Advertisment

ವಿರಾಟ್ ಕೊಹ್ಲಿ ಪಾಲಿಗೆ ಲಕ್ಕಿ ವರ್ಷ 2024! ಹೆಂಗೆ ಅನ್ನೋ ವಿವರ ಇಲ್ಲಿದೆ..!

author-image
Ganesh
Updated On
ಆರ್​​ಸಿಬಿ ಮುಂದಿನ ಕ್ಯಾಪ್ಟನ್​​ ಯಾರು? ಎಂದು ಸ್ಫೋಟಕ ಸುಳಿವು ಕೊಟ್ಟ ಮುಖ್ಯ ಕೋಚ್​; ಕೊಹ್ಲಿ ಕಥೆಯೇನು?
Advertisment
  • BGT ಟೆಸ್ಟ್​ ಆಡ್ತಿರುವ ಕಿಂಗ್ ವಿರಾಟ್ ಕೊಹ್ಲಿ
  • ಆಸಿಸ್ ಸರಣಿ ಬಳಿಕ ನಿವೃತ್ತಿ ಘೋಷಣೆ ಸಾಧ್ಯತೆ
  • ಟೆಸ್ಟ್​ ಕ್ರಿಕೆಟ್​ ನಿವೃತ್ತಿ ಘೋಷಣೆ ಬಗ್ಗೆ ವದಂತಿ

ಟೀಮ್ ಇಂಡಿಯಾ ಸೂಪರ್ ​ಸ್ಟಾರ್ ವಿರಾಟ್ ಕೊಹ್ಲಿ ಹೆಸರು ಕ್ರಿಕೆಟ್​​ ವಲಯದಲ್ಲಿ ಭಾರೀ ಚರ್ಚೆಯಾಗ್ತಿದೆ. ಕಳಪೆ ಫಾರ್ಮ್​ಗೆ ಸಿಲುಕಿರುವ ಕೊಹ್ಲಿ, ಸಿಡ್ನಿ ಟೆಸ್ಟ್ ನಂತರ ಕ್ರಿಕೆಟ್​​ಗೆ ಗುಡ್​ಬೈ ಹೇಳ್ತಾರೆ ಎನ್ನಲಾಗಿದೆ. ಇದೆಲ್ಲದರ ನಡುವೆ ಅವರಿಗೆ 2024 ಅದೃಷ್ಟದ ವರ್ಷವಾಗಿತ್ತು.

Advertisment

ಕೊಹ್ಲಿ ಪಾಲಿಗೆ ಲಕ್ಕಿ ವರ್ಷ!

ಕಿಂಗ್ ವಿರಾಟ್ ಕೊಹ್ಲಿ ಪಾಲಿಗೆ ಅದೃಷ್ಟದ ವರ್ಷ 2024. ಕಳೆದ ವರ್ಷ ಕೊಹ್ಲಿ ಬ್ಯಾಟ್​​ನಿಂದ ಜಬರ್​ದಸ್ತ್​ ಪ್ರದರ್ಶನ ಬಂದಿಲ್ಲ. ಟೆಸ್ಟ್, ಓನ್​ ಡೇ ಮತ್ತು ಟಿ-20 ಕ್ರಿಕೆಟ್​​ನಲ್ಲಿ ಕೊಹ್ಲಿಯದ್ದು ಸರಾಸರಿ ಪರ್ಫಾಮೆನ್ಸ್. ಆದರೂ 2024 ಕೊಹ್ಲಿಗೆ ಅತ್ಯಂತ ಲಕ್ ತಂದ ವರ್ಷ ಅನ್ನೋದೇ ಇಲ್ಲಿ ಸ್ಪೆಷಲ್.

ಇದನ್ನೂ ಓದಿ:ಮೊಟ್ಟೆ ಇಡದೇ ಜನ್ಮ ನೀಡುವ ಪ್ರಾಣಿ ಟೀಚರ್- ಮಕ್ಕಳ ಉತ್ತರಕ್ಕೆ ಬೇಸರಗೊಳ್ಳದೇ ಫುಲ್ ಮಾರ್ಕ್ಸ್​ ಕೊಟ್ಟ ಶಿಕ್ಷಕಿ

publive-image

ರನ್​ಗಳಿಸಿದ್ರೂ ಗಳಿಸದೇ ಇದ್ರೂ ದುಡ್ಡು!

ಕೊಹ್ಲಿ ಬ್ಯಾಟ್​​ನಿಂದ ರನ್​ಗಳಿಸ್ತಿದ್ರೆ ಟೀಮ್ ಇಂಡಿಯಾ ಮುಟ್ಟೋರು ಇರಲ್ಲ. ಹಾಗೇ ಕೊಹ್ಲಿ ರನ್​ಗಳಿಸ್ತಿದ್ರೆ ದಾಖಲೆಗಳ ಮೇಲೆ ದಾಖಲೆಗಳು ನಿರ್ಮಾಣವಾಗುತ್ತೆ. ದಿಗ್ಗಜರು ಬರೆದ ರೆಕಾರ್ಡ್​​ಗಳು ಉಡೀಸ್ ಆಗುತ್ತವೆ. ಕಾರ್ಪೊರೇಟ್ ಕಂಪನಿಗಳಂತೂ ಕೊಹ್ಲಿ ಮನೆ ಮುಂದೆ ಇರುತ್ವೆ. ಇದು ಕೊಹ್ಲಿ ಬ್ಯಾಟ್​​ಗಿರೋ ಪವರ್. ಮತ್ತೊಂದೆಡೆ ಕೊಹ್ಲಿ ರನ್​​ಗಳಿಸದೇ ಇದ್ದರೂ ನೋ ಪ್ರಾಬ್ಲಂ. ಜಾಹೀರಾತು ಕಂಪನಿಗಳಿಗೆ ಕೊಹ್ಲಿ ಬೇಕೇಬೇಕು. ರನ್​ಗಳಿಸದೇ ಇದ್ರೂ ಕೊಹ್ಲಿ ಸುದ್ದಿಯಾಗ್ತಾರೆ. ಅದರಿಂದಲೂ ಕಾರ್ಪೊರೇಟ್ ಕಂಪನಿಗಳು, ತಮ್ಮ ಬ್ರ್ಯಾಂಡ್​ಗಳನ್ನ ಪ್ರಮೋಟ್ ಮಾಡಿಕೊಳ್ಳುತ್ತವೆ.

Advertisment

ಇದನ್ನೂ ಓದಿ:2025ರ ಐಪಿಎಲ್​​; ಕೊಹ್ಲಿ ಆಪ್ತನಿಗೆ ಆರ್​​ಸಿಬಿ ಕ್ಯಾಪ್ಟನ್ಸಿ ಪಟ್ಟ ಗ್ಯಾರಂಟಿ!

publive-image

2024ರಲ್ಲಿ ಕೊಹ್ಲಿ ಗಳಿಸಿದ್ದು ಎಷ್ಟು ಕೋಟಿ?

ವರ್ಷ ವರ್ಷ ಕಂಪನಿಗಳು ತಮ್ಮ ಬೆಳೆಕಾಳು ಬೇಯಿಸಿಕೊಳ್ಳಲು ಕಿಂಗ್ ಕೊಹ್ಲಿ ಹಿಂದೆ ಬೀಳುತ್ತವೆ. 2024ರಲ್ಲಿ ಹೆಚ್ಚು ಹೆಚ್ಚು ಕಂಪನಿಗಳ ಪಾಲಿಗೆ ಕೊಹ್ಲಿ, ಮೋಸ್ಟ್ ಡಿಮ್ಯಾಂಡಿಂಗ್ ಪ್ಲೇಯರ್ ಆಗಿದ್ದರು. ಕಳೆದ ವರ್ಷ ಕೊಹ್ಲಿ ಜಾಹೀರಾತಿನಿಂದ 238 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ.

ಕೊಹ್ಲಿ ಬ್ರ್ಯಾಂಡ್ ವ್ಯಾಲ್ಯೂ ತಗ್ಗಲ್ಲ

ಕೊಹ್ಲಿ ಬ್ರ್ಯಾಂಡ್ ವ್ಯಾಲ್ಯೂ ಯಾವತ್ತೂ ತಗ್ಗಲ್ಲ. ಕೊಹ್ಲಿ ಹೆಸರಿನಲ್ಲೇ ದೊಡ್ಡ ದೊಡ್ಡ ಬ್ರ್ಯಾಂಡ್​​ಗಳು ಸಲೀಸಾಗಿ ಸೇಲಾಗಿ ಬಿಡುತ್ತವೆ. ಇದೇ ಕಾರಣಕ್ಕೆ ಕಂಪನಿಗಳು ಕೊಹ್ಲಿ ಮೇಲೆ ಕಣ್ಮುಚ್ಚಿ ಇನ್ವೆಸ್ಟ್ ಮಾಡುತ್ತವೆ. ಯಾಕೆಂದರೆ ಕಾರ್ಪೊರೇಟ್ ದುನಿಯಾಕ್ಕೆ ಕೊಹ್ಲಿ, ಡಾರ್ಲಿಂಗ್ ಇದ್ದಂಗೆ. ಕೊಹ್ಲಿ ಯಾವುದೇ ಬ್ರ್ಯಾಂಡ್ ಪ್ರಮೋಟ್ ಮಾಡಲಿ, ಅಲ್ಲಿ ಪ್ರೊಫೆಶನಲಿಸಂ ಇರುತ್ತದೆ. ಮಿಲಿಯನ್​ಗಟ್ಟಲೇ ಫಾಲೋವರ್ಸ್​ ಇರುವ ಕೊಹ್ಲಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬ್ರ್ಯಾಂಡ್​​ಗಳನ್ನ ಪ್ರಮೋಟ್ ಮಾಡ್ತಾರೆ. ಒಟ್ನಲ್ಲಿ ಕೊಹ್ಲಿ ರಿಟೈರ್ಮೆಂಟ್ ಸ್ಟೇಜ್​ನಲ್ಲಿದ್ರೂ ಅವರ ವ್ಯಾಲ್ಯೂ ಮತ್ತು ಬೇಡಿಕೆ ಮಾತ್ರ ಸ್ವಲ್ಪವೂ ಕಡಿಮೆಯಾಗಿಲ್ಲ. ಇದಕ್ಕೆ ಹೇಳೋದಲ್ವಾ.. ಕಿಂಗ್ ಈಸ್ ಆಲ್ವೇಸ್ ಕಿಂಗ್ ಅಂತ.

Advertisment

ಇದನ್ನೂ ಓದಿ:‘ನನ್ನ ನಿರ್ಧಾರ ಏನೆಂದರೆ..’ ಕೊನೆಗೂ ಉತ್ತರ ಕೊಟ್ಟ ಕ್ಯಾಪ್ಟನ್ ರೋಹಿತ್ ಶರ್ಮಾ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment