟ್ಸ್‌ ಇಲ್ಲಿದೆ

https://newsfirstlive.com/wp-content/uploads/2024/03/Election-Commission-1.jpg

Load More