newsfirstkannada.com

ಪ್ರಣಯದೂರಿನಲ್ಲಿ ಪದಕಗಳ ಬೇಟೆಗೆ ವೇದಿಕೆ ಸಜ್ಜು: ಹೊನ್ನಿನ ಪದಕ ಹೊತ್ತು ತರುವ ಭಾರತೀಯ ಸ್ಪರ್ಧಿಗಳು ಯಾರು?

Share :

Published July 20, 2024 at 1:49pm

    ಪದಕಗಳ ಬೇಟೆಗೆ ವೇದಿಕೆ ಸಿದ್ಧ ಮಾಡಿಕೊಂಡಿರುವ ಪ್ರಣಯದೂರು

    ಈ ಬಾರಿ ಭಾರತಕ್ಕೆ ಬರಲಿವೆಯಾ ಅತಿ ಹೆಚ್ಚು ಬಂಗಾರದ ಪದಕಗಳು?

    ಹೊನ್ನಿನ ಪದಕಕ್ಕೆ ಮುತ್ತಿಡುವ ಭರವಸೆಯ ಹುರಿಯಾಳುಗಳು ಯಾರು?

ಪ್ಯಾರಿಸ್​: ಪ್ರೇಮಿಗಳ ನಗರಿ, ಪ್ರಣಯಕ್ಕೆ ಮತ್ತೊಂದು ಹೆಸರು ಪ್ಯಾರಿಸ್​. ಇಲ್ಲಿ ಹಗಲು ದೊಡ್ಡದು ರಾತ್ರಿ ಚಿಕ್ಕದು. ರಾತ್ರಿ 9 ಗಂಟೆ ಆದರೂ ಇಲ್ಲಿಂದ ಹೊರಡಲು ಸೂರ್ಯನೆಗೆ ಅದೆಂಥದೋ ಹಠ. ಇಂತಹ ಪ್ರಣಯದೂರಿನಲ್ಲೀಗ ಪದಕಗಳ ಬೇಟೆ ಆರಂಭವಾಗಲಿದೆ. ಈ ಬಾರಿಯ ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯವನ್ನು ಫ್ರಾನ್ಸ್ ವಹಿಸಿಕೊಂಡಿದ್ದು, ಇದೇ ಜುಲೈ 26 ರಿಂದ ಪದಕಗಳ ಬೇಟೆ ಆರಂಭವಾಗಲಿದೆ. ಸಿದ್ಧತೆಗಳು ಈಗಿನಿಂದಲೇ ಭರ್ಜರಿಯಾಗಿ ಆರಂಭಗೊಂಡಿವೆ.

ಒಲಂಪಿಕ್ ಅಂದ್ರೆ ಕ್ರೀಡಾಳುಗಳಿಗೆ ಕ್ರೀಡಾ ಪ್ರೇಮಿಗಳಿಗೆ ಹಬ್ಬವೇ ಸರಿ. ಅದು ಈ ಬಾರಿ ಫ್ರಾನ್ಸ್​ನಲ್ಲಿ ನಡೆಯುತ್ತಿರುವ ಒಲಂಪಿಕ್​ ಬೇರೆಯದ್ದೇ ರಂಗು ಪಡೆದಿದೆ. ನೆಪೋಲಿಯನ್ ಗೆಲುವಿನ ಪ್ರೇಮಿಗಳ ಒಲವಿನ ನೆಲದಲ್ಲಿ ನಡೆಯಲಿರುವ ಒಲಂಪಿಕ್​ನಲ್ಲಿ ಭಾರತವೂ ಕೂಡ ತನ್ನ ಕಟ್ಟಾಳುಗಳನ್ನು ಕಣಕ್ಕೆ ಇಳಿಸಿದೆ. ಹಾಗಿದ್ರೆ ಫ್ರಾನ್ಸ್​​ನಲ್ಲಿ ಹೇಗೆಲ್ಲಾ ಸಿದ್ಧತೆ ನಡೆಯುತ್ತಿದೆ. ಈ ಬಾರಿ ದೇಶಕ್ಕೆ ಬಂಗಾರದ ಪದಕ ತಂದುಕೊಡುತ್ತಾರೆ ಎಂದು ಯಾವೆಲ್ಲಾ ಸ್ಪರ್ಧಿಗಳ ಮೇಲೆ ವಿಶ್ವಾಸವಿದೆ. ಇದೆಲ್ಲದರ ವಿವರವನ್ನು ಒಂದೊಂದಾಗಿ ನೋಡುತ್ತಾ ಹೋಗೋಣ

ಇದನ್ನೂ ಓದಿ: ರೇಣುಕಾಸ್ವಾಮಿ ಮೇಲೆ ದರ್ಶನ್​ ಮಾಡಿರೋ ಹಲ್ಲೆ ವಿಡಿಯೋ ಸೆರೆ? 3 ಸೆಕೆಂಡ್​ನ ಕರಾಳತೆಯ ಸತ್ಯ ಕಕ್ಕಿದ ಈ ಆರೋಪಿ

ಪದಕಗಳ ಪಂದ್ಯಾಟಗಳಿಗೆ ಫ್ರಾನ್ಸ್ ಸಜ್ಜು!
ಪ್ಯಾರಿಸ್ ಅಂಗಳದಲ್ಲಿ ಜುಲೈ 26ರಂದು ಒಲಂಪಿಕ್ ಹಬ್ಬ ಆರಂಭವಾಗಲಿದೆ. ಜುಲೈ 26 ರಿಂದ ಆಗಸ್ಟ್ 11 ವರೆಗೆ ಈ ಪದಕಗಳ ಮಹಾಸಂಗ್ರಾಮ ನಡೆಯಲಿದೆ. ಒಟ್ಟು 10,500 ಅಥ್ಲೆಟ್ಸ್​ ಈ ಬಾರಿಯ ಒಲಂಪಿಕ್​ನಲ್ಲಿ ಭಾಗವಹಿಸಲಿದ್ದಾರೆ. ಒಟ್ಟು 329 ಕ್ರೀಡೆಗಳು ಜುಲೈ 26 ರಿಂದ ಆಗಸ್ಟ್ 11ರವರೆಗೆ ನಡೆಯಲಿವೆ. ಮುಂದೆ ಆಗಸ್ಟ್ 28 ರಿಂದ ಸೆಪ್ಟಂಬರ್ 8ರವರೆಗೆ ಪ್ಯಾರಾಒಲಂಪಿಕ್ ಸ್ಪರ್ಧೆಗಳಿಗೆ ಮುಹೂರ್ತ ನಿಗಧಿಯಾಗಿದೆ. ಜುಲೈನಿಂದ ನಡೆಯಲಿರುವ ಒಲಂಪಿಕ್​ ಕ್ರೀಡಾಕೂಟದಲ್ಲಿ ಒಟ್ಟು 206 ದೇಶಗಳು ಪಾಲ್ಗೊಳ್ಳಲಿವೆ. ಪ್ಯಾರಾ ಒಲಂಪಿಕ್​ನಲ್ಲಿ ಒಟ್ಟು 184 ದೇಶಗಳು ಸ್ಪರ್ಧೆಯ ಕಣದಲ್ಲಿ ಕಾಣಿಸಿಕೊಳ್ಳಲಿವೆ. ಹೀಗಾಗಿ ಎಲ್ಲಿಯೂ ಲೋಪವಾಗದಂತೆ ಫ್ರಾನ್ಸ್​ ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿದೆ.

ಇದನ್ನೂ ಓದಿ: ಕೊಡಗಿನಲ್ಲಿ ಕೇಳಿಬಂದ ಗುಂಡಿನ ಶಬ್ಧ.. ತಾಳಿ ಕಟ್ಟಿದ ಪತ್ನಿಯನ್ನೇ ಕೊಂದ ಬೋಪಣ್ಣ.. ಅಷ್ಟಕ್ಕೂ ಆಗಿದ್ದೇನು?

ಟ್ರಯಥ್ಲಾನ್ ಸ್ವಿಮ್ಮಿಂಗ್ ರದ್ದಾಗುವ ಆತಂಕ ದೂರ: ಪ್ಯಾರಿಸ್​ನ ಸೈನಿ ನದಿ ಸ್ವಚ್ಛ ಸ್ವಚ್ಛ

ಆರಂಭದಲ್ಲಿ ಈ ಬಾರಿ ಪ್ಯಾರಿಸ್​ನಲ್ಲಿ ನಡೆಯುವ ಒಲಂಪಿಕ್​ನಲ್ಲಿ ಟ್ರಯಥ್ಲಾನ್ ಸ್ವಿಮ್ಮಿಂಗ್​ ಸ್ಪರ್ಧೆಯನ್ನು ರದ್ದು ಮಾಡುವ ಆತಂಕಗಳು ಸೃಷ್ಟಿಯಾಗಿದ್ದವು. ನದಿಯ ನೀರು ಕಲುಷಿತಗೊಂಡಿರುವ ಕಾರಣ ಸ್ಪರ್ಧೆಯನ್ನು ರದ್ದು ಮಾಡುವ ಉದ್ದೇಶವನ್ನು ಹೊಂದಲಾಗಿತ್ತು. ಆದ್ರೆ ಈಗ ಅದಕ್ಕಿದ್ದ ಅಡ್ಡಿ ಆತಂಕಗಳು ದೂರಗೊಂಡಿವೆ. ಸೈನಿ ನದಿಯನ್ನು ಶುದ್ಧಗೊಳಿಸಲಾಗಿದ್ದು ಟ್ರಯಥ್ಲಾನ್ ಸ್ವಿಮ್ಮಿಂಗ್​ಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಖುದ್ದು ಪ್ಯಾರಿಸ್​ ನಗರದ ಮೇಯರ್​ ಅನ್ನೆ ಹೆಡಾಲ್ಗೋ ನದಿಯಲ್ಲಿ ಈಜುವ ಮೂಲಕ ಸ್ಪರ್ಧೆಗೆ ನದಿ ನೀರು ಸುರಕ್ಷಿತ ಎಂಬ ಸಂದೇಶವನ್ನು ನೀಡಿದ್ದಾರೆ. ಇನ್ನೂ ಸಾವಿರಾರು ಸ್ಪರ್ಧಿಗಳು ಲಕ್ಷಾಂತರ ಪ್ರೇಕ್ಷಕರು ಸೇರುವ ಒಲಂಪಿಕ್​ ಕ್ರೀಡೆಯಲ್ಲಿ ಭದ್ರತೆಯಯೇ ನಿಜಕ್ಕೂ ದೊಡ್ಡ ಸವಾಲು. ಹೀಗಾಗಿ ಭದ್ರತಾ ವಿಚಾರದಲ್ಲಿಯೂ ಕೂಡ ಫ್ರಾನ್ಸ್ ಸರ್ಕಾರ ತುಂಬಾ ಮುತುವರ್ಜಿವಹಿಸಿದೆ. ಈಗಾಗಲೇ ಅತಿಥಿಗಳನ್ನಾಗಿ ಒಟ್ಟು 2 ಲಕ್ಷ 20 ಸಾವಿರ ಗಣ್ಯರನ್ನು ಫ್ರಾನ್ಸ್ ಆಹ್ವಾನಿಸಿದೆ.

ಒಲಂಪಿಕ್ ಸ್ಪರ್ಧೆ ವೀಕ್ಷಿಸಲು ಈಗಾಗಲೇ ಒಟ್ಟು 10 ಲಕ್ಷದ 4 ಸಾವಿರ ಟಿಕೆಟ್​ಗಳು ಸಾರ್ವಜನಿಕರು ಖರೀದಿಸಿದ್ದಾರೆ. ಹೀಗಾಗಿ ಭದ್ರತೆಯ ವಿಚಾರದಲ್ಲಿ ಯಾವುದೇ ಲೋಪವಾಗದಂತೆ ಫ್ರಾನ್ಸ್ ಸರ್ಕಾರ ಮುತುವರ್ಜಿವಹಿಸಿದ್ದು. ಒಟ್ಟು 35 ಸಾವಿರದಿಂದ 45 ಸಾವಿರ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಿದೆ. ಭಯೋತ್ಪಾದಕ ನಿರ್ವಹಣಾ ದಳವನ್ನು ಕೂಡ ನೇಮಿಸಿ ಡ್ರೋಣ್ ದಾಳಿಯಂತ ಹಠಾತ್ ದಾಳಿಗಳನ್ನು ತಡೆಯಲು ಬೇಕಾಗಿರುವ ಎಲ್ಲಾ ವ್ಯವಸ್ಥೆಗಳನ್ನು ಕೂಡ ಫ್ರಾನ್ಸ್ ಭದ್ರತಾ ಪಡೆ ಮಾಡಿಕೊಂಡಿದೆ. ಇತ್ತೀಚೆಗಷ್ಟೇ ಶಂಕಿತ ಉಗ್ರನೊಬ್ಬನನ್ನು ಕೂಡ ಫ್ರಾನ್ಸ್ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ.

ಒಲಂಪಿಕ್​ ಕ್ರೀಡಾಕೂಟಕ್ಕೆ ಆಗಲಿರುವ ಒಟ್ಟು ವೆಚ್ಚ ಎಷ್ಟು ಗೊತ್ತಾ..?

ಒಂದು ಒಲಂಪಿಕ್ ಕ್ರೀಡಾಕೂಟದ ಆತಿಥ್ಯವನ್ನು ವಹಿಸುವುದು ಅಷ್ಟು ಸರಳವಲ್ಲ. ಅದು ತಾತ್ಕಾಲಿಕವಾಗಿ ಒಂದು ಬಿಳಿಯಾನೆಯನ್ನು ಸಾಕಿದಂತೆ. ಅದಕ್ಕೆ ತಗಲುವ ವೆಚ್ಚ ಲಕ್ಷ, ಲಕ್ಷ ಕೋಟಿಯನ್ನು ತಲುಪುತ್ತದೆ. ಫ್ರಾನ್ಸ್​ನಲ್ಲಿ ನಡೆಯಲಿರುವ ಈ ಬಾರಿಯ ಒಲಂಪಿಕ್ ಕೂಡ ಅಷ್ಟೇ ಲಕ್ಷಾಂತರ ಕೋಟಿ ವೆಚ್ಚದಲ್ಲಿ ನಡೆಯಲಿದೆ. ಒಂದು ಅಂದಾಜಿನ ಪ್ರಕಾರ ಫ್ರಾನ್ಸ್ ಸರ್ಕಾರ ಈ ಕ್ರೀಡಾಕೂಟಕ್ಕೆ ಒಟ್ಟು 8 ಲಕ್ಷ ಕೋಟಿ ರೂಪಾಯಿಯನ್ನು ಖರ್ಚು ಮಾಡಲಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಸಾವಿರಾರು ಪ್ರಯೋಜಕರು ಹೂಡಿಕೆಗೆ ಸಿದ್ಧವಾಗಿದ್ದು ಸುಮಾರು 900 ಕೋಟಿ ಯುರೋಸ್ ವೆಚ್ಚದಲ್ಲಿ ಒಲಂಪಿಕ್ ಕ್ರೀಡಾಕೂಟ ನಡೆಯಲಿದೆ.

ತುಟ್ಟಿಯಾಗಲಿವೆ ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್​​ಗಳು

ಒಲಂಪಿಕ್ ಕ್ರೀಡೆ ಅಂದ್ರೆ ಅದು ಒಂದು ಜಾಗತಿಕ ಹಬ್ಬ, ಲಕ್ಷಾಂತರ ಜನರು ಒಂದೇ ಕಡೆ ಸೇರುವ ಕ್ರೀಡಾ ಹಬ್ಬ ಹೀಗಾಗಿ ಹೋಟೆಲ್ ಬಾರ್​, ವಸತಿಗೃಹಗಳು ಈಗಾಗಲೇ ತಮ್ಮ ದರವನ್ನು ಆಕಾಶಕ್ಕೆ ಮುಟ್ಟಿಸಿಯಾಗಿದೆ. ಹೋಟೆಲ್ ಐಶಾರಾಮಿ ಲಾಡ್ಜ್​ಗಳು ರೆಸ್ಟೋರಂಟ್​ಗಳು ತಮ್ಮ ಸೇವೆಯ ದರವನ್ನು ಏರಿಸಿದ್ದು ಪ್ರೇಕ್ಷರ ಜೇಬಿಗೆ ಕೊಂಚ ಭಾರವನ್ನು ಹೇರಿವೆ.

ಭಾರತಕ್ಕೆ ಈ ಬಾರಿ ಬಂಗಾರ ತಂದುಕೊಡುವವರು ಯಾರು..?

ಕಳೆದ ಬಾರಿ ಟೋಕಿಯೋದಲ್ಲಿ ನಡೆದ ಒಲಂಪಿಕ್ ಪಂದ್ಯಾವಳಿಯಲ್ಲಿ ಭಾರತ ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕ ಗೆಲ್ಲುವ ಮೂಲಕ ಶ್ರೇಷ್ಠ ಪ್ರದರ್ಶನವನ್ನು ನೀಡಿತ್ತು. 64-69 ಕೆಜಿ ವೇಟ್ ಲಿಫ್ಟಿಂಗ್​ನಲ್ಲಿ ಲೋವಲಿನಾ ಬೋರ್ಗೈನ್ , ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟ್​ನಲ್ಲಿ ಪಿವಿ ಸಿಂಧು 65 ಕೆಜಿ ಕುಸ್ತಿ ವಿಭಾಗದಲ್ಲಿ ಭಜರಂಗ ಪುನಿಯಾ ಹಾಗೂ ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕವನ್ನು ಗೆದ್ದು ಭಾರತದ ಮುಡಿಗೆ ನಾಲ್ಕು ಕಂಚಿನ ಪದಕ ಮುಡಿಸಿದ್ದರು. ರವಿಕುಮಾರ್ ದಹಿಯಾ ಮೀರಾಬಾಯಿ ಚೀನು ಕುಸ್ತಿ ಪಂದ್ಯಾವಳಿಯಲ್ಲಿ ಬೆಳ್ಳಿಯ ಬದಕವನ್ನು ಭಾರತಕ್ಕೆ ತಂದಿದ್ದರು. ಇನ್ನು ನೀರಜ್ ಚೋಪ್ರಾ ಒಬ್ಬರೇ ಜಾವ್ಲಿನ್ ಎಸೆತದಲ್ಲಿ ಬಂಗಾರದ ಪದವನ್ನು ಕೊರಳಿಗೆ ಹಾಕಿಕೊಂಡು ಭಾರತಕ್ಕೆ ಹಿಂದಿರುಗಿದ್ದರು.

ಆದ್ರೆ ಈ ಬಾರಿ ನಿರೀಕ್ಷೆಗಳು ಹೆಚ್ಚಿವೆ. 1900 ರಿಂದ 2022 ಟೋಕಿಯೋ ಒಲಂಪಿಕ್​ನವರೆಗೂ ಭಾರತದ ಸಾಧನೆಯನ್ನು ನೋಡಿದ್ರೆ ತೀರ ನೀರಸ ಪ್ರದರ್ಶನವಿದೆ. ಇಲ್ಲಿಯವರೆಗೂ ಭಾರತ ಕೇವಲ 10 ಚಿನ್ನದ ಪದಕಗಳಿಗೆ ಮುತ್ತಿಟ್ಟಿದೆ. ಅದರಲ್ಲಿ ಎಂಟು ಚಿನ್ನದ ಪದಕಗಳನ್ನು ಗೆದ್ದಿದ್ದು ಭಾರತದ ಪುರುಷರ ಹಾಕಿ ತಂಡ. ಇದಾದ ಬಳಿಕ ಅಭಿನವ ಭಿಂದ್ರಾ ಮೊಟ್ಟ ಮೊದಲ ಬಾರಿಗೆ 2008ರಲ್ಲಿ 10 ಮೀಟರ್ ಏರ್​ರೈಫಲ್ ಪಂದ್ಯದಲ್ಲಿ ಚಿನ್ನ ಗೆದ್ದು ವೈಯಕ್ತಿಕ ಮೊದಲ ಒಲಂಪಿಕ್ ಚಿನ್ನ ಗೆದ್ದ ಮೊದಲಿಗೆ ಎಂಬ ಕೀರ್ತಿಗೆ ಪಾತ್ರರಾದರು. ಅದು ಬಿಟ್ಟರೆ ಕಳೆದ ಬಾರಿ ಟೋಕಿಯದಲ್ಲಿ ನಡೆದ ಜಾವ್ಲಿನ್ ಎಸೆತದಲ್ಲಿ ನೀರಜ ಚೋಪ್ರಾ ಗೆದ್ದ ಚಿನ್ನದ ಪದಕವೇ ಕೊನೆಯದಾಗಿದೆ. ಹಾಗಿದ್ರೆ ಈ ಬಾರಿ ಯಾರೆಲ್ಲರ ಮೇಲೆ ನಿರೀಕ್ಷೆಯಿಡಲಾಗಿದೆ.

ಪಿ.ವಿ. ಸಿಂಧು:

ಪಿ. ವಿ ಸಿಂಧು ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ್ತಿ ಮಹಿಳಾ ಸಿಂಗಲ್ಸ್​ನಲ್ಲಿ ಕಳೆದ ಹಲವು ವರ್ಷಗಳಿಂದ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. 2016ರಲ್ಲಿ ರಿಯೋದಲ್ಲಿ ನಡೆದ ಒಲಂಪಿಕ್ಸ್​ನಲ್ಲಿ ಪಿ.ವಿ ಸಿಂಧು ಬೆಳ್ಳಿ ಪದಕಕ್ಕೆ ಮುತ್ತಿಡುವ ಮೂಲಕ ಭರವಸೆ ಮೂಡಿಸಿದ್ದರು. 2020ರಲ್ಲಿ ಟೊಕಿಯೋ ಒಲಂಪಿಕ್ಸ್​ನಲ್ಲಿ ಕಂಚಿನ ಪದಕ ಕೊರಳಿಗೇರಿಸಿಕೊಂಡರು. ಈ ಬಾರಿ ಪ್ಯಾರಿಸ್​ನಲ್ಲಿ ನಡೆಯುವ ಬ್ಯಾಡ್ಮಿಂಟನ್​ ನಲ್ಲಿ ಚಿನ್ನಕ್ಕೆ ಗುರಿಯಿಟ್ಟಿದ್ದಾರೆ ಸಿಂಧು. ಸತತ ಪರಿಶ್ರಮ ಹಾಗೂ ನಿರಂತರ ಅನುಭವ ಹೊಂದಿರುವ ಪಿವಿ ಸಿಂಧು ಈ ಬಾರಿ ಚಿನ್ನದ ಪದಕವನ್ನು ಭಾರತಕ್ಕೆ ತಂದುಕೊಡಲಿದ್ದಾರೆ ಅನ್ನೋ ಭರವಸೆಯಂತೂ ಇದೆ.

ನೀರಜ್ ಚೋಪ್ರಾ:

ಜಾವಲಿನ್ ಎಸೆತದಲ್ಲಿ ಒಲಂಪಿಕ್ಸ್ ಹಾಗೂ ಕಾಮನ್​ವೆಲ್ತ್​ ಕ್ರೀಡಾಕೂಟ ಎರಡರಲ್ಲೂ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ ಈ ಬಾರಿಯ ಒಲಂಪಿಕ್ಸ್​ನಲ್ಲಿ ಚಿನ್ನದ ಪದಕಕ್ಕೆ ಮತ್ತೊಮ್ಮೆ ಮುತ್ತಿಡುವುದು ಪಕ್ಕಾ ಅನ್ನೋ ಮಾತುಗಳು ಕ್ರೀಡಾಪ್ರೇಮಿಗಳಲ್ಲಿ ಕೇಳಿ ಬರುತ್ತಿವೆ.

ಮೀರಾಬಾಯಿ ಚಾನು:

ಮಹಿಳೆಯರ 49 ಕೆಜಿ ವಿಭಾಗದ ವೇಟ್​ಲಿಫ್ಟಿಂಗ್​ನಲ್ಲಿ ಮೀರಾಬಾಯಿ ಚಾನು ಚಿನ್ನ ಗೆಲ್ಲವು ಹಾಟ್​ ಫೆವರಿಟ್ ವಿಭಾಗದಲ್ಲಿ ಒಬ್ಬರು. ಕಳೆದ 2017ರ ವಿಶ್ವ ಚಾಂಪಿಯನ್​ಶಿಪ್ ಹಾಗೂ ಟೋಕಿಯೋ ಒಲಂಪಿಕ್ಸ್​ನಲ್ಲಿ ರಜತಪದಕ ದೇಶಕ್ಕೆ ತಂದುಕೊಟ್ಟಿರುವ ಚಾನು ಈ ಬಾರಿಯ ಒಲಂಪಿಕ್​ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡುವ ಭರವಸೆಯನ್ನು ಮೂಡಿಸಿದ್ದಾರೆ.

ಲವ್ಲೀನಾ ಬಾರ್ಗೋಹೈನ್:

ಟೋಕಿಯೋದಲ್ಲಿ 69 ಕೆಜಿ ವಿಭಾಗದಲ್ಲಿ ಕಂಚು ಗೆದ್ದಿದ್ದ ಬಾಕ್ಸಿಂಗ್ ರಾಣಿ ಲವ್ಲೀನಾ, ಈ ಬಾರಿ 75 ಕೆಜಿ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ. ವಿಶ್ವ ಚಾಂಪಿಯನ್​ ಶಿಪ್​ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿರುವ ಲವ್ಲಿನಾ ಪ್ಯಾರಿಸ್ ಒಲಂಪಕ್ಸ್​ನಲ್ಲಿಯೂ ಚಿನ್ನದ ಪದಕ ಗೆಲ್ಲುವ ಕನಸಿಟ್ಟುಕೊಂಡಿದ್ದಾರೆ.

ಅದೇ ರೀತಿ ಪುರುಷರ ಹಾಕಿ ತಂಡ, ವಿಶ್ವಚಾಂಪಿಯನ್​ ಶಿಪ್​​ನಲ್ಲಿ ಕಂಚಿನ ಪದಕ ಗೆದ್ದಿದ್ದ ಕುಸ್ತಿಪಟು ಅಂತಿಮ್ ಸಂಘಾಲ್, 50ಕೆಜಿ ವಿಭಾಗದಲ್ಲಿ ಭರವಸೆ ಮೂಡಿಸಿರುವ ಬಾಕ್ಸರ್ ನಿಖತ್ ಜರೀನ್, ಬ್ಯಾಡ್ಮಿಂಟನ್​ ಡಬಲ್ಸ್​ನಲ್ಲಿ ಸಾತ್ವಿಕ್ ಚಿರಾಗ್​ ಹೀಗೆ ಅನೇಕ ಕ್ರೀಡಾಪಟುಗಳು ಈ ಬಾರಿ ಹೆಚ್ಚು ಹೆಚ್ಚು ಪದಕವನ್ನು ದೇಶಕ್ಕೆ ತಂದುಕೊಡುವ ಭರವಸೆಯಿದೆ. ಕೊನೆಯ ಬಾರಿ ಕಂಚಿನ ಪದಕ ಗೆಲ್ಲುವ ಅವಕಾಶವನ್ನು ಕೂದಲೆಳೆ ಅಂತರದಲ್ಲಿ ಕಳೆದುಕೊಂಡಿದ್ದ ಮಹಿಳಾ ಹಾಕಿ ತಂಡವೂ ಕೂಡ ಈ ಬಾರಿ ಪದಕಕ್ಕೆ ಮುತ್ತಿಡುವ ಭರವಸೆಯಲ್ಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಣಯದೂರಿನಲ್ಲಿ ಪದಕಗಳ ಬೇಟೆಗೆ ವೇದಿಕೆ ಸಜ್ಜು: ಹೊನ್ನಿನ ಪದಕ ಹೊತ್ತು ತರುವ ಭಾರತೀಯ ಸ್ಪರ್ಧಿಗಳು ಯಾರು?

https://newsfirstlive.com/wp-content/uploads/2024/07/olympic.jpg

Load More