ಚಿನ್ನ, ಬೆಳ್ಳಿ, ಹಣ ಕಳೆದುಕೊಳ್ಳಬಹುದು, ದಂಪತಿ ಮಧ್ಯೆ ಗಲಾಟೆ; ಇಲ್ಲಿದೆ ಇಂದಿನ ಭವಿಷ್ಯ

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಹೆಚ್ಚು ಖರ್ಚು, ಕುಟುಂಬದಲ್ಲಿ ಜಗಳ ಉಂಟಾಗಬಹುದು
  • ಅನಗತ್ಯ ಕೆಲಸದಿಂದ ಸಮಯ ವ್ಯರ್ಥ ಮಾಡಬಹುದು
  • ಜೀವನದ ನಿರಾಸೆಗಳನ್ನು ದೂರ ಮಾಡಿ, ಆಶಾದಾಯಕರಾಗಿರಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ
ಇರಲಿದೆ.

ಮೇಷ ರಾಶಿ

publive-image

  • ಕೆಲಸದ ಒತ್ತಡ, ತಾಳ್ಮೆ ಪರೀಕ್ಷೆಯ ದಿನ
  • ವ್ಯಾಪಾರದಲ್ಲಿ ಹಾನಿ, ಪರ್ಯಾಯ ವ್ಯವಸ್ಥೆಗೆ ಚಿಂತನೆ ನಡೆಸಬಹುದು
  • ಸಂಬಂಧಿಕರಿಂದ ಹಣಕ್ಕೆ ಒತ್ತಾಯ ಬರಬಹುದು
  • ಪ್ರೇಮಿಗಳಿಗೆ ಉತ್ತಮ ದಿನ
  • ಮಾನಸಿಕ ನೆಮ್ಮದಿಯಿಲ್ಲ, ಜಿಗುಪ್ಸೆಗೆ ಅವಕಾಶವಿದೆ
  • ತಂದೆಯವರಿಂದ ಉತ್ತಮ ಸಲಹೆ, ಹಣದ ಸಹಾಯ ಸಿಗಬಹುದು
  • ಅಶ್ವತ್ಥ ಮರಕ್ಕೆ 12 ಬಾರಿ ಪ್ರದಕ್ಷಿಣೆ ಹಾಕಿ

ವೃಷಭ

publive-image

  • ಹಳೆಯ ಸ್ನೇಹಿತರ ಭೇಟಿಯಿಂದ ಉತ್ಸಾಹ ಹೆಚ್ಚಾಗುತ್ತದೆ
  • ಹೆಚ್ಚು ಖರ್ಚು, ಕುಟುಂಬದಲ್ಲಿ ಜಗಳ ಉಂಟಾಗಬಹುದು
  • ಅನಗತ್ಯ ಕೆಲಸದಿಂದ ಸಮಯ ವ್ಯರ್ಥ ಮಾಡಬಹುದು
  • ಅನುಮಾನದ ಸಮಯ, ಮನಸ್ಸಿಗೆ ತುಂಬಾ ಕಿರಿಕಿರಿಯಾಗುತ್ತದೆ
  • ಜೀವನ ಶೈಲಿ ಬದಲಿಸಲು ಪ್ರಯತ್ನ ಮಾಡುತ್ತೀರಿ ಆದರೆ ಆಗುವುದಿಲ್ಲ
  • ಆಲಸ್ಯ ದೂರ ಮಾಡಿ ಆನಂದವಾಗಿರುತ್ತೀರಿ
  • ಕುಲದೇವತಾ ಪ್ರಾರ್ಥನೆ ಮಾಡಿ

ಮಿಥುನ

publive-image

  • ಜೀವನದ ನಿರಾಸೆಗಳನ್ನು ದೂರಮಾಡಿ, ಆಶಾದಾಯಕರಾಗಿರಿ
  • ಆತ್ಮವಿಶ್ವಾಸ ಬೆಳೆದಷ್ಟು ಅನುಕೂಲವಿರುತ್ತದೆ
  • ಆರ್ಥಿಕ ಹಿನ್ನಡೆ ಆದರೂ ಸಮಾಧಾನವಿರಲಿ
  • ಅಚ್ಚರಿಯ ಘಟನೆ ನಡೆಯಬಹುದು
  • ವಿದ್ಯಾರ್ಥಿಗಳಿಗೆ ಅನುಕೂಲವಿದೆ, ಸಹಾಯಧನ ಸಿಗುತ್ತದೆ
  • ಮಕ್ಕಳ ಚಿಂತೆಯಿಂದ ಹೊರಬನ್ನಿ
  • ಕಲಿಯುವ ಮಕ್ಕಳಿಗೆ ಅಧ್ಯಯನ ಸಾಮಾಗ್ರಿ ಕೊಡಿಸಿ

ಕಟಕ

publive-image

  • ಕ್ರೀಡಾರಂಗದಲ್ಲಿರುವವರಿಗೆ ಹೆಚ್ಚು ಅನುಕೂಲವಿರುವ ದಿನ
  • ಹೆಚ್ಚಿನ ಹಣದ ವ್ಯವಸ್ಥೆ ಸಿಗುವ ದಿನ
  • ರಸ್ತೆ ದಾಟುವಾಗ, ವಾಹನ ಚಾಲನೆಯಲ್ಲಿ ಜಾಗ್ರತೆಯಿರಲಿ ತೊಂದರೆಯಿದೆ
  • ಮನೆಯ ವಾತಾವರಣ ಚೆನ್ನಾಗಿರುತ್ತದೆ
  • ಮಾನಸಿಕ ದ್ವೇಷ, ಅಸೂಯೆಗಳನ್ನು ದೂರಮಾಡಿ
  • ಸ್ನೇಹಿತರು ಅಭಯ ನಿಮ್ಮ ಧೈರ್ಯ ಹೆಚ್ಚಿಸುತ್ತದೆ
  • ಸೋದರರ ಸಂಬಂಧದಲ್ಲಿ ಘರ್ಷಣೆಯಾಗಬಹುದು
  • ದುರ್ಗಾರಾಧನೆ ಮಾಡಿ

ಸಿಂಹ

publive-image

  • ದೀರ್ಘಕಾಲದ ಸಮಸ್ಯೆಗೆ ಪರಿಹಾರ ಸಿಗುವ ದಿನ
  • ಆರೋಗ್ಯದ ಬಗ್ಗೆ ತಾತ್ಸಾರ ಮಾಡಬೇಡಿ
  • ದೂರದ ಬಂಧುಗಳು, ಸ್ನೇಹಿತರು ಮನೆಗೆ ಬರಬಹುದು
  • ನಿಮ್ಮ ವರ್ತನೆ ಮನೆಯವರಿಗೆ ಬೇಸರ ತರಬಹುದು
  • ಕೆಲಸದ ಒತ್ತಡ, ಅಧಿಕ ಕೋಪದಿಂದ ನಿಮಗೆ ಹಿನ್ನಡೆ ಆಗಬಹುದು
  • ಮನೆ ಕೆಲಸದ ಬಗ್ಗೆ ಕಾಳಜಿ ವಹಿಸಿ, ಗೌರವವಿದೆ
  • ನರಸಿಂಹನನ್ನು ಪ್ರಾರ್ಥನೆ ಮಾಡಿ

ಕನ್ಯಾ

publive-image

  • ನಿಮ್ಮ ಏಕಾಗ್ರತೆಗೆ ತೊಂದರೆಯ ದಿನ
  • ವ್ಯಾಪಾರಕ್ಕಾಗಿ ಹಣ ಹೂಡಿಕೆ ಈ ದಿನ ಬೇಡ
  • ನಿಮ್ಮ ಉದ್ದೇಶದ ಬಗ್ಗೆ ಮುಕ್ತವಾಗಿ ಚರ್ಚಿಸಿ
  • ನಿಮ್ಮ ವೈಯಕ್ತಿಕ ಜೀವನಕ್ಕಾಗಿ ಸಮಯ ನೀಡಿ
  • ಮಕ್ಕಳಿಂದ ಶುಭ ವಾರ್ತೆ, ಸಂತೋಷ ಪಡುತ್ತೀರಿ
  • ಹಳೆಯ ನೆನಪುಗಳಿಂದ ನೋವು, ಬೇಸರವಾಗಬಹುದು
  • ಆಂಜನೇಯ ಸ್ವಾಮಿಯನ್ನ ಸ್ಮರಣೆ ಮಾಡಿ

ತುಲಾ

publive-image

  • ನಷ್ಟವಾಗಿದ್ದ ವಸ್ತು, ಹಣ, ಗೌರವ ಮತ್ತೆ ಸಿಗಬಹುದು
  • ಸಾಮಾಜಿಕ ಕಾರ್ಯಕ್ರಮದಲ್ಲಿ ಸ್ಥಾನಮಾನವಿರುತ್ತದೆ
  • ಹಿರಿಯರ, ಗುರುಗಳ ಆಶೀರ್ವಾದ ಲಭಿಸುತ್ತದೆ
  • ಪ್ರಾಣಿ ವ್ಯಾಪಾರಿಗಳಿಗೆ ಲಾಭವಿದೆ
  • ಮನೆಯ ಅಲಂಕಾರಕ್ಕಾಗಿ, ವಸ್ತು ಖರೀದಿಗೆ ಖರ್ಚು ಮಾಡಬಹುದು
  • ದಿನವೀಡಿ ಶ್ರಮಾದಾಯಕ ಕೆಲಸ ಆದರೆ ತೃಪ್ತಿಯಿರುತ್ತದೆ
  • ಕಾರ್ತವೀಱರ್ಜುನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

publive-image

  • ಅನಗತ್ಯ ಆಲೋಚನೆಗಳಿಂದ ಬೇಸರವಾಗುತ್ತದೆ
  • ಯಾವ ವಿಚಾರದಲ್ಲೂ ಸರಿಯಾದ ನಿರ್ಧಾರವಿಲ್ಲ
  • ಸ್ನೇಹಿತರು, ಬಂಧುಗಳು ನಿಮ್ಮ ಉಪಯೋಗ ಪಡೆಯುತ್ತಾರೆ
  • ಉದ್ಯೋಗದ ದೃಷ್ಟಿಯಿಂದ ಹಿನ್ನಡೆಯ ದಿನ
  • ಗರ್ಭಿಣಿಯರಿಗೆ ಕಾಲುನೋವಿನಿಂದ ಸಮಸ್ಯೆ ಕಾಡಬಹುದು
  • ಸಾಯಂಕಾಲ ಶುಭವಾರ್ತೆ ಕೇಳಬಹುದು
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಧನಸ್ಸು

publive-image

  • ರಸ್ತೆ ಅಪಘಾತದ ಸೂಚನೆಯಿದೆ ಎಚ್ಚರ
  • ಚಿನ್ನ, ಬೆಳ್ಳಿ, ಹಣ ಕಳೆದುಕೊಳ್ಳಬಹುದು
  • ಮನೆಯವರಲ್ಲಿ ಭಿನ್ನಾಭಿಪ್ರಾಯ ಆದರೆ ನಿಮ್ಮದೇ ಮೇಲುಗೈ
  • ವಿದ್ಯಾರ್ಥಿಗಳಿಗೆ ಅನುಕುಲವಲ್ಲದ ದಿನ
  • ಸುಳ್ಳಿನಿಂದ ಯಾವುದೇ ವಿಷಯವಾದ್ರೂ ತುಂಬಾ ಎಚ್ಚರಿಕೆವಹಿಸಿ
  • ಮೃತ್ಯುಂಜಯನ್ನು ಪ್ರಾರ್ಥನೆ ಮಾಡಿ

ಮಕರ

publive-image

  • ವಿರೋಧಗಳಿಂದ ಸಮಸ್ಯೆ ಕಾಡಬಹುದು
  • ಭೂ ಸಂಬಂಧೀ ವ್ಯವಹಾರಕ್ಕೆ ಅನುಕೂಲವಿದೆ ಆದರೆ ಸಮಾಧಾನವಿಲ್ಲ
  • ಪರರ ವಸ್ತು ನಿಮ್ಮ ಕೈಯಲ್ಲಿದ್ದು ಸಮಸ್ಯೆಯಾಗಬಹುದು
  • ಕಾರ್ಯ ನಿಮಿತ್ತ ಪ್ರಯಾಣ ಮಾಡಬಹುದು
  • ಮಕ್ಕಳಿಗೆ ತೊಂದರೆ ಕಾಣಬಹುದು
  • ಕುಟುಂಬದಲ್ಲಿ ಆಸ್ತಿ ವಿಚಾರಕ್ಕೆ ಮಾತುಕತೆ
  • ಭೂವರಹಾ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಕುಂಭ

publive-image

  • ಆತ್ಮವಿಶ್ವಾಸದಿಂದ ನಿಮ್ಮ ಜೀವನ ಹಸನಾಗುತ್ತದೆ
  • ಹಣದ ವಿಚಾರದಲ್ಲಿ ಜಾಗ್ರತೆವಹಿಸಿ ನಷ್ಟವಾಗಬಹುದು
  • ನಿಮ್ಮ ಕೋಪದಿಂದ ನಿಷ್ಟುರರಾಗುತ್ತೀರಿ
  • ಹಳೆಯ ಶರೀರದ ನೋವು ಮರುಕಳಿಸಬಹುದು
  • ದೂರದ ಊರಿನಿಂದ ಸಿಹಿ ಸುದ್ದಿ ಬರಬಹುದು
  • ಬಂಧುಗಳ ಭೇಟಿಯಿಂದ ಸಮಾಧಾನ
  • ನವಗ್ರಹರಾಧನೆ ಮಾಡಿ

ಮೀನ 

publive-image

  • ಆರೋಗ್ಯದಲ್ಲಿ ಗಮನವಿರಲಿ, ಆರೈಕೆ ಮಾಡಿಕೊಳ್ಳಿ
  • ಉತ್ತಮ ಜ್ಞಾನ ಸಂವೇದನೆಗೆ ಅವಕಾಶವಿದೆ
  • ಒಳ್ಳೆ ಹಾಸ್ಯ ಮಾಡುವವರಿಂದ ಆಕರ್ಷಿತರಾಗಬಹುದು
  • ಕುಟುಂಬದಲ್ಲಿ ಅನಿರೀಕ್ಷಿತ ಸಮಾಚಾರ ಮುನ್ನೆಲೆಗೆ ಬರಬಹುದು
  • ನಿಮ್ಮ ಪ್ರೀತಿ ಮಿತ್ರರು ನಿಮಗೆ ಕೈ ಕೊಡಬಹುದು
  • ಹಿರಿಯರನ್ನು ನಿರ್ಲಕ್ಷಿಸಬೇಡಿ
  • ಉಮಾಮಹೇಶ್ವರರನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment