/newsfirstlive-kannada/media/post_attachments/wp-content/uploads/2025/07/nirmala_sitharaman.jpg)
ದೇಶದಲ್ಲಿ 2025ರ ಜೂನ್​ ತಿಂಗಳಲ್ಲಿ ಮಾತ್ರ ಒಟ್ಟು 1.85 ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ (Goods and Services Tax) ಸಂಗ್ರಹವಾಗಿದೆ. ಕಳೆದ ವರ್ಷದ ಜೂನ್‌ಗೆ ಹೋಲಿಸಿದರೇ, ಈ ವರ್ಷದ ಜೂನ್​​ನಲ್ಲಿ ಜಿಎಸ್‌ಟಿ ಸಂಗ್ರಹ ಶೇ.6.2 ರಷ್ಟು ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.
2025ರ ಏಪ್ರಿಲ್ ತಿಂಗಳಲ್ಲಿ 2.37 ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿತ್ತು. 2025ರ ಮೇ ತಿಂಗಳಲ್ಲಿ 2.01 ಲಕ್ಷ ಕೋಟಿ ರೂ ಜಿಎಸ್‌ಟಿ ಸಂಗ್ರಹವಾಗಿತ್ತು. ಏಪ್ರಿಲ್, ಮೇ ತಿಂಗಳುಗಳಿಗೆ ಹೋಲಿಸಿದರೇ, ಕಳೆದ ತಿಂಗಳು ಅಂದರೆ ಜೂನ್​​ನಲ್ಲಿ ದೇಶದಲ್ಲಿ ಜಿಎಸ್‌ಟಿ ಸಂಗ್ರಹ ಕುಸಿತವಾಗಿದೆ.
ಇದನ್ನೂ ಓದಿ: ನಿರುದ್ಯೋಗದ ಬಗ್ಗೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಮಹತ್ವದ ನಿರ್ಧಾರ.. 1 ಲಕ್ಷ ಕೋಟಿ ರೂಪಾಯಿ ಯೋಜನೆಗೆ ಒಪ್ಪಿಗೆ!
/newsfirstlive-kannada/media/post_attachments/wp-content/uploads/2024/02/GST.jpg)
ವಿಶೇಷ ಅಂದರೇ, ದೇಶದಲ್ಲಿ ಜಿಎಸ್‌ಟಿ ಜಾರಿಗೆ ಬಂದು ಇಂದಿಗೆ 8 ವರ್ಷ ಪೂರ್ಣವಾಗಿವೆ. 2017ರ ಜುಲೈ 1 ರಂದು ದೇಶದಲ್ಲಿ ಜಿಎಸ್‌ಟಿ ಜಾರಿಯಾಗಿದೆ. ಮಧ್ಯರಾತ್ರಿ ಪಾರ್ಲಿಮೆಂಟ್​​ನಲ್ಲಿ ವಿಶೇಷ ಅಧಿವೇಶನ ನಡೆಸಿ ಜಿಎಸ್‌ಟಿ ಜಾರಿಗೆ ತರಲಾಗಿತ್ತು. ಜಿಎಸ್‌ಟಿ ಜಾರಿಯಿಂದ ದೇಶದಲ್ಲಿ ಜಿಡಿಪಿ ಕೂಡ ಶೇ.1 ರಿಂದ 2 ರಷ್ಟು ಬೆಳವಣಿಗೆಯಾಗುತ್ತೆ. ತೆರಿಗೆ ಸೋರಿಕೆಗೆ ಬ್ರೇಕ್ ಬೀಳುತ್ತೆ ಎಂಬ ಲೆಕ್ಕಾಚಾರ ಇತ್ತು. ಆದರೇ, ಈಗಲೂ ಜಿಎಸ್‌ಟಿ ವಂಚನೆಯ ಪ್ರಕರಣಗಳನ್ನು ಜಿಎಸ್‌ಟಿ ತನಿಖಾ ವಿಭಾಗವೇ ಪತ್ತೆ ಹಚ್ಚುತ್ತಿದೆ. ಇನ್ ಫುಟ್ ಟ್ಯಾಕ್ಸ್ ಕ್ರೆಡಿಟ್​ನಲ್ಲೂ ಇಂದಿಗೂ ವಂಚನೆ ಆಗುತ್ತಿದೆ.
ಜಿಎಸ್​ಟಿ ಎಂದರೆ..?
ಸರಕು ಮತ್ತು ಸೇವಾ ತೆರಿಗೆಯು (ಜಿಎಸ್‌ಟಿ) ಸರಕುಗಳ ತಯಾರಿಕೆ, ಮಾರಾಟ ಹಾಗೂ ಸೇವೆಗಳ ಬಳಕೆ ಮೇಲೆ ಇಡೀ ದೇಶದಲ್ಲಿ ಏಕರೂಪದಲ್ಲಿ ವಿಧಿಸಲಾಗುವ ಟ್ಯಾಕ್ಸ್​ ಆಗಿದೆ. ಹೊಸ ವ್ಯವಸ್ಥೆಯಲ್ಲಿ ಸರಕು ಹಾಗೂ ಸೇವೆಗಳ ಮೇಲೆ ಹಲವು ಹಂತಗಳಲ್ಲಿ ತೆರಿಗೆ ಕೊಡುವ ಬದಲು ಕೊನೆಯ ಹಂತದಲ್ಲಿ ಮಾತ್ರವೇ ಗ್ರಾಹಕ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us