newsfirstkannada.com

ಪ್ಯಾರಿಸ್​​ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ 5ನೇ ಪದಕ; ನೀರಜ್ ಚೋಪ್ರಾ ಜಾವೆಲಿನ್ ಎಸೆದ ದೂರ ಎಷ್ಟು..?

Share :

Published August 9, 2024 at 6:44am

    ನೀರಜ್ ಚೋಪ್ರಾಗೆ ಸತತ ಎರಡನೇ ಒಲಿಂಪಿಕ್ಸ್ ಪದಕ

    ಭಾರತದ ಖಾತೆಯಲ್ಲಿ ಸೇರಿಕೊಂಡ ಐದನೇ ಒಲಿಂಪಿಕ್ಸ್‌ ಪದಕ

    ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಕಂಚಿನ ಗೋಲ್​​​ ಹೊಡೆದ ಹಾಕಿ ಟೀಂ

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ 5ನೇ ಪದಕ ದಕ್ಕಿದೆ. ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ಸತತ ಎರಡನೇ ಒಲಿಂಪಿಕ್ಸ್ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಆದ್ರೆ ಭಾರತಕ್ಕೆ ಲಭಿಸಲಬೇಕಿದ್ದ ಚಿನ್ನದ ಪದಕ ಈ ಬಾರಿ ಮಿಸ್​ ಆಗಿದೆ.

ಇದನ್ನೂ ಓದಿ: ಸೋತಲ್ಲೇ ಗೆದ್ದಳು, ಬಿದ್ದಲ್ಲೇ ಎದ್ದಳು‌.. ಶಾ‘ಕಾರಿ ರಿಚರ್ಡ್ಸನ್ ಲೈಫ್​ ಜರ್ನಿಯೇ ಥ್ರಿಲಿಂಗ್ ಸ್ಟೋರಿ; ತಪ್ಪದೇ ಓದಿ!

ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ನೀರಜ್ ಸತತ ಎರಡನೇ ಒಲಿಂಪಿಕ್ಸ್ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಆದರೆ ಈ ಬಾರಿ ಪದಕದ ಬಣ್ಣಬದಲಾಗಿದ್ದು, ನೀರಜ್ ಚೋಪ್ರಾ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ನೀರಜ್, ಆರು ಪ್ರಯತ್ನಗಳಲ್ಲಿ ಎರಡನೇ ಎಸೆತ ಅತ್ಯುತ್ತಮವಾಗಿತ್ತು. ಅವರ ಮೊದಲ, ಮೂರನೇ, ನಾಲ್ಕನೇ, ಐದನೇ ಮತ್ತು ಆರನೇ ಎಸೆತಗಳು ಫೌಲ್ ಆದವು.

ಫೈನಲ್‌ ಸುತ್ತಿನಲ್ಲಿ ನೀರಜ್‌ ಚೋಪ್ರಾ 89.45 ಮೀಟರ್‌ ಎಸೆತ

2020ರಲ್ಲಿ ನಡೆದಿದ್ದ ಟೋಕಿಯೋ ಒಲಿಂಪಿಕ್ಸ್​ನಲ್ಲಿ 87.58 ಮೀಟರ್ ದೂರ ಜಾವೆಲಿನ್ ಎಸೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದ ನೀರಜ್ ಚೋಪ್ರಾ, ಪ್ಯಾರಿಸ್ ಒಲಿಂಪಿಕ್ಸ್​ನ ಅರ್ಹತಾ ಸುತ್ತಿನಲ್ಲಿ 89.34 ಮೀಟರ್​ ಜಾವೆಲಿನ್​ ಎಸೆದು ಚಿನ್ನದ ಆಸೆ ಚಿಗುರಿಸಿದ್ರು. ಅದರಂತೆ ಇವತ್ತು 89.45 ಮೀಟರ್ ದೂರಕ್ಕೆ ಚಿಮ್ಮಿದ ಜಾವೆಲಿನ್ ಹಳೇ ದಾಖಲೆ ಪುಡಿಗಟ್ತು. ಪಾಕಿಸ್ತಾನದ ಅರ್ಷದ್ ನದೀಮ್ 92.97 ಮೀಟರ್​ ದೂರ ಜಾವೆಲಿನ್ ಎಸೆದು ಇತಿಹಾಸ ನಿರ್ಮಿಸಿದಲ್ಲದೆ ಚಿನ್ನದ ಪದಕ ಗೆದ್ರು. ಇನ್ನೂ ನೀರಜ್​ ಪ್ರಯತ್ನಕ್ಕೆ ಪ್ರಧಾನಿ ಮೋದಿ ಟ್ವೀಟ್​ ಮಾಡಿ ಶುಭ ಹಾರೈಸಿದ್ದಾರೆ.

ಒಲಿಂಪಿಕ್ಸ್​ ಹಾಕಿಯಲ್ಲಿ ಭಾರತ ಬಹು ಸಮಯದ ಬಳಿಕ ಪದಕ ಗೆದ್ದಿದೆ. ಕಂಚಿನ ಪದಕ ಗೆಲ್ಲುವ ಮೂಲಕ 52 ವರ್ಷಗಳ ಬಳಿಕ ಇತಿಹಾಸ ಬರೆದಿದೆ. ಸ್ಪೇನ್ ವಿರುದ್ಧ ಭಾರತ ಹಾಕಿ ತಂಡ 2-1 ಗೋಲುಗಳ ಭರ್ಜರಿ ಜಯ ಗಳಿಸಿ ಕಂಚು ಗೆದ್ದಿದೆ. ಈ ಹಿಂದೆ ಶೂಟಿಂಗ್‌ನಲ್ಲಿ ಭಾರತ ಮೂರು ಪದಕಗಳನ್ನು ಗೆದ್ದಿತ್ತು.

ಮನು ಭಾಕರ್ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ, 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಸ್ಪರ್ಧೆಯಲ್ಲಿ ಕಂಚು ಗೆದ್ದರು. ಸ್ವಪ್ನಿಲ್ ಕುಸಾಲೆ ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್‌ನಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದರು. ಒಟ್ಟಾರೆ, ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ಎರಡನೇ ಒಲಿಂಪಿಕ್ಸ್ ಪದಕವನ್ನ ತಂದುಕೊಟ್ಟಿದ್ದು, ದೇಶಕ್ಕೆ ಕೀರ್ತಿ ತಂದಿದ್ದಾರೆ. ಚಿನ್ನ ಮಿಸ್​ ಆಗಿರೋದು ಕೊಂಚ ಬೇಸರ ತಂದಿದ್ರು, ಭಾರತ ಬೆಳ್ಳಿಗೆರೆ ಮೂಡಿಸಿದ್ದು ಖುಷಿ ಇಮ್ಮಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ಯಾರಿಸ್​​ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ 5ನೇ ಪದಕ; ನೀರಜ್ ಚೋಪ್ರಾ ಜಾವೆಲಿನ್ ಎಸೆದ ದೂರ ಎಷ್ಟು..?

https://newsfirstlive.com/wp-content/uploads/2024/08/Neeraj-Chopra-2.jpg

Load More