newsfirstkannada.com

‘ನನಗೆ ಬೀದಿ ರಾಜಕೀಯ ಇಷ್ಟ ಇಲ್ಲ, ಆದರೆ..’ -ಡಾಕ್ಟರ್ ಮಂಜುನಾಥ್ ಸ್ಪಷ್ಟನೆ

Share :

Published February 23, 2024 at 8:26am

    ಲೋಕಸಭೆ ಚುನಾವಣೆಗೆ ಇನ್ನೇನು ಎರಡು ತಿಂಗಳು ಅಷ್ಟೇ ಬಾಕಿ

    ಮಂಡ್ಯ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಲಿ ಎಂದು ಜನರ ಅಭಿಪ್ರಾಯ

    ಮೈಸೂರಿನಲ್ಲಿ ಮಾತನಾಡಿದ ಡಾ.ಸಿಎನ್ ಮಂಜುನಾಥ್ ಏನಂದ್ರು?

ಮೈಸೂರು: ಲೋಕಸಭಾ ಚುನಾವಣೆಗೆ ಕೇವಲ 2 ತಿಂಗಳಷ್ಟೇ ಬಾಕಿ ಇದ್ದು ಮತದಾನದ ಯುದ್ಧ ಹತ್ತಿರವಾಗುತ್ತಿದ್ದಂತೆ ಮಂಡ್ಯ ಚುನಾವಣಾ ಕಣ ರಂಗೇರಿದೆ. ಜಯದೇವ ಆಸ್ಪತ್ರೆ ಮಾಜಿ ನಿರ್ದೇಶಕ ಡಾ. ಸಿಎನ್ ಮಂಜುನಾಥ್ ಲೋಕಸಭಾ ಚುನಾವಣೆಗೆ ನಿಲ್ಲಬೇಕು ಎನ್ನುವ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಅದರಲ್ಲೂ ಮಂಡ್ಯದಿಂದಲೇ ಅವರು ಸ್ಪರ್ಧಿಸಲಿ ಎಂದು ಒತ್ತಾಯಿಸುತ್ತಿದ್ದಾರೆ. ಈ ಸಂಬಂಧ ಡಾ. ಸಿ.ಎನ್ ಮಂಜುನಾಥ್ ಅವರೇ ಮಾತಾಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಡಾ.ಸಿ.ಎನ್ ಮಂಜುನಾಥ್ ಅವರು, ರಾಜಕೀಯಕ್ಕೆ ಬರುವ ವಿಚಾರದಲ್ಲಿ ನನ್ನಲ್ಲಿ ಇನ್ನೂ ಗೊಂದಲಗಳಿವೆ. ಇನ್ನೂ ನನ್ನ ಪತ್ನಿ, ಮಕ್ಕಳು ಹಾಗೂ ಎಲ್ಲ ಕುಟುಂಬಸ್ಥರ ಜೊತೆ ನಾನು ಚರ್ಚೆ ಮಾಡಬೇಕಿದೆ. ಜನ ಹಾಗೂ ಮಾಧ್ಯಮದವರು ನನ್ನ ಮೇಲಿನ ಪ್ರೀತಿಯಿಂದ ನನ್ನ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡುತ್ತಿದ್ದಾರೆ. ಜಯದೇವ ಸಂಸ್ಥೆಯಲ್ಲಿ ಮಾಡಿದ ಒಳ್ಳೆಯ ಕೆಲಸದ ನೀರಿಕ್ಷೆಯಲ್ಲೇ ಈ ಒತ್ತಾಯಗಳು ಕೇಳಿ ಬರುತ್ತಿವೆ. ನನಗೆ ಬೀದಿ ರಾಜಕೀಯ ಇಷ್ಟ ಇಲ್ಲ. ಅಭಿವೃದ್ಧಿಯ ಪಾಲಿಟಿಕ್ಸ್ ಬಗ್ಗೆ ಆಸಕ್ತಿ ಇದೆ. ರಾಜಕಾರಣ ಹೊಸ ಕ್ಷೇತ್ರ ಹೇಗೆ ಏನೂ ಎಂಬುವುದನ್ನ ನೋಡಬೇಕು. ಸದ್ಯಕ್ಕೆ ನಾನು ಯಾವ ತೀರ್ಮಾನವನ್ನ ಮಾಡಿಲ್ಲ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನನಗೆ ಬೀದಿ ರಾಜಕೀಯ ಇಷ್ಟ ಇಲ್ಲ, ಆದರೆ..’ -ಡಾಕ್ಟರ್ ಮಂಜುನಾಥ್ ಸ್ಪಷ್ಟನೆ

https://newsfirstlive.com/wp-content/uploads/2024/02/CN_MANJUNATH.jpg

Load More