/newsfirstlive-kannada/media/post_attachments/wp-content/uploads/2024/06/NEET_NET_1.jpg)
ನವದೆಹಲಿ: ನೀಟ್-UG ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣ ಇಡೀ ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದೆ. ಪರೀಕ್ಷೆಯ ಕಳ್ಳಾಟದ ಒಂದೊಂದೇ ವಿಚಾರ ಬಯಲಾಗುತ್ತಿದ್ದಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ನಾಳೆ ಅಂದ್ರೆ ಜೂನ್ 23ರಂದು ದೇಶಾದ್ಯಂತ ನಡೆಯಬೇಕಿದ್ದ ನೀಟ್ - ಪಿಜಿ ಎಂಟ್ರೆನ್ಸ್ ಪರೀಕ್ಷೆಯನ್ನು ಮುಂದೂಡಲಾಗಿದೆ. ಕೇಂದ್ರ ಆರೋಗ್ಯ ಇಲಾಖೆ ಈ ಬಗ್ಗೆ ಮಹತ್ವದ ಮಾಹಿತಿ ಪ್ರಕಟಿಸಿದೆ.
ಸೋಷಿಯಲ್ ಮೀಡಿಯಾ X ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಆರೋಗ್ಯ ಇಲಾಖೆ, ಮುನ್ನೆಚ್ಚರಿಕೆ ಕ್ರಮವಾಗಿ ನೀಟ್-UG ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗಿದೆ. ಸದ್ಯದಲ್ಲೇ ಹೊಸ ಪರೀಕ್ಷಾ ದಿನಾಂಕವನ್ನು ಪ್ರಕಟಿಸುವುದಾಗಿ ತಿಳಿಸಿದೆ.
IMPORTANT ALERT
NEET-PG Entrance Examination, conducted by National Board of Examination postponed
New date will be notified at the earliesthttps://t.co/A5DLwBhgI8
— Ministry of Health (@MoHFW_INDIA)
IMPORTANT ALERT
NEET-PG Entrance Examination, conducted by National Board of Examination postponed
New date will be notified at the earliesthttps://t.co/A5DLwBhgI8— Ministry of Health (@MoHFW_INDIA) June 22, 2024
">June 22, 2024
ನಾಳೆ ದೇಶದ 270 ಪರೀಕ್ಷಾ ಕೇಂದ್ರಗಳಲ್ಲಿ 2.2 ಲಕ್ಷ ಅಭ್ಯರ್ಥಿಗಳು ನೀಟ್ - ಪಿಜಿ ಎಂಟ್ರೆನ್ಸ್ ಪರೀಕ್ಷೆ ಬರೆಯಬೇಕಾಗಿತ್ತು. ಪರೀಕ್ಷೆಯ ಪಾವಿತ್ರ್ಯತೆ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us