newsfirstkannada.com

ಕರ್ನಾಟಕದಲ್ಲಿ 20 ಸೀಟು ಗೆಲ್ಲೋದು ಯಾರು? ಕಾಂಗ್ರೆಸ್ಸಾ ಅಥವಾ ಬಿಜೆಪಿ-ಜೆಡಿಎಸ್ಸಾ?

Share :

Published April 2, 2024 at 6:09am

  ಸಿಎಂ ಗ್ಯಾರೆಂಟಿ ಗೆಲುವಿನ ಮಾತಿಗೆ ಆರ್​.ಅಶೋಕ್​ ಲೇವಡಿ

  ಟಾರ್ಗೆಟ್ 20​ ರೀಚ್ ಆಗಲು ಸಿದ್ದರಾಮಯ್ಯ ರಂಗಪ್ರವೇಶ

  ಮೈಸೂರು- ಚಾಮರಾಜನಗರ ಎರಡೂ ಗೆಲ್ತೀವಿ ಎಂದ ಸಿಎಂ

ಬಿಜೆಪಿ ಜೆಡಿಎಸ್‌ನ 20-20 ಸರ್ಕಾರದ ಬಳಿಕ ಈ 20 ಅನ್ನೋ ನಂಬರ್‌ ಹೆಚ್ಚು ಸದ್ದು ಮಾಡ್ತಿರೋದು ಈ ಬಾರಿಯ ಲೋಕಸಭಾ ಅಖಾಡದಲ್ಲೇ. ಬಾಯಲ್ಲಿ ಎಲ್ರೂ 28ಕ್ಕೆ 28 ಅಂತ ಹೇಳ್ತಿದ್ರೂ ಕಾಂಗ್ರೆಸ್, ಬಿಜೆಪಿ ಇಬ್ಬರ ಟಾರ್ಗೆಟ್‌ ಇರೋದು ಕನಿಷ್ಟ 20 ಸೀಟ್‌ಗಳನ್ನ ಗೆಲ್ಲಲೇಬೇಕು ಅನ್ನೋದು. ಅದರಲ್ಲೂ ಸಿಎಂ ಸಿದ್ದರಾಮಯ್ಯ ಅಂತೂ 20 ಸೀಟ್‌ಗಳನ್ನ ಗೆಲ್ಲಿಸಿಕೊಳ್ಳುವಲ್ಲಿ ಹೆಚ್ಚು ಫೋಕಸ್‌ ಮಾಡ್ತಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡಂತೆ ರಾಜ್ಯಾದ್ಯಂತ ಸಂಚರಿಸೋಕೂ ಪ್ಲ್ಯಾನ್‌ ಮಾಡಿದ್ದಾರೆ ಸಿಎಂ ಸಿದ್ದರಾಮಯ್ಯ.

ಅತ್ತ ಕೇಸರಿ ಪಾಳಯ ರಾಜ್ಯದಲ್ಲಿ 20+ ಟಾರ್ಗೆಟ್ ಇಟ್ಟುಕೊಂಡು ಅಬ್ಬರದ ಚುನಾವಣಾ ಪ್ರಚಾರ ಮಾಡ್ತಿದೆ. ಆದ್ರೆ ಅಖಾಡಕ್ಕೆ ಎಂಟ್ರಿಯಾಗಿರುವ ಹಸ್ತ ಪಡೆ 20 ಕ್ಷೇತ್ರ ನಮ್ಮದೇ ಅಂತ ಚುನಾವಣಾ ಪ್ರಚಾರದ ವೇಳೆ ಘಂಟಾಘೋಷವಾಗಿ ಹೇಳ್ಕೊಂಡು ಬರ್ತಿದ್ದಾರೆ. ಈ ನಡುವೆ ಟಾರ್ಗೆಟ್​ ರೀಚ್​ ಆಗಲು ಸಿಎಂ ಸಿದ್ದರಾಮಯ್ಯ ರಂಗಪ್ರವೇಶ ಮಾಡಿದ್ದಾರೆ.

20 ಕ್ಷೇತ್ರಗಳನ್ನ ಟಾರ್ಗೆಟ್‌ ಮಾಡಿಕೊಂಡ ಸಿಎಂ ಸಿದ್ದರಾಮಯ್ಯ

ಹಸ್ತ ಪಡೆಗೆ ಕಳೆದ ವಿಧಾನಸಭೆಯ 135 ಸ್ಥಾನಗಳ ಗೆಲುವೇ ಕಣ್ಮುಂದಿದೆ. ವಿಧಾನಸಭೆಯ ಈ ಅಭೂತಪೂರ್ವ ಗೆಲುವಿನ ಉತ್ಸಾಹದಲ್ಲೇ ಲೋಕಸಭೆಯಲ್ಲೂ ಕಮಾಲ್ ಮಾಡ್ತೀವಿ ಅಂತ ಕಾಂಗ್ರೆಸ್ ನಾಯಕರು ಕನಸು ಕಾಣ್ತಿದ್ದಾರೆ. ಆದ್ರೆ ಅದು ಅಷ್ಟು ಸುಲಭ ಅಂತೂ ಖಂಡಿತ ಇಲ್ಲ. ಸದ್ಯ ಈ 20+ ಟಾರ್ಗೆಟ್ ರೀಚ್​ ಆಗಲು ಹಸ್ತ ಪಡೆ ನಾನಾ ತಂತ್ರಗಳನ್ನು ಹೆಣೆಯುತ್ತಿದೆ. ರಾಜಕೀಯದ ಎಲ್ಲಾ ಪಟ್ಟುಗಳನ್ನು ಬಳಸಿಕೊಂಡು 20 ಸ್ಥಾನಗಳನ್ನು ಗೆಲ್ಲಬೇಕೆಂದು ಹಠಕ್ಕೆ ಬಿದ್ದಿದೆ. ಕಾಂಗ್ರೆಸ್​ ಕೂಡ ನಾವು 20 ಸ್ಥಾನಗಳನ್ನು ಗೆಲ್ಲುತ್ತೇವೆ ಅಂತ ವಿಶ್ವಾಸದಿಂದಲೇ ಹೇಳ್ತಿದೆ. ಈ ನಡುವೆ ಸಿಎಂ ಬಿಜೆಪಿ ಕಾಲೆಳೆದಿದ್ದು ಮಾತೆತ್ತಿದ್ರೆ ಬಿಜೆಪಿಯವರು 28 ಕ್ಕೆ 28 ಗೆದ್ದು ಬಿಡ್ತೀವಿ ಅಂತಾರೆ ಅಂತ ಕೇಸರಿ ಪಾಳಯದ ಲೇವಡಿ ಮಾಡಿದ್ದಾರೆ.

ಇನ್ನು, ಮೈಸೂರು- ಚಾಮರಾಜನಗರ ಎರಡೂ ಗೆಲ್ಲುತ್ತೇವೆ ಅಂತ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೈಸೂರಷ್ಟೇ ಕಾನ್ಸಟ್ರೆಟರ್ ಮಾಡಿಲ್ಲ, ಚಿತ್ರದುರ್ಗಕ್ಕೂ ಹೋಗ್ತಿರೋದಾಗಿ ಹೇಳಿದ್ದಾರೆ. ಈ ಮೂಲಕ ರಾಜ್ಯದ 20 ಕ್ಷೇತ್ರಗಳ ಮೇಲೆ ಸಿಎಂ ಕಣ್ಣಿಟ್ಟಿದ್ದಾರೆ. ಗ್ಯಾರಂಟಿಗಳನ್ನು ನೋಡಿ ಜನ ನಮಗೆ ಮತ ಹಾಕುತ್ತಾರೆ ಅನ್ನೋ ಆಧಾರದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ಕಾಂಗ್ರೆಸ್ 20 ಸ್ಥಾನಗಳಲ್ಲಿ ಗೆಲ್ಲುತ್ತೆ ಅಂತ ಹೇಳಿದ್ದಕ್ಕೆ ವಿಪಕ್ಷ ನಾಯಕ ಆರ್​ ಅಶೋಕ್ ಲೇವಡಿ ಮಾಡಿದ್ದಾರೆ. ಕಳೆದ ಬಾರಿಯೂ 20 ಗೆಲ್ಲುತ್ತಾರೆ ಅಂತಿದ್ರು. 1 ಮಾತ್ರವೇ ಗೆದ್ದಿರೋದು ಅಂತ ವ್ಯಂಗ್ಯ ವಾಡಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ 20ರ ಗೊಂಚಲಿನ ಮೇಲೆ ಕೇಸರಿ ಮಾತ್ರವಲ್ಲದೇ ಹಸ್ತ ನಾಯಕರು ಕೂಡ ಕಣ್ಣಿಟ್ಟಿದ್ದಾರೆ. ಇಬ್ಬರಲ್ಲಿ ಯಾರ ಬುಟ್ಟಿಗೆ ಈ 20ರ ಗೊಂಚಲು ಬೀಳುತ್ತೋ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕರ್ನಾಟಕದಲ್ಲಿ 20 ಸೀಟು ಗೆಲ್ಲೋದು ಯಾರು? ಕಾಂಗ್ರೆಸ್ಸಾ ಅಥವಾ ಬಿಜೆಪಿ-ಜೆಡಿಎಸ್ಸಾ?

https://newsfirstlive.com/wp-content/uploads/2024/04/siddu-hdd-bsy.jpg

Load More