ಅಂಬಾನಿ, ಅದಾನಿ ಅಲ್ಲವೇ ಅಲ್ಲ.. ಭಾರತದ ನಂ.1 ಕೊಡುಗೈ ದಾನಿ ಯಾರು ಗೊತ್ತಾ? ಎಷ್ಟು ಸಾವಿರ ಕೋಟಿ?

author-image
admin
Updated On
ಅಂಬಾನಿ, ಅದಾನಿ ಅಲ್ಲವೇ ಅಲ್ಲ.. ಭಾರತದ ನಂ.1 ಕೊಡುಗೈ ದಾನಿ ಯಾರು ಗೊತ್ತಾ? ಎಷ್ಟು ಸಾವಿರ ಕೋಟಿ?
Advertisment
  • ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಕುಟುಂಬಕ್ಕೆ 2ನೇ ಸ್ಥಾನ
  • ಗೌತಮ್ ಅದಾನಿ ಕುಟುಂಬಕ್ಕೆ ದಾನಿಗಳ ಪಟ್ಟಿಯಲ್ಲಿ 5ನೇ ಸ್ಥಾನ
  • ಶ್ರೀಮಂತ ವ್ಯಕ್ತಿಗಳ ಮೌಲ್ಯಮಾಪನ ಮಾಡುವ ಹುರುನ್ ಪಟ್ಟಿ ಬಿಡುಗಡೆ

ಜಾಗತಿಕವಾಗಿ ಶ್ರೀಮಂತ ವ್ಯಕ್ತಿಗಳ ಮೌಲ್ಯಮಾಪನ ಮಾಡುವ ಹುರುನ್ ಇಂಡಿಯಾ ದಾನಿಗಳ ಪಟ್ಟಿ ಬಿಡುಗಡೆಗೊಳಿಸಿದೆ. ಮುಖೇಶ್ ಅಂಬಾನಿ ಕುಟುಂಬ 2ನೇ ಸ್ಥಾನದಲ್ಲಿದ್ದರೆ, ಬಜಾಜ್‌ ಕುಟುಂಬ 3ನೇ ಸ್ಥಾನದಲ್ಲಿದೆ. ಕುಮಾರ್ ಮಂಗಳಂ 4ನೇ ಸ್ಥಾನದಲ್ಲಿ, ಗೌತಮ್ ಅದಾನಿ ಕುಟುಂಬ ದಾನಿಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.

publive-image

ಹಾಗಾದರೆ ಮೊದಲ ಸ್ಥಾನದಲ್ಲಿ ಯಾರಿದ್ದಾರೆ?
ಭಾರತದ ದಾನಿಗಳ ಪಟ್ಟಿಯಲ್ಲಿ ಉದ್ಯಮಿಗಳು ನೀಡಿರುವ ದೇಣಿಗೆ, ದಾನದ ಬಗ್ಗೆ ಮಹತ್ವದ ಮಾಹಿತಿ ಬಹಿರಂಗವಾಗಿದೆ. ಇದರಲ್ಲಿ ಭಾರತದ ದಾನಿಗಳ ಪಟ್ಟಿಯಲ್ಲಿ ಸಾಮಾಜಿಕ ಕಾರ್ಯಗಳಿಗೆ ಅತಿ ಹೆಚ್ಚು ದೇಣಿಗೆ ನೀಡುವ 10 ದಾನಿಗಳ ಹೆಸರು ಬಿಡುಗಡೆಯಾಗಿದೆ. ಇವರೆಲ್ಲರೂ ಸೇರಿ 2024ರ ಆರ್ಥಿಕ ವರ್ಷದಲ್ಲಿ 4625 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಇದರ ಅರ್ಧದಷ್ಟು ಹಣ ದಾನ ಮಾಡಿರುವ ಉದ್ಯಮಿ ನಂ.1 ಸ್ಥಾನದಲ್ಲಿದ್ದು ಕೊಡುಗೈ ದಾನಿ ಎನಿಸಿದ್ದಾರೆ. ಇದರಲ್ಲಿ ಟಾಟಾ, ಅಂಬಾನಿಯಂತಹ ದಿಗ್ಗಜರೂ ಕೂಡ ಹಿಂದೆ ಬಿದ್ದಿದ್ದಾರೆ. ದೇಶದ ಅಗರ್ಭ ಶ್ರೀಮಂತ ದಾನಿಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.

ಶಿವ ನಾಡಾರ್‌ಗೆ ನಂ.1 ಪಟ್ಟ!
ದಾನಿಗಳ ಪಟ್ಟಿಯ ಪ್ರಕಾರ HCL ಟೆಕ್ನಾಲಜೀಸ್ ಛೇರ್ಮನ್ ಶಿವ ನಾಡಾರ್ ಮತ್ತು ಅವರ ಕುಟುಂಬ ಅಗ್ರಸ್ಥಾನದಲ್ಲಿದೆ. ಅವರು ಒಟ್ಟು 2,153 ಕೋಟಿ ರೂ. ಈ ಸಮಾಜಕ್ಕೆ ದಾನ ಮಾಡಿದ್ದಾರೆ. ಶಿವನಾಡಾರ್ ದಾನಿಗಳ ಪಟ್ಟಿಯಲ್ಲಿ ಕಳೆದ 5 ವರ್ಷದಲ್ಲಿ 3ನೇ ಬಾರಿಗೆ ನಂ.1 ದಾನಿ ಎನಿಸಿದ್ದಾರೆ.

publive-image

2,153 ಕೋಟಿ ರೂ. ಶಿವ ನಾಡಾರ್ ಒಬ್ಬರೆ ದಾನ ಮಾಡಿದ್ದು, ನಂತರದ ಸ್ಥಾನದಲ್ಲಿರುವ ಮುಕೇಶ್ ಅಂಬಾನಿ, ಬಜಾಜ್ ಕುಟುಂಬ, ಕುಮಾರ್ ಮಂಗಳಂ ಬಿರ್ಲಾ ಕುಟುಂಬ, ಗೌತಮ್ ಅದಾನಿ ಕುಟುಂಬ ಸೇರಿ 4,625 ಕೋಟಿ ರೂ. ದಾನ ಮಾಡಿದ್ದಾರೆ.

ಇದನ್ನೂ ಓದಿ: ಅಂಬಾನಿ, ನಾರಾಯಣಮೂರ್ತಿ ಮಾತು ನಂಬಬೇಡಿ.. ಬೆಂಗಳೂರಿಗರಿಗೆ ₹95 ಲಕ್ಷ ಪಂಗನಾಮ; ಆಗಿದ್ದೇನು? 

ನಿತ್ಯ 5.9 ಕೋಟಿ ರೂ. ದೇಣಿಗೆ
ದಾನಿಗಳ ಪಟ್ಟಿಯ ಪ್ರಕಾರ HCL ಸಂಸ್ಥಾಪಕ ಶಿವ ನಾಡಾರ್, 2023ರ ಹಣಕಾಸು ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.5ರಷ್ಟು ಹೆಚ್ಚು ಆಸ್ತಿಯನ್ನು ದಾನ ಮಾಡಿದ್ದಾರೆ. 1994ರಲ್ಲಿ ಸ್ಥಾಪಿಸಲಾಗಿದ್ದ ಶಿವ ನಾಡಾರ್ ಫೌಂಡೇಷನ್ ಮೂಲಕ ಶಿಕ್ಷಣ, ಕಲೆ, ಸಂಸ್ಕೃತಿಗಾಗಿ ತಮ್ಮ ಸಂಪತ್ತು ದಾನ ಮಾಡಿದ್ದಾರೆ. ನಿತ್ಯ ಸರಾಸರಿ ದೇಣಿ ಲೆಕ್ಕ ಹಾಕಿದರೆ ಶಿವ ನಾಡಾರ್ ದಿನಕ್ಕೆ 5.9 ಕೋಟಿ ರೂ. ದಾನ ಮಾಡಿದ್ದಾರೆ.


">November 7, 2024

2ನೇ ಸ್ಥಾನದಲ್ಲಿ ಮುಖೇಶ್ ಅಂಬಾನಿ!
ರಿಲಯನ್ಸ್ ಮಾಲೀಕ ಮುಖೇಶ್ ಅಂಬಾನಿ ಈ ಆರ್ಥಿಕ ವರ್ಷದಲ್ಲಿ 407 ಕೋಟಿ ರೂ. ದೇಣಿಗೆ ನೀಡಿದ್ದು, ದಾನಿಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಬಜಾಜ್ ಕುಟುಂಬ 352 ಕೋಟಿ ರೂ. ದೇಣಿಗೆ ನೀಡಿ 3ನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕಿಂತ ಬಜಾಜ್ ಕುಟಂಬ ಈ ವರ್ಷ ಶೇ.33ರಷ್ಟು ಹೆಚ್ಚು ದಾನ ಮಾಡಿದೆ. 334 ಕೋಟಿ ರೂ. ದಾನ ಮಾಡಿರುವ ಕುಮಾರಮಂಗಳಂ ಬಿರ್ಲಾ ಕುಟುಂಬ 4ನೇ ಸ್ಥಾನದಲ್ಲಿದ್ದರೆ, ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಗೌತಮ್ ಅದಾನಿ ಮಾತ್ರ ದಾನಿಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಈ ವರ್ಷ ಗೌತಮ್ ಅದಾನಿ ನೀಡಿರುವ ದೇಣಿಗೆ ಕಳೆದ ವರ್ಷಕ್ಕಿಂತ ಶೇ.16ರಷ್ಟು ಹೆಚ್ಚಾಗಿದೆ.

publive-image

ಟಾಪ್ 10ನಲ್ಲಿರುವ ದಾನಿಗಳು
ಇನ್ಫೋಸಿಸ್​ನ ನಂದನ್ ನೀಲಕೇಣಿ 307 ಕೋಟಿ ದೇಣಿಗೆ ನೀಡಿ 6ನೇ ಸ್ಥಾನದಲ್ಲಿದ್ದಾರೆ. ನೀಲಕೇಣಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.62ರಷ್ಟು ಹೆಚ್ಚು ದೇಣಿಗೆ ನೀಡಿದ್ದಾರೆ. ನಂದನ್ ನೀಲಕೇಣಿ ಪತ್ನಿ ರೋಹಿಣಿ ನೀಲಕೇಣಿ 154 ಕೋಟಿ ರೂ. ದೇಣಿಗೆ ನೀಡಿ ಟಾಪ್ 10 ದಾನಿಗಳ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದು ಉದಾರ ಮಹಿಳೆ ಎನಿಸಿದ್ದಾರೆ.

ಇಂಡೋ MIM ಅಧ್ಯಕ್ಷ ಕೃಷ್ಣ ಚಿವುಕುಲ 228 ಕೋಟಿ ರೂ. ದೇಣಿಗೆ ನೀಡುವ ಮೂಲಕ ಮೊದಲ ಬಾರಿಗೆ ದಾನಿಗಳ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿದ್ದಾರೆ. ಚಿವುಕುಲ IIT ಮದ್ರಾಸ್​ಗೆ 228 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಸಿಎಸ್​ಆರ್​ನ ಅನಿಲ್ ಅಗರ್ವಾಲ್ ತಮ್ಮ ಫೌಂಡೇಷನ್ ಮೂಲಕ 181 ಕೋಟಿ ದೇಣಿಗೆ ನೀಡಿ 8ನೇ ಸ್ಥಾನದಲ್ಲಿದ್ದಾರೆ. ಶಿಕ್ಷಣ, ಆರೋಗ್ಯ ಸೇವೆ ಒದಗಿಸುತ್ತಿರುವ ಸುಶ್ಮಿತಾ ಮತ್ತು ಸುಬ್ರತೋ ಬಾಗ್ಚಿ 9ನೇ ಸ್ಥಾನದಲ್ಲಿದ್ದಾರೆ.

ಹೆಚ್ಚಾದ ದಾನಿಗಳ ಸಂಖ್ಯೆ! 
ಪ್ರಸಕ್ತ ಆರ್ಥಿಕ ವರ್ಷದಲ್ಲಿ ದಾನಿಗಳ ಸಂಖ್ಯೆ ದ್ವಿಗುಣಗೊಂಡಿದೆ. 2019ರಲ್ಲಿ 100 ಕೋಟಿಗಿಂತ ಹೆಚ್ಚು ದೇಣಿಗೆ ನೀಡಿದವರ ಸಂಖ್ಯೆ 9ರಿಂದ 18ಕ್ಕೆ ಏರಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment