newsfirstkannada.com

T20 World Cup: ಹಾರ್ದಿಕ್​ ಪಾಂಡ್ಯ ಸ್ಥಾನ ಪಡೆದ್ರೆ, ಟೀಮ್ ಇಂಡಿಯಾದ ಕ್ಯಾಪ್ಟನ್ ಯಾರು?

Share :

Published January 12, 2024 at 2:17pm

    ಹಾರ್ದಿಕ್​ ಪಾಂಡ್ಯರನ್ನ ವಿಶ್ವಕಪ್​ನಲ್ಲಿ ಆಡಿಸಲು ಬಿಸಿಸಿಐ ಪ್ಲಾನ್

    ರೋಹಿತ್​​​- ಪಾಂಡ್ಯ ಯಾರಿಗೆ ಟಿ20 ವಿಶ್ವಕಪ್​​ ತಂಡದ ಸಾರಥ್ಯ..?

    ಟೀಮ್​ ಇಂಡಿಯಾದ ಕ್ಯಾಪ್ಟನ್​​ ಖುರ್ಚಿಗೆ ದೊಡ್ಡ ಫೈಟ್ ಸ್ಟಾರ್ಟ್​

2024ನೇ ಟಿ20 ವಿಶ್ವಕಪ್​ ಟೀಮ್ ಇಂಡಿಯಾಗೆ ವೆರಿ ಇಂಪಾರ್ಟೆಂಟ್​​. ಟ್ವೆಂಟಿ ಓವರ್​​​​​ ಕುರುಕ್ಷೇತ್ರ ಗೆಲ್ಲಲು ಬಿಸಿಸಿಐ ಇನ್ನಿಲ್ಲದ ತಂತ್ರ ರೂಪಿಸಿದೆ. ಆದರೆ ಈ ತಂತ್ರಕ್ಕೆ ಮೊದಲ ಪ್ರಯತ್ನದಲ್ಲೇ ರೋಹಿತ್​​​ ಹಾಗೂ ಪಾಂಡ್ಯ ಅಡ್ಡಿಯಾಗಿದ್ದಾರೆ. ಅಷ್ಟಕ್ಕೂ ಬಿಸಿಸಿಐಗೆ ರೋಹಿತ್​​​-ಪಾಂಡ್ಯ ಟೆನ್ಷನ್ ತಂದೊಡ್ಡಿದ್ಯಾಕೆ?.

ಸ್ಟಾರ್​ ಆಲ್​ರೌಂಡರ್ ಹಾರ್ದಿಕ್​​​​​​ ಪಾಂಡ್ಯ ಕಮ್​ಬ್ಯಾಕ್​ ಯಾವಾಗ, ಐಪಿಎಲ್ ಆಡ್ತಾರಾ ಇಲ್ವಾ ಟಿ20 ವಿಶ್ವಕಪ್​​​ ವೇಳೆ ತಂಡಕ್ಕೆ ಮರಳ್ತಾರಾ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಬಿಗ್​ ಹಿಟ್ಟರ್​​​​ ಮರಳುವಿಕೆ ಬಗ್ಗೆ ಕ್ಲಾರಿಟಿ ಇಲ್ಲದಿರೋ ಹೊತ್ತಲ್ಲೆ ಸೋಷಿಯಲ್ ಮೀಡಿಯಾದಲ್ಲಿ ಹಾರ್ದಿಕ್​​ಗೆ ಸಂಬಂಧಿಸಿದ 2 ವಿಡಿಯೋ ಸಖತ್ ವೈರಲ್ ಆಗಿದ್ವು.

ಹಾರ್ದಿಕ್​​ರ ಈ ವರ್ಕೌಟ್​​​ ವಿಡಿಯೋಸ್​​ ನೋಡಿದ ಫ್ಯಾನ್ಸ್​​​​ಗೆ ಒಂದು ಕ್ಲಾರಿಟಿ ಸಿಕ್ಕಿತ್ತು. ಅದೇನಂದ್ರೆ ಪಾಂಡ್ಯ ಶೀಘ್ರದಲ್ಲೇ ತಂಡಕ್ಕೆ ಕಮ್​ಬ್ಯಾಕ್​ ಮಾಡ್ತಾರೆ ಅನ್ನೋದು. ಆದ್ರೆ ಯಾವಾಗ ಅನ್ನೋದು ಮಾತ್ರ ಇನ್ನೂ ಸಸ್ಪೆನ್ಸ್​ ಆಗಿ ಉಳಿದಿದೆ.

ಹಾರ್ದಿಕ್​​​ ಆಗಮನವಾದ್ರೆ ಯಾರಾಗ್ತಾರೆ ತಂಡದ ಸಾರಥಿ?

ಸದ್ಯ ಆ್ಯಂಕಲ್​ ಇಂಜುರಿಯಿಂದ ಚೇತರಿಕೆ ಕಾಣ್ತಿರೋ ಹಾರ್ದಿಕ್​ ತಂಡಕ್ಕೆ ಮರಳಲು ಇನ್ನಿಲ್ಲದ ಕಸರತ್ತು ನಡೆಸ್ತಿದ್ದಾರೆ. 17ನೇ ಐಪಿಎಲ್​ ವೇಳೆಗೆ ಫುಲ್ ಫಿಟ್​ ಆಗುವ ಸಾಧ್ಯತೆ ಇದೆ. ಒಂದು ವೇಳೆ ಐಪಿಎಲ್​ ಆಡದಿದ್ರೂ,T20 ವಿಶ್ವಕಪ್ ಆಡುವುದು ಕನ್ಫರ್ಮ್​. ಬಿಸಿಸಿಐ ಕೂಡ ಪಾಂಡ್ಯರನ್ನ ವಿಶ್ವಕಪ್​ನಲ್ಲಿ ಆಡಿಸಲು ಪ್ಲಾನ್ ಮಾಡಿದೆ. ಹಾಗೊಂದು ವೇಳೆ ಪಾಂಡ್ಯ ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆದ್ರೆ ಕ್ಯಾಪ್ಟನ್​​ ಯಾರಾಗ್ತಾರೆ ಅನ್ನೋ ದೊಡ್ಡ ಪ್ರಶ್ನೆ ಉದ್ಭವಿಸಲಿದೆ.

ಸದ್ಯ ಬಿಸಿಸಿಐ ರೋಹಿತ್​​​​ಗೆ ಟಿ20 ತಂಡದ ನಾಯಕನ ಪಟ್ಟ ಕಟ್ಟಿದೆ. ವರ್ಷದ ಬಳಿಕ ತಂಡ ಮುನ್ನಡೆಸುತ್ತಿದ್ದಾರೆ. ಇಂತಹ ಅನುಭವಿ ನಾಯಕನನ್ನ ಕಡೆಗಣಿಸುವಂತಿಲ್ಲ. ಇನ್ನು ಹಾರ್ದಿಕ್​ ತಂಡದ ರೆಗ್ಯುಲರ್ ಕ್ಯಾಪ್ಟನ್​, ಹಿಟ್​ಮ್ಯಾನ್​ ಅಲಭ್ಯತೆಯಲ್ಲಿ ತಂಡವನ್ನ ಮುನ್ನಡೆಸಿದ್ದಾರೆ. ಹೀಗಾಗಿ ರೋಹಿತ್​​​ ಹಾಗೂ ಪಾಂಡ್ಯರಲ್ಲಿ ಯಾರಿಗೆ ಟಿ20 ವಿಶ್ವಕಪ್​​ ತಂಡದ ಸಾರಥ್ಯ ನೀಡಬೇಕು ಅನ್ನೋದು ಬಿಸಿಸಿಐಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ರೋಹಿತ್​ಗೆ ನಾಯಕತ್ವದ ವಾಗ್ದಾನ ನೀಡಿದ ಬಿಸಿಸಿಐ..!

2022ರ ಟಿ20 ವಿಶ್ವಕಪ್​​ ಬಳಿಕ ರೋಹಿತ್​​​​​​​​​​ ತಂಡದಿಂದ ಹೊರ ಬಿದ್ದಿದ್ರು. 2024ರ ಟಿ20 ವಿಶ್ವಕಪ್ ಆಡುವುದು ಅನುಮಾನ ಎನ್ನಲಾಗ್ತಿತ್ತು. ಆದ್ರೆ ಅಪ್ಘಾನಿಸ್ತಾನ ಟಿ20 ಸರಣಿಗೂ ಮುನ್ನ ರೋಹಿತ್​​ ಜೊತೆ ಮಾತುಕತೆ ನಡೆಸಿದ ಬಿಸಿಸಿಐ, ಮತ್ತೆ ಆಡುವಂತೆ ಕೇಳಿಕೊಂಡಿತು. ಆದರೆ ನಾಯಕತ್ವ ಕೊಟ್ಟರಷ್ಟೇ ಟಿ20 ಕ್ರಿಕೆಟ್​ ಆಡುವುದಾಗಿ ಷರತ್ತು ವಿಧಿಸಿದ್ರು. ಬಿಸಿಸಿಐ, ರೋಹಿತ್ ಮಾತಿಗೆ ಗೌರವ ನೀಡಿ ಮತ್ತೆ ನಾಯಕತ್ವದ ಜವಾಬ್ದಾರಿ ನೀಡಿದೆ.

ರೋಹಿತ್​​ಗೆ ಕೊಟ್ಟ ಮಾತು ಉಳಿಸಿಕೊಳ್ಳುತ್ತಾ ಬಿಸಿಸಿಐ..?

ಯಂಗ್​ಸ್ಟರ್ಸ್​ ಪ್ರದರ್ಶನ ಸೆಲೆಕ್ಟರ್ಸ್​ಗೆ ತೃಪ್ತಿ ತಂದಿರ್ಲಿಲ್ಲ. ಹೀಗಾಗಿ ಅನುಭವಿಗಳ ಮೊರೆ ಹೋಗಿ ರೋಹಿತ್​ಗೆ ತಂಡದ ಚುಕ್ಕಾಣಿ ನೀಡಿದೆ. ಒಂದು ವೇಳೆ ಹಿಟ್​ಮ್ಯಾನ್​ರನ್ನ ಕೆಳಗಿಳಿಸಿ ಹಾರ್ದಿಕ್​ಗೆ ಪಟ್ಟಕಟ್ಟಿದ್ರೆ, ವಚನ ಭ್ರಷ್ಟ ಅನ್ನಿಸಿಕೊಳ್ಳಲಿದೆ. ಹಾಗಂತ ಯಶಸ್ವಿಯಾಗಿ ತಂಡ ಮುನ್ನಡೆಸಿ, ಮೊದಲ ಪ್ರಯತ್ನದಲ್ಲೆ ಗುಜರಾತ್ ಟೈಟನ್ಸ್​​​ ಐಪಿಎಲ್ ಟ್ರೋಫಿ ಗೆಲ್ಲಿಸಿಲೊಟ್ಟ ಪಾಂಡ್ಯರನ್ನ ನಿರ್ಲಕ್ಷಿಸುವಂತಿಲ್ಲ. ಇಬ್ಬರಲ್ಲಿ ಯಾರನ್ನೇ ಮಾಡಿದ್ರೂ ಬಿಸಿಸಿಐ ಇಕ್ಕಟ್ಟಿಗೆ ಸಿಲುಕೋದು ಮಾತ್ರ ತಪ್ಪಲ್ಲ.

ನಾಯಕತ್ವ ಕೈ ತಪ್ಪಿದ್ರೆ ಪಾಂಡ್ಯ ಮುಂದಿನ ನಡೆ ಏನು..?

ಒಂದು ವೇಳೆ ಬಿಸಿಸಿಐ ಕೊಟ್ಟು ಮಾತಿನಂತೆ ರೋಹಿತ್​ರನ್ನ ಟಿ20 ವಿಶ್ವಕಪ್​ ತಂಡದ ಕ್ಯಾಪ್ಟನ್ ಮಾಡಿದ್ರೆ ಹಾರ್ದಿಕ್​​​​​ಗೆ ದೊಡ್ಡ ನಿರಾಸೆಯಾಗಲಿದೆ. ಯಾಕಂದ್ರೆ 2024ರ ಟಿ20 ವಿಶ್ವಕಪ್​ಗೆ ಹಾರ್ದಿಕ್​ ಕ್ಯಾಪ್ಟನ್ ಎಂದು ಬಿಸಿಸಿಐ ಬಿಂಬಿಸಿತ್ತು. ಕೊನೆ ಘಳಿಗೆಯಲ್ಲಿ ಬಿಗ್​ಬಾಸ್​ಗಳು ಉಲ್ಟಾ ಹೊಡೆದ್ರೆ ಹಾರ್ದಿಕ್​​​ ಸಾಮಾನ್ಯ ಆಟಗಾರನಾಗಿ ವಿಶ್ವಕಪ್ ಆಡದೇ ಬೇರೆ ವಿಧಿಯಿಲ್ಲ. ಟಿ20 ವಿಶ್ವಕಪ್​ಗೆ ಹಾರ್ದಿಕ್​ ಆಗಮನವಾದ್ರೆ ನಾಯಕತ್ವದ ಖುರ್ಚಿಗೆ ದೊಡ್ಡ ಫೈಟ್ ಅಂತೂ ಏರ್ಪಡಲಿದೆ. ಕ್ಯಾಪ್ಟನ್ಸಿ ರೇಸ್​ನಲ್ಲಿ ಅನುಭವಿ ರೋಹಿತ್ ಶರ್ಮಾ ಗೆಲ್ತಾರಾ ? ಇಲ್ವಾ ಹಾರ್ದಿಕ್​ ಗೆದ್ದು ಬೀಗ್ತಾರಾ.? ಅನ್ನೋದಕ್ಕೆ ಕಾಲವೇ ಉತ್ತರಿಸಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

T20 World Cup: ಹಾರ್ದಿಕ್​ ಪಾಂಡ್ಯ ಸ್ಥಾನ ಪಡೆದ್ರೆ, ಟೀಮ್ ಇಂಡಿಯಾದ ಕ್ಯಾಪ್ಟನ್ ಯಾರು?

https://newsfirstlive.com/wp-content/uploads/2023/10/Rohit_Hardik.jpg

Load More