/newsfirstlive-kannada/media/post_attachments/wp-content/uploads/2024/08/java-Adventure.jpg)
ಮೈಸೂರು ಮೂಲದ ಬೈಕ್​ ತಯಾರಕ ಕಂಪನಿಯಾದ ಜಾವ ಯೆಜ್ಡಿ ತನ್ನ ಗ್ರಾಹಕರಿಗಾಗಿ ಹೊಸ ಅಡ್ವೆಂಚರ್​ ಮಾದರಿಯನ್ನು ಪರಿಚಯಿಸಿದೆ. ನೂತನ ಮಾದರಿಯು ಮಾರುಕಟ್ಟೆಯಲ್ಲಿ ಗಮನ ಸೆಳೆದಿದ್ದು, ಸದ್ಯ ಬುಕ್ಕಿಂಗೂ ಕೂಡ ಪ್ರಾರಂಭವಾಗಿದೆ.
ಅಂದಹಾಗೆಯೇ ಕಂಪನಿ ರಾಯಲ್​ ಎನ್​ಫೀಲ್ಡ್​ ಸೇರಿ ಕೆಲವು ಅಡ್ವೆಂಚರ್​ ಬೈಕ್​ಗೆ ಪೈಪೋಟಿ ನೀಡಲು ನೂತನ ಬೈಕನ್ನು ಪರಿಚಯಿಸಿದೆ. ಕಾಸ್ಮೆಟಿಕ್​ ಲುಕ್​ ಹಾಗೂ ಆಕರ್ಷಕ ಬಣ್ಣದಿಂದ ಕೂಡಿದೆ.
ಇದನ್ನೂ ಓದಿ: ವಯನಾಡು ಭೂಕುಸಿತ ಪ್ರದೇಶದಲ್ಲಿ ಕಳ್ಳರ ಕಾಟ! ನೊಂದ ಜೀವಗಳಿಗೆ ಶುರುವಾಗಿದೆ ಮತ್ತೊಂದು ಟೆನ್ಶನ್​
ನೂತನ ಯೆಜ್ಡಿ ಅಡ್ವೆಂಚರ್​ 334ಸಿಸಿ ಸಿಂಗಲ್​ ಸಿಲಿಂಡರ್​​, ಲಿಕ್ವಿಡ್​ ಕೂಲ್ಡ್​ ಎಂಜಿನ್​ ಹೊಂದಿದೆ. ಗರಿಷ್ಠ 30 ಬಿಹೆಚ್​ಪಿ ಮತ್ತು 30 ಎನ್​ಎಮ್​ ಟಾರ್ಕ್​ ಉತ್ಪಾದಿಸುತ್ತಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: VIDEO: ಸೆಲ್ಫಿ ತೆಗೆಯಲು ಹೋಗಿ 100 ಅಡಿ ಪ್ರಪಾತಕ್ಕೆ ಬಿದ್ದ ಯುವತಿ! ಆಕೆ ಬದುಕಿ ಬಂದಿದ್ದೇ ರೋಚಕ
ಸಿಕ್ಸ್​ ಗೇರ್ಸ್​ ಹೊಂದಿಗೆ. ಕಚ್ಚಾ ರಸ್ತೆಯಲ್ಲಿಯೂ ಸರಾಗವಾಗಿ ಚಲಿಸಲು ಯೋಗ್ಯವಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಅಡ್ವೆಂಜರ್ ಬೈಕ್​ಗಳಿಗೆ ಇದು ಪೈಪೋಟಿ ನೀಡುತ್ತಿದೆ. ಗ್ರಾಹಕರಿಗಾಗಿ 2,09,900 ರೂಪಾಯಿಗೆ ಖರೀದಿಗೆ ಸಿಗುತ್ತಿದೆ. ​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us