/newsfirstlive-kannada/media/post_attachments/wp-content/uploads/2025/06/miss-world.jpg)
Miss World 2025.. ಹೈದರಾಬಾದ್‌ನಲ್ಲಿ ನಡೆದಿರೋ 2025 ಮಿಸ್ ವರ್ಲ್ಡ್ ಕಿರೀಟವನ್ನು ಥೈಲ್ಯಾಂಡ್‌ನ ಓಪಲ್ ಸುಚಾತಾ ಅವರು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಬಹು ನಿರೀಕ್ಷಿತ 72ನೇ ಆವೃತ್ತಿಯ ವಿಶ್ವ ಸುಂದರಿ 2025 ಗ್ರ್ಯಾಂಡ್ ಫಿನಾಲೆ ನಿನ್ನೆ ಹೈದರಾಬಾದ್‌ನಲ್ಲಿರುವ ಹೈಟೆಕ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದಿತ್ತು. 2025ರ ಮಿಸ್ ವರ್ಲ್ಡ್ ಗ್ರ್ಯಾಂಡ್ ಫಿನಾಲೆಯಲ್ಲಿ ಥೈಲ್ಯಾಂಡ್‌ನ ಓಪಲ್ ಸುಚಾತಾ ಅವರು ಕಿರೀಟವನ್ನು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:MiSS World 2025: ಮಿಸ್ ಥಾಯ್ಲೆಂಡ್ ಚೆಲುವೆಗೆ ವಿಶ್ವ ಸುಂದರಿ ಕಿರೀಟ; ನಂದಿನಿಗೆ ನಿರಾಸೆ!
ಹಾಲಿ ವಿಶ್ವ ಸುಂದರಿ ಜೆಕ್ ಗಣರಾಜ್ಯದ ಕ್ವೀನ್ ಕ್ರಿಸ್ಟಿನಾ ಪಿಸ್ಜ್ಕೋವಾ ತಮ್ಮ ಕಿರೀಟವನ್ನು ಓಪಲ್ ಸುಚಾಟಾ ಅವರ ಮುಡಿಗೇರಿಸಿದರು. ಆದ್ರೆ ವಿಶ್ವ ಸುಂದರಿ ಪಟ್ಟವನ್ನು ಮುಡಿಗೇರಿಸುವ ನಿರೀಕ್ಷೆ ಹುಟ್ಟಿಸಿದ್ದ ನಂದಿನಿ ರೇಸ್‌ನಿಂದ ಹೊರಬಿದ್ದು ಅಗ್ರ 8ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದರು.
ಆದ್ರೆ, ಈ ಬಾರಿಯ ವಿಶ್ವ ಸುಂದರಿಯಾದ ಥೈಲ್ಯಾಂಡ್‌ನ ಓಪಲ್ ಸುಚಾತಾ ಅವರು ಸ್ತನ ಕ್ಯಾನ್ಸರ್ನಿಂದ ಬಳಲುತ್ತಿದ್ದರಂತೆ. ಈ ಬಗ್ಗೆ ಖುದ್ದು ಥೈಲ್ಯಾಂಡ್‌ನ ಓಪಲ್ ಸುಚಾತಾ ಅವರೇ ಹೇಳಿಕೊಂಡಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತಾಡಿದ ಸುಂದರಿ, ಪ್ರತಿಷ್ಠಿತ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಥೈಲ್ಯಾಂಡ್ ಅನ್ನು ಪ್ರತಿನಿಧಿಸಲು ನನಗೆ ಸಂತೋಷವಾಗಿದೆ. ಅನಿರೀಕ್ಷಿತವಾಗಿ, ಮಿಸ್ ಥೈಲ್ಯಾಂಡ್‌ಗೆ ಮಿಸ್ ವರ್ಲ್ಡ್ ವೇದಿಕೆಗೆ ತಯಾರಿ ನಡೆಸಲು ನನಗೆ ಕೇವಲ 15 ದಿನಗಳು ಬೇಕಾಯಿತು ಎಂದಿದ್ದಾರೆ.
ಹೀಗೆ ಮಾತನ್ನು ಮುಂದುವರೆಸಿದ ಅವರು, ಆ ನೋವು ನನಗೆ ಗೊತ್ತು! ನನ್ನ ಜವಾಬ್ದಾರಿಯ ಭಾಗವಾಗಿ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇನೆ. ನನಗೆ 16ನೇ ವಯಸ್ಸಿನಲ್ಲಿ ಸ್ತನ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಮಾಡಲಾಯಿತು. ಇದರ ಭಾಗವಾಗಿ, ಕ್ಯಾನ್ಸರ್ ಅಲ್ಲದ ಗಡ್ಡೆಯನ್ನು ತೆಗೆದುಹಾಕಲಾಯಿತು. ಆ ಸಂದರ್ಭಗಳು ನನಗೆ ಆದ ನೋವುಗಳ ಬಗ್ಗೆ ಗೊತ್ತಿದೆ. ಅದಕ್ಕಾಗಿ ನಾನು ಸ್ತನ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮಗಳಲ್ಲಿ ವ್ಯಾಪಕವಾಗಿ ಭಾಗವಹಿಸುತ್ತೇನೆ. ಆರಂಭಿಕ ಚಿಕಿತ್ಸೆ ಗುರುತಿಸುವಿಕೆ ಅಗತ್ಯ. ನನ್ನ ಜೀವನದ ಗುರಿಯೇ ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ಮೂಡಿಸುವುದು. ನಾನು ಥಾಯ್ ಜನರಿಗೆ ಸ್ಫೂರ್ತಿ ನೀಡುವ ಮೂಲಕ ಜಗತ್ತಿಗೆ ಸೇವೆ ಸಲ್ಲಿಸುತ್ತೇನೆ. ಈ ವಿಷಯಗಳಲ್ಲಿ ನನ್ನ ತಾಯಿಯೇ ನನಗೆ ಸ್ಫೂರ್ತಿ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೇ ಮಿಸ್ ವರ್ಲ್ಡ್ ಪಟ್ಟದ ಬಗ್ಗೆ ಮಾತಾಡಿದ ಅವರು, ಇದು ನನ್ನ ಜೀವನದಲ್ಲಿ ನಡೆದ ಒಂದು ಪವಾಡ. ಇಷ್ಟು ಕಡಿಮೆ ಅವಧಿಯಲ್ಲಿ ಈ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಥಾಯ್ ಜನರು ಮತ್ತು ಅಂತರರಾಷ್ಟ್ರೀಯ ಅಭಿಮಾನಿಗಳ ಪ್ರೋತ್ಸಾಹಕ್ಕೆ ನಾನು ಯಾವಾಗಲೂ ಋಣಿಯಾಗಿರುತ್ತೇನೆ. ಈ ವೇದಿಕೆಯಲ್ಲಿ ವಿಜಯಶಾಲಿಯಾಗಿ ನಿಲ್ಲುವುದು ನನ್ನ ದೇಶಕ್ಕೆ ನಾನು ನೀಡುವ ಉಡುಗೊರೆ. ಥೈಲ್ಯಾಂಡ್‌ನ ಫುಕೆಟ್‌ನಲ್ಲಿ ಹುಟ್ಟಿ ಬೆಳೆದ ನಾನು ನನ್ನ ಶಿಕ್ಷಣವನ್ನು ಅಲ್ಲೇ ಮಾಡಿದೆ. ನಾನು ಉನ್ನತ ವ್ಯಾಸಂಗಕ್ಕಾಗಿ ಬ್ಯಾಂಕಾಕ್‌ಗೆ ಬಂದೆ. ಅಲ್ಲಿಂದ ನನ್ನ ಫ್ಯಾಷನ್ ಪಯಣ ಆರಂಭವಾಯಿತು.
ಇನ್ನೂ, ವಿಶ್ವ ಸುಂದರಿ ಪಟ್ಟ ಗಿಟ್ಟಿಸಿಕೊಂಡ ಬ್ಯೂಟಿಗೆ ಒಂದು ಮಿಲಿಯನ್ ಡಾಲರ್ ಅಂದರೆ ಸುಮಾರು 8.5 ಕೋಟಿ ರೂಪಾಯಿ, ಜೊತೆಗೆ ಬೆಲೆ ಬಾಳುವ ವಜ್ರದ ಕಿರೀಟ ನೀಡಲಾಗಿದೆ. ಇಥಿಯೋಪಿಯಾದ ಹ್ಯಾಸೆಟ್ ಡೆರೆಜೆ ಅಡ್ಮಾಸು ಮೊದಲ ರನ್ನರ್ ಅಪ್ ಆಗಿ ಸ್ಥಾನ ಪಡೆದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ