ಯುಗಾದಿ ತಾರಾಬಲ 2025: ಯಾರಿಗೆ ಗುರುಬಲ, ಯಾರಿಗೆ ಅಶುಭ.. ಇಲ್ಲಿದೆ ಹೊಸ ವರ್ಷದ ರಾಶಿ ಭವಿಷ್ಯ!

author-image
Veena Gangani
Updated On
ಯುಗಾದಿ ತಾರಾಬಲ 2025: ಯಾರಿಗೆ ಗುರುಬಲ, ಯಾರಿಗೆ ಅಶುಭ.. ಇಲ್ಲಿದೆ ಹೊಸ ವರ್ಷದ ರಾಶಿ ಭವಿಷ್ಯ!
Advertisment
  • ಕೈ ಹಾಕಿದ ಕೆಲಸಗಳಲ್ಲಿ ವಿಘ್ನ, ಕೆಲಸಗಳು ಅರ್ಧಕ್ಕೆ ನಿಲ್ಲುವ ಸೂಚನೆಗಳೇ ಹೆಚ್ಚು
  • ವ್ಯಾವಹಾರಿಕವಾಗಿ ಧನ ಲಾಭವಾಗುತ್ತದೆ ಹಾಗೇ ಅಧಿಕವಾಗಿ ಖರೀದಿ ಮಾಡುತ್ತೀರಿ
  • ದುರ್ಗಾದೇವಿಯ ಆರಾಧನೆ, ಪೂಜೆ, ಪ್ರಾರ್ಥನೆ, ಹೋಮ ಆಚರಿಣೆ ಮಾಡಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಕೃತಿಕಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ಗುರು ವೃಷಭ ರಾಶಿಯಲ್ಲಿರುವ ತನಕ ಯಾವುದೇ ರೀತಿಯ ಸಮಸ್ಯೆಗಳು ಬರುವುದಿಲ್ಲ
  • ಈ ವರ್ಷ ಮೇ 14ನೇ ತಾರೀಖಿನವರೆಗೆ ಎಲ್ಲವೂ ಚೆನ್ನಾಗಿರುತ್ತದೆ
  • ವ್ಯವಹಾರ, ಆರೋಗ್ಯ, ಹಣಕಾಸಿನ ವಿಚಾರ, ಅಂದುಕೊಂಡ ಕೆಲಸಗಳು ಚೆನ್ನಾಗಿ ನಡೆಯುತ್ತವೆ
  • ಮೇ 15ನೇ ತಾರೀಖಿನ ನಂತರ ಗುರು ಮಿಥುನ ರಾಶಿಯಲ್ಲಿ ಸಂಚಾರ ಆಗ ಮಿಶ್ರಫಲ
  • ಮನಸ್ಸಿನಲ್ಲಿ ನಾನಾ ರೀತಿಯ ಚಿಂತೆ, ಕೆಲಸದಲ್ಲಿ ವಿಘ್ನಗಳು ಹೆಚ್ಚಾಗುತ್ತವೆ
  • ಬಂಧು ಮಿತ್ರರಲ್ಲಿ ಮನಸ್ತಾಪ, ಶತ್ರುಗಳ ಕಾಟ, ಕಿರುಕುಳ ಹೆಚ್ಚಾಗುತ್ತದೆ
  • ಕುಟುಂಬದಲ್ಲಿ ಅಹಿತಕರ ವಾತಾವರಣ, ದುಷ್ಟರ ಸಹವಾಸ ಪ್ರಾಪ್ತವಾಗಬಹುದು
  • ಎಲ್ಲ ಕಡೆ ವಿರೋಧ ಜಗಳಗಳೇ ಹೆಚ್ಚಾಗುತ್ತವೆ
  • ಕೋಪದಿಂದ ಅನಾಹುತವಾಗುವ ಸಾಧ್ಯತೆಯಿದೆ
  • ದುರ್ಗಾದೇವಿಯ ಆರಾಧನೆ, ಪೂಜೆ, ಪ್ರಾರ್ಥನೆ, ಹೋಮ ಆಚರಿಣೆ ಮಾಡಿ
  • ಪ್ರತಿ ಅಮವಾಸ್ಯೆಯಂದು ನಿಂಬೆಹಣ್ಣು, ಬೂದುಗುಂಬಳ ಕಾಯಿಯಿಂದ ದೃಷ್ಠಿ ತೆಗೆದುಕೊಳ್ಳಿ
  • ಈ ಮಂತ್ರವನ್ನು ಮಂಗಳವಾರ, ಶುಕ್ರವಾರ, ಹುಣ್ಣಿಮೆ, ಅಮವಾಸ್ಯೆಯಂದು 9 ಬಾರಿ ಪಠಿಸಿ
  • ಜಯಂತೀ ಮಂಗಳ ಕಾಲೀ ಭದ್ರಕಾಲೀ ಕಪಾಲಿನಿ|
  • ದುರ್ಗಾ ಕ್ಷಮಾ ಶಿವಾಧಾತ್ರೀ ಸ್ವಾಹಾ ಸ್ವಧಾ ನಮೋಸ್ತುತ್ತೇ||

ವೃಷಭ

publive-image

  • ಗುರುವಿನಿಂದ ಸಾಧಾರಣ ಮತ್ತು ಮಿಶ್ರಫಲ ಸಿಗುತ್ತದೆ
  • ಶನಿಯಿಂದ ಉತ್ತಮವಾದ ಫಲ ಸಿಗುತ್ತದೆ
  • ಉದ್ಯೋಗದಲ್ಲಿ ಅಲ್ಪ ಪ್ರಗತಿ, ಅತಿಯಾದ ತಿರುಗಾಟ ಇರುತ್ತದೆ
  • ಬಂಧುಗಳಲ್ಲಿ ಜಗಳ, ಮನಸ್ತಾಪವಾಗುತ್ತದೆ
  • ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಸುಧಾರಣೆಯಾಗುತ್ತದೆ
  • ವ್ಯಾವಹಾರಿಕವಾಗಿ ಧನ ಲಾಭವಾಗುತ್ತದೆ ಹಾಗೇ ಅಧಿಕವಾಗಿ ಖರೀದಿ ಮಾಡುತ್ತೀರಿ
  • ಸರ್ಕಾರಿ ಕ್ಷೇತ್ರದಲ್ಲಿ ಸೇವೆ ಮಾಡುವವರಿಗೆ ಅನುಕೂಲಕರ ಸಮಯ
  • ಶನಿಯಿಂದ ಸ್ಥಿರಾಸ್ತಿಗೆ ಒಡೆಯರಾಗುವ ಯೋಗವಿದೆ
  • ಗುರು ಚರಿತ್ರೆಯನ್ನು ಪಾರಾಯಣ ಮಾಡಿ
  • ವಿಶೇಷವಾಗಿ ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ
  • ಸಾಧು ಸಂತರಿಗೆ, ಅವಧೂತರಿಗೆ ದವಸ, ಧಾನ್ಯದ ಸಹಾಯ ಮಾಡಿ
  • ಪ್ರತಿ ಗುರುವಾರ ಸೂರ್ಯೋದಯಕ್ಕೆ ಸರಿಯಾಗಿ ಪೂರ್ವಾಭಿಮುಖವಾಗಿ 28 ಬಾರಿ "ದತ್ತಾತ್ರೇಯಾಯ ನಮಃ" ಎಂದು ಪಠಣೆ ಮಾಡಿ

ಮಿಥುನ

publive-image

  • ಈ ವರ್ಷದ ಆರಂಭ ಅಷ್ಟೊಂದು ಚೆನ್ನಾಗಿಲ್ಲ ನಂತರ ನಿಧಾನವಾಗಿ ಸರಿಯಾಗುತ್ತದೆ
  • ಗುರುವಿನಿಂದ ಅಶುಭ ಫಲಗಳೇ ಹೆಚ್ಚಾಗಿ ಕಾಣಬಹುದು
  • ವಾಸಸ್ಥಳ, ಉದ್ಯೋಗದಲ್ಲಿ ಬದಲಾವಣೆ ಕಾಣುತ್ತೀರಿ
  • ಹೆಚ್ಚು ಹೆಚ್ಚು ಯೋಚನೆ ಮಾಡುವ ಪರಿಸ್ಥಿತಿ ಬರುತ್ತದೆ
  • ವಿನಾಕಾರಣ ಧನವ್ಯಯ, ಮಿತ್ರರಿಂದ ವಂಚನೆಗೆ ಒಳಗಾಗಬಹುದು
  • ಕೈ ಹಾಕಿದ ಕೆಲಸಗಳಲ್ಲಿ ವಿಘ್ನ, ಕೆಲಸಗಳು ಅರ್ಧಕ್ಕೆ ನಿಲ್ಲುವ ಸೂಚನೆಗಳೇ ಹೆಚ್ಚು
  • ಅರ್ಧ ವರ್ಷ ಕಳೆದ ನಂತರ ಸ್ವಲ್ಪಮಟ್ಟಿಗೆ ಸುಧಾರಣೆಯ ಸಮಯ ಬರುತ್ತದೆ
  • ಅರ್ಧ ವರ್ಷ ಕಳೆದ ನಂತರ ಧರ್ಮ ಕಾರ್ಯಾಸಕ್ತಿ ಬರುತ್ತದೆ
  • ಶನಿ ಮೀನ ರಾಶಿಯಲ್ಲಿ ಸಂಚಾರದಿಂದ ಶತ್ರುಗಳಿಂದ ತೊಂದರೆಯಾಗುತ್ತದೆ
  • ಕುಟುಂಬದಲ್ಲಿ ಅನಾರೋಗ್ಯ ಸಮಸ್ಯೆ ಹೆಚ್ಚಾಗಿ ಕಾಡಬಹುದು
  • ಒಂದು ಕೆಲಸಕ್ಕೆ ಹಲವಾರು ಬಾರಿ ಪ್ರಯತ್ನ ಅದರಿಂದ ಬೇಸರವಾಗುತ್ತದೆ
  • ಶತ್ರುಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾರೆ
  • ಮಾನಸಿಕವಾಗಿ ಬೇಸರ, ಅಸಮಾಧಾನ ಹೆಚ್ಚಾಗುತ್ತದೆ
  • ಪ್ರತಿ ದಿನ ಪ್ರತ್ಯಂಗಿರಾ ದೇವಿಯ ಅಷ್ಟೋತ್ತರ ಶತನಾಮವಳಿಗಳನ್ನು ಪಠಣೆ ಮಾಡಿ
  • ಹುಣ್ಣಿಮೆ ಮತ್ತು ಅಮವಾಸ್ಯೆಯಂದು ಬೆಳಗ್ಗೆ ಮತ್ತು ಸಂಜೆ ಪ್ರತ್ಯಂಗಿರಾ ದೇವಿಯನ್ನು ಪ್ರಾರ್ಥನೆ ಮಾಡಿ

ಕಟಕ

publive-image

  • ಮೇ 14ನೇ ತಾರೀಖಿನವರೆಗೆ ಸ್ವಲ್ಪ ಸಮಾಧಾನ, ಸಂತೋಷದ ಸಮಯ
  • ಆರೋಗ್ಯದಲ್ಲಿ ಸ್ವಲ್ಪಮಟ್ಟಿಗೆ ಸುಧಾರಣೆ ಆಗುತ್ತದೆ
  • ಬಂಧು ಮಿತ್ರರ ಒಡನಾಟ, ಸಹಾಯ, ಸಹಕಾರ ಸಿಗುತ್ತದೆ
  • ಸಾರ್ವಜನಿಕ ಕ್ಷೇತ್ರದಲ್ಲಿ ಸಾಮಾಜಿಕವಾಗಿ ನಿಮಗೆ ಜಯ, ಸ್ಥಾನಮಾನ, ಗೌರವ ಸಿಗುತ್ತದೆ
  • ಸತ್ಕರ್ಮಾಸಕ್ತಿ ಮನಸ್ಸಿಗೆ ಬರುತ್ತದೆ ಅದರಿಂದ ಶುಭ ಫಲಗಳನ್ನು ಕಾಣುತ್ತೀರಿ
  • ಅಕ್ಟೋಬರ್​ 18ನೇ ತಾರೀಖಿನಿಂದ ಡಿಸೆಂಬರವರೆಗೆ ತುಂಬಾ ಕಷ್ಟಕಾಲ
  • ಆಪಾದನೆಗಳು, ಅವಮಾನ ಹೆಚ್ಚಾಗಬಹುದು
  • ಪ್ರಯಾಣದಿಂದ ತೊಂದರೆಯಿದೆ ಅಪಘಾತ, ಆಘಾತವಾಗಬಹುದು
  • ಶನಿಯು ಮೀನ ರಾಶಿಯಲ್ಲಿ ಸಂಚರಿಸುವಾಗ ವ್ಯವಹಾರದಲ್ಲಿ ಅಪಜಯ
  • ವ್ಯಾಪಾರ, ವ್ಯವಹಾರದಲ್ಲಿ ನಷ್ಟ- ಶತ್ರುಗಳ ಕಾಟ ಹೆಚ್ಚಾಗುತ್ತದೆ
  • ಜೀವನ ಜಿಗುಪ್ಸೆ ಬರುವ ಸೂಚನೆಗಳೇ ಹೆಚ್ಚು ಆದರೆ ಧೈರ್ಯದಿಂದ ಎದುರಿಸಿ
  • ಪ್ರತಿನಿತ್ಯ ವಿಷ್ಣು ಸಹಸ್ರನಾಮವನ್ನು ಶ್ರವಣ ಅಥವಾ ಪಠಣೆ ಮಾಡಿ
  • ತುಳಸಿ ಗಿಡಕ್ಕೆ ಶುದ್ಧವಾದ ನೀರನ್ನು ಹಾಕಿ
  • ತುಳಸಿ ಗಿಡಗಳನ್ನು ದಾನ ಮಾಡಿ
  • ಯಾರೊಂದಿಗೂ ವಿರೋಧ ಮಾಡಿಕೊಳ್ಳಬೇಡಿ

ಸಿಂಹ

publive-image

  • ಈ ವರ್ಷದ ಆರಂಭ ಮತ್ತು ಅಂತ್ಯ ಎರಡು ಅಷ್ಟೊಂದು ಚೆನ್ನಾಗಿಲ್ಲ
  • ಮೇ ತಿಂಗಳಿನಿಂದ ಅಕ್ಟೋಬರ್ ಆರಂಭದವರೆಗೆ ಸಮಾಧಾನಕರ ಸಮಯ
  • ಯಾರನ್ನ ತುಂಬಾ ನಂಬಿರ್ತೀರಿ ಅವರೇ ಮೋಸ ಮಾಡುತ್ತಾರೆ ಎಚ್ಚರ
  • ನೀವು ಎಷ್ಟೇ ಬುದ್ಧಿವಂತರಾಗಿದ್ರು ಹಿತಶತ್ರುಗಳು ತಮ್ಮ ಕೈ ಚಳಕವನ್ನು ತೋರಿಸುತ್ತಾರೆ
  • ಅತಿಯಾದ ಕೋಪ, ಮಾನಸಿಕ ಸ್ತಿಮಿತತೆ ಇಲ್ಲದೆ ತೊಂದರೆಯಾಗುತ್ತದೆ
  • ಮಿಥುನ ರಾಶಿಯ ಗುರು ಮನಸ್ಸಿಗೆ ಅಲ್ಪ ನೆಮ್ಮದಿಯನ್ನು ಕೊಡುತ್ತಾನೆ
  • ಈ ವರ್ಷ ವಿವಾಹಾದಿ ಮಂಗಳ ಕಾರ್ಯಾಗಳು ನಡೆಯುತ್ತವೆ
  • ಶನಿ ಮೀನ ರಾಶಿಯಲ್ಲಿ ಸಂಚರಿಸುವಾಗ ಅಶುಭ ಫಲಗಳನ್ನು ಕೊಡುತ್ತಾನೆ
  • ತಂದೆ ಮಕ್ಕಳಲ್ಲಿ ಸ್ವಲ್ಪಮಟ್ಟಿಗೆ ಭಿನ್ನಾಭಿಪ್ರಾಯ, ಮನಸ್ತಾಪಗಳು ಬರುತ್ತವೆ
  • ಹಣದ ಅಭಾವ ಹೆಚ್ಚಾಗಿ ಕಾಡಬಹುದು
  • ಬಂಧು ಮಿತ್ರರಿಂದ ಅವಮಾನವಾಗಬಹುದು
  • ಆರೋಗ್ಯ ಮತ್ತು ಮಾನಸಿಕ ಸ್ಥಿತಿಯ ಬಗ್ಗೆ ಗಮನವಿರಲಿ, ಮಾನಸಿಕ ಕಿರಿಕಿರಿ ಹೆಚ್ಚಾಗಬಹುದು
  • ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಗಳು ಅತೀ ಹೆಚ್ಚು ಪರಿಶ್ರಮ ಪಡಬೇಕು
  • ಪ್ರತಿನಿತ್ಯ ಸೂರ್ಯ ನಮಸ್ಕಾರವನ್ನು ಮಾಡಿ
  • ಸೂರ್ಯ ಸಂಬಂಧೀ ಸ್ತೋತ್ರಗಳನ್ನು ಪಠಣೆ ಮಾಡಿ
  • ಪ್ರತಿ ಭಾನುವಾರ ಸೂರ್ಯನಿಗೆ ನಮನ ಸಲ್ಲಿಸಿ ಬಿಳಿ ಎಕ್ಕದ ಗಿಡಕ್ಕೆ ಪ್ರದಕ್ಷಿಣೆ ಮಾಡಿ

ಕನ್ಯಾ

publive-image

  • ವರ್ಷದ ಆರಂಭ ಮತ್ತು ಅಂತ್ಯದಲ್ಲಿ ಗುರುವಿನ ಸಂಚಾರದಿಂದ ಶುಭವಿದೆ
  • ಮೇ 15ರಿಂದ ಸೆಪ್ಟಂಬರ್​ ಕೊನೆಯವರೆಗೆ ಅತಿಯಾದ ಕಷ್ಟ, ನೋವು ಅನುಭವಿಸಬೇಕಾಗುತ್ತದೆ
  • ಪರಸ್ಥಳ ವಾಸ ಮಾಡುವ ಪರಿಸ್ಥಿತಿ ಬರಬಹುದು
  • ಕುಟುಂಬ ಸದಸ್ಯರಿಂದ ದೂರವಾಗಬಹುದು
  • ಮಕ್ಕಳ ವಿಚಾರದಲ್ಲಿ ತುಂಬ ಬೇಸರವಾಗುತ್ತದೆ
  • ಆರೋಗ್ಯದಲ್ಲಿ ದೊಡ್ಡ ಮಟ್ಟದ ಸಮಸ್ಯೆ ಎದುರಿಸಬಹುದು
  • ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ದೊಡ್ಡ ಗೊಂದಲ ಮಾಡಿಕೊಳ್ಳುತ್ತೀರಿ
  • ಶನಿಯ ಸಂಚಾರ ನೀಚ ಕರ್ಮದಲ್ಲಿ ನಿಮ್ಮ ಮನಸ್ಸನ್ನು ತೊಡಗಿಸಿ ಕೊಳ್ಳುವ ಹಾಗೆ ಮಾಡುತ್ತದೆ
  • ಉದ್ದೇಶ ಇಲ್ಲದೆ ಸುಮ್ಮನೆ ತಿರುಗುತ್ತೀರಿ
  • ಒಪ್ಪಿಕೊಂಡ ಯಾವ ಮಾತನ್ನು ಈಡೇರಿಸುವುದಿಲ್ಲ
  • ಮಿತ್ರರನ್ನೆಲ್ಲ ಶತ್ರುಗಳನ್ನಾಗಿ ಮಾಡಿಕೊಳ್ಳುತ್ತೀರಿ
  • ಆಂಜನೇಯ ಸ್ವಾಮಿಯನ್ನು ವಿಶೇಷವಾಗಿ ಪೂಜೆ, ಪ್ರಾರ್ಥನೆ ಮಾಡಿ
  • ಪ್ರತಿ ಶನಿವಾರ ಹನುಮಾನ್​ ಚಾಲೀಸಾ ಪಠಣೆ ಅಥವಾ ಶ್ರವಣ ಮಾಡಿ
  • ಸುಂದರಕಾಂಡ ರಾಮಾಯಣವನ್ನು ಪಾರಾಯಣ ಮಾಡಿಸಿ

ತುಲಾ

publive-image

  • ಗುರು ವೃಷಭ ಮತ್ತು ಕಟಕ ರಾಶಿಯಲ್ಲಿ ಸಂಚಾರ ಮಾಡುವಾಗ ಅಷ್ಟೊಂದು ಚೆನ್ನಾಗಿರುವುದಿಲ್ಲ
  • ಜೂನ್​, ಜುಲೈ, ಆಗಸ್ಟ್, ಸೆಪ್ಟೆಂಬರ್ ಈ ನಾಲ್ಕು ತಿಂಗಳು ತುಂಬಾ ಚೆನ್ನಾಗಿರುತ್ತವೆ
  • ಸಮಯ ಚೆನ್ನಾಗಿಲ್ಲದಿರುವಾಗ ಹಣ ಕಳೆದು ಕೋಳಬಹುದು, ಕಳ್ಳರ ಭೀತಿ
  • ಬಂಧುಗಳಲ್ಲಿ ಸ್ವಲ್ಪ ನಿಷ್ಠೂರವಾಗುತ್ತೀರಿ
  • ಪರಿಚಯದವರು ಕೆಲವು ವಿಚಾರಕ್ಕೆ ಒಪ್ಪಿಗೆ ನೀಡುವುದಿಲ್ಲ, ವ್ಯಾವಹಾರಿಕವಾಗಿ ದೂರವಾಗ್ತಾರೆ
  • ಹಣ ಹೂಡಿಕೆ ವಿಚಾರದಲ್ಲಿ ಹಿಂದೆ ಮುಂದೆ ಆಗುತ್ತದೆ, ಹಣದ ಅಭಾವ ಕಾಡುತ್ತದೆ
  • ವರ್ಷದ ಉತ್ತರ ಭಾಗದಲ್ಲಿ ಎಲ್ಲಾ ವಿಚಾರಗಳು ಒಂದೊಂದೇ ಸರಿಯಾಗುತ್ತವೆ
  • ಪುಣ್ಯಕ್ಷೇತ್ರ ದರ್ಶನ, ದೂರದೂರಿಗೆ ಪ್ರವಾಸ, ವಿದೇಶ ಪ್ರವಾಸ ಒದಗಿಬರುತ್ತವೆ
  • ಶನಿ ಮೀನ ರಾಶಿಯಲ್ಲಿ ಸಂಚಾರ ಮಾಡುವಾಗ ಮಿಶ್ರ ಫಲಗಳು ಹೆಚ್ಚಾಗಿರುತ್ತವೆ ಆದರೆ ವಿಶೇಷ ಫಲ ಕೂಡ ನೀಡುತ್ತಾನೆ
  • ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಗುರು ಹಿರಿಯರ ಆಶೀರ್ವಾದ ಸಿಗುತ್ತದೆ
  • ಬಹಳ ದಿನಗಳ ಕಾನೂನು ಹೋರಾಟದಲ್ಲಿ ಜಯ ಸಿಗುತ್ತದೆ
  • ನಿಮ್ಮ ಜೀವಮಾನ ಸಾಧನೆಯಾಗುವ ವರ್ಷ
  • ಆರ್ಥಿಕವಾಗಿ ವರ್ಷದ ಕೊನೆಯಲ್ಲಿ ಅಭಿವೃದ್ಧಿ ಕಾಣುತ್ತೀರಿ
  • ಲಕ್ಷ್ಮೀನಾರಾಯಣ ಹೃದಯ ಸ್ತೋತ್ರ ಪಾರಾಯಣ ಮತ್ತು ಹೋಮವನ್ನು ಅಗತ್ಯವಾಗಿ ಮಾಡಿಸಿ

ವೃಶ್ಚಿಕ

publive-image

  • ಗುರುವಿನ ಸಂಚಾರ ವರ್ಷದ ಆರಂಭ ಮತ್ತು ಕೊನೆಯಲ್ಲಿ ಅನುಕೂಲ ಮಾಡುತ್ತದೆ
  • ಗುರು 8ನೇ ಮನೆ ಮಿಥುನ ರಾಶಿ ಪ್ರವೇಶ ಮಾಡಿದಾಗ ಎಲ್ಲ ವಿಚಾರಗಳಲ್ಲಿ ಎಚ್ಚರಿಕೆಯಿಂದಿಬೇಕು
  • ಆರೋಗ್ಯದಲ್ಲಿ ದೊಡ್ಡ ಮಟ್ಟದ ಸಮಸ್ಯೆ ಕಾಡುತ್ತದೆ
  • ಸರ್ಕಾರಿ ಕೆಲಸಗಳಲ್ಲಿ ವಿಘ್ನಗಳು ಉಂಟಾಗುತ್ತವೆ
  • ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ಅಪಜಯವಾಗುತ್ತದೆ
  • ದುಷ್ಟ ಜನರಿಂದ ತೊಂದರೆ, ಜೀವ ಭೀತಿ ಕಾಡಬಹುದು
  • ಆಸ್ಪತ್ರೆಗೆ ಹೆಚ್ಚು ಹಣ ಖರ್ಚಾಗಬಹುದು
  • ಪುಣ್ಯಕ್ಷೇತ್ರ ದರ್ಶನಕ್ಕೆ ಅವಕಾಶಗಳಿವೆ ಅಗತ್ಯವಾಗಿ ದೇವರ ದರ್ಶನ ಮಾಡಿ
  • ನಿಮ್ಮ ಯಾವುದೇ ಯೋಜನೆಗಳನ್ನು ಪ್ರಯಾಸದಿಂದ ಮಾಡಬೇಡಿ
  • ನಿಮ್ಮ ಆರ್ಥಿಕ ಸ್ಥಿತಿಯನ್ನು ಕಾಪಾಡಿಕೊಳ್ಳಬೇಕು
  • ಕೌಟುಂಬಿಕ ಕಲಹ, ಮನಸ್ತಾಪಗಳು ಹೆಚ್ಚಾಗಿರುತ್ತವೆ
  • ನಿಮ್ಮ ಆತ್ಮಸ್ಥೈರ್ಯವನ್ನು ಹೆಚ್ಚು ಮಾಡಿಕೊಳ್ಳಬೇಕು, ಧೈರ್ಯ ಬಹಳ ಮುಖ್ಯ
  • ಪ್ರತಿನಿತ್ಯ ಲಲಿತಾ ಸಹಸ್ರನಾಮ ಶ್ರವಣ ಮಾಡಿ ಅಥವಾ ಪಠಣೆ ಮಾಡಿ
  • ವೃದ್ಧರಿಗೆ ಆಹಾರವನ್ನು ಕೊಡಿ, ಕೈಲಾದಷ್ಟು ಸಹಾಯ ಮಾಡಿ

ಧನಸ್ಸು

publive-image

  • ರಾಶ್ಯಾಧಿಪತಿ ಗುರುವಿನ ಪ್ರಭಾವ ರಾಶಿ ಮೇಲೆ ತುಂಬಾಯಿದ್ದು ಹೆಚ್ಚಿನ ಫಲ ನೀಡುತ್ತಾನೆ
  • ಗುರು 6 ಮತ್ತು 8ನೇ ಮನೆಯಲ್ಲಿ ಸಂಚರಿಸುವಾಗ ಅತಿಯಾದ ಕಷ್ಟನಷ್ಟಗಳನ್ನು ನೋಡಬೇಕಾಗುತ್ತದೆ
  • ಎಲ್ಲಾ ವಿಚಾರಗಳು ಲಾಭದಾಯಕ ಅನಿಸಬಹುದು ಆದರೆ ಫಲ ಅಶುಭವಾಗಿ ಸಿಗುತ್ತವೆ
  • ಮನಸ್ತಾಪ, ಅನಾರೋಗ್ಯ ಸಮಸ್ಯೆ ಕಾಡಬಹುದು
  • ಗುರು 7ನೇ ಮನೆಯಲ್ಲಿ ಸಂಚರಿಸುವಾಗ ಎಲ್ಲಾ ರೀತಿಯ ಸುಖ, ಸಂತೋಷ ಸಿಗುವ ಸಮಯ
  • ಶುಭ ಕಾರ್ಯಾಗಳು ನಡೆಯುತ್ತವೆ ಆದರೆ ನಿಮಗೆ ಸಮಾಧಾನ ಇರುವುದಿಲ್ಲ
  • ಆರ್ಥಿಕವಾಗಿ ಸುಧಾರಣೆ ಕಾಣಬಹುದು
  • ಶನಿ ಮೀನ ರಾಶಿಯಲ್ಲಿ ಸಂಚರಿಸುವಾಗ ಅಶುಭ ಪ್ರಭಾವ ಉಂಟಾಗುತ್ತದೆ
  • ಕೊಟ್ಟು ಕಿತ್ತುಕೊಳ್ಳುವ ಪ್ರಸಂಗಗಳು ಹೆಚ್ಚಾಗಿ ನಡೆಯುತ್ತವೆ
  • ಕುಟುಂಬ ಮತ್ತು ಆಪ್ತರಲ್ಲಿ ಸಾವು, ನೋವುಗಳನ್ನು ನೋಡಬೇಕಾಗುತ್ತದೆ
  • ಕೈ ಕೆಳಗೆ ಕೆಲಸ ಮಾಡವವರೆ ನಿಮಗೆ ತೊಂದರೆ ಮಾಡುತ್ತಾರೆ
  • ತಾಳ್ಮೆ ಕಳೆದುಕೊಳ್ಳುವುದು, ಕೆಟ್ಟ ನಿರ್ಧಾರ ಮಾಡುವುದು ಬೇಡ
  • ನರಸಿಂಹ ಸ್ವಾಮಿಯನ್ನು ವಿಶೇಷವಾಗಿ ಪೂಜೆ ಮಾಡಿ
  • ಪ್ರತಿ ಗುರುವಾರ ನಿಮ್ಮ ಗುರುಗಳನ್ನು ಸ್ಮರಣೆ ಮಾಡಿ ಅವರ ಆಶೀರ್ವಾದ ಪಡೆಯಿರಿ
  • ಕ್ಷೇತ್ರ, ಮಠಗಳಲ್ಲಿ ನಿಮ್ಮ ಕೈಲಾದ ಸೇವೆಯನ್ನ ಮಾಡಿ

ಮಕರ

publive-image

  • ಗುರು ಗ್ರಹ ವೃಷಭ ಮತ್ತು ಕಟಕ ರಾಶಿಯಲ್ಲಿರುವಾಗ ಶುಭಫಲಗಳು ಹೆಚ್ಚಾಗಿರುತ್ತವೆ
  • ದೊಡ್ಡ ಕಾಯಿಲೆಗಳಿದ್ದರೂ ಸ್ಪಲ್ಪ ಗುಣಮುಖವಾಗುವ ಸೂಚನೆ ಸಿಗುತ್ತದೆ
  • ಮನಸ್ತಾಪದಿಂದ ದೂರವಾಗಿದ್ದವರು ಪುನಃ ಹತ್ತಿರವಾಗುತ್ತಾರೆ
  • ಸಜ್ಜನರ ಸಹವಾಸದಿಂದ ಕೀರ್ತಿ, ಸತ್ಕರ್ಮಾಸಕ್ತಿ ಬರುತ್ತದೆ
  • ಕುಟುಂಬದಲ್ಲಿ ಸ್ಪಲ್ಪ ಮಟ್ಟಿನ ಸಮಾಧಾನ ಸಿಗುತ್ತದೆ
  • ಮೇ 14ರ ನಂತರ ದುಡ್ಡು ಕಾಸಿನ ವಿಚಾರದಲ್ಲಿ ಸಮಸ್ಯೆಗಳು ಆರಂಭವಾಗುತ್ತವೆ
  • ಬಂಧುಗಳಲ್ಲಿ ಹಣಕಾಸಿನ ವಿಚಾರದಲ್ಲಿ ಜಗಳವಾಗುತ್ತದೆ
  • ಆರೋಗ್ಯದಲ್ಲಿ ತತಕ್ಷಣದಲ್ಲಿ ವ್ಯತ್ಯಾಸವಾಗುತ್ತದೆ
  • ಮಾನಸಿಕವಾದ ಚಿಂತೆ, ಯಾವ ವಿಷಯದಲ್ಲೂ ಆಸಕ್ತಿ ಇರುವುದಿಲ್ಲ
  • ಶನಿಯ ಸ್ಥಾನ ಬದಲಾವಣೆ ಮಧ್ಯದಲ್ಲಿ ಬಲವಂತದ ಕೆಲವು ಕೆಲಸಗಳನ್ನು ಮಾಡಿಸುತ್ತದೆ
  • ಸ್ಥಿರಾಸ್ತಿಯ ವಿಚಾರ ಮುನ್ನೆಲೆಗೆ ಬರುತ್ತದೆ ಆದರೆ ಬರೀ ಗೊಂದಲ, ಜಗಳವಾಗುತ್ತದೆ
  • ಸೇವಕರು ಸಹಾಯ ಮಾಡುತ್ತಾರೆ, ನಂಬಿಕೆ ಉಳಿಸಿಕೊಳ್ಳುತ್ತಾರೆ
  • ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಅವಕಾಶವಿದೆ
  • ಪ್ರತಿ ತಿಂಗಳಿಗೊಮ್ಮೆ ನಿಮ್ಮ ಜನ್ಮ ನಕ್ಷತ್ರ, ರಾಶಿದಂದು ತಲೆಗೆ ಎಣ್ಣೆ ಸ್ನಾನ ಮಾಡಿ ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ ಪ್ರಾರ್ಥನೆ ಮಾಡಿ

ಕುಂಭ

publive-image

  • ವರ್ಷದ ಆರಂಭದಲ್ಲಿ ಲಾಭ ಮತ್ತು ಶುಭಗಳಿಂದ ಪುಳಕಿತರಾಗುತ್ತೀರಿ
  • ಮೇಲಾಧಿಕಾರಿಗಳ ಕಿರುಕುಳ, ಹಿಂಸೆ ತಪ್ಪಿದಲ್ಲ ಅನುಭವಿಸಬೇಕಾಗುತ್ತದೆ
  • ಮಾನಸಿಕವಾದ ಸ್ತಿಮಿತತೆ ಇರುವುದಿಲ್ಲ
  • ವಿನಾಕಾರಣ ತಿರುಗಾಟ, ಒಂದು ಕೆಲಸಕ್ಕೆ ಹಲವು ಬಾರಿ ತಿರುಗಬೇಕಾದ ಪರಿಸ್ಥಿತಿ ಬರುತ್ತದೆ
  • ವಿರೋಧಿಗಳಿಂದ ಭೀತಿ ಹೆಚ್ಚಾಗಬಹುದು
  • ಶತ್ರುಗಳು, ಶತ್ರು ಕಾಟ ಹೆಚ್ಚಾಗುತ್ತದೆ
  • ಗುರು ಗ್ರಹ ಮಿಥುನ ರಾಶಿ ಪ್ರವೇಶ ಮಾಡಿದಾಗ ಸ್ವಲ್ಪ ಬದಲಾವಣೆ ಕಾಣುತ್ತೀರಿ
  • ಜೀವನೋತ್ಸಾಹ ಕಷ್ಟದಿಂದ ಪಾರಾಗಬಹುದು ಎಂಬ ಧೈರ್ಯ ನೀಡುತ್ತದೆ
  • ಶತ್ರುಗಳನ್ನ ಎದುರಿಸೋ ಧೈರ್ಯ, ಶಕ್ತಿ ಬರುತ್ತದೆ
  • ಕುಟುಂಬದ ವಾತಾವರಣ ನಿಧಾನವಾಗಿ ಸರಿ ಹೋಗುವ ಅನುಭವ ಆಗುತ್ತದೆ
  • ಶನಿ ಪ್ರಭಾವ, ಶನಿಯ ಸ್ಥಾನಪಲ್ಲಟ ಕುಟುಂಬದಲ್ಲಿ ಕಲಹ ಉಂಟು ಮಾಡುತ್ತದೆ
  • ಏಕನಕ್ಷತ್ರ - ಏಕರಾಶಿಯ ದಂಪತಿಗಳಲ್ಲಿ ವಿಚ್ಛೇದನದ ಭೀತಿ ಉಂಟಾಗುತ್ತದೆ
  • ಇಲ್ಲ ಸಲ್ಲದ ಅಪವಾದ, ರಾಜಕೀಯ ಹಿನ್ನಡೆ, ಅವಮಾನ, ವ್ಯವಹಾರಿಕ ನಷ್ಟ
  • ಸ್ವಯಂಕೃತ ಅಪರಾಧ, ಬೇರೆಯವರ ಮಾತಿಗೆ ಬೆಲೆ ಕೊಡದೆ ಇರುವುದು, ಅಹಂ ಭಾವ ದೂರು ಮಾಡಿಕೊಳ್ಳದೇ
  • ತೊಂದರೆಯನ್ನ ಅನುಭವಿಸುವ ಸ್ಥಿತಿ
  • ಪ್ರತೀ ಶನಿವಾರ ಸೂರ್ಯೋದಯಕ್ಕೆ ಸರಿಯಾಗಿ ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
  • ಹನುಮಾನ್ ಚಾಲೀಸಾ ಪಠಣೆ ಮಾಡಿ, ಆದಷ್ಟು ಕಪ್ಪು ಬಟ್ಟೆ, ಕೆಂಪು ಬಟ್ಟೆಯನ್ನ ಧರಿಸಬೇಡಿ

ಮೀನ 

publive-image

  • ಈ ವರ್ಷ ಮೇ 14ರಿಂದ ಅಕ್ಟೋಬರ್​ 18ರವರೆಗೆ ದೊಡ್ಡ ದೊಡ್ಡ ಸಮಸ್ಯೆಗಳನ್ನು ಅನುಭವಿಸುತ್ತೀರಿ
  • ಅಕ್ಟೋಬರ್​ 18ರಿಂದ ಡಿಸೆಂಬರ್​ 5ರವರೆಗೆ ಮತ್ತೆ ಹಳೆಯ ಸಮಸ್ಯೆಗಳೇ ಪುನರಾವರ್ತಿಯಾಗುತ್ತವೆ ಆದರೆ ಪರಿಹಾರ ಸಿಗುತ್ತದೆ
  • ಡಿಸೆಂಬರ್​ 5ರಿಂದ ವರ್ಷಪೂರ್ತಿ ಮತ್ತೆ ಸಮಸ್ಯೆಗಳು ಹೆಚ್ಚಾಗುತ್ತವೆ
  • ಜನ್ಮರಾಶಿಯಿಂದ 4ನೇ ಮನೆಯಲ್ಲಿ ಗುರು ಸಂಚಾರ ಅತಿಯಾದ ಕೋಪ, ತೊಂದರೆ ಕೊಡುತ್ತಾನೆ
  • ರಾಜಕಾರಣಿಗಳಿಗೆ ಸ್ಥಾನ ಭಯ ಕಾಡಬಹುದು
  • ಅಧಿಕಾರಿಗಳ ತಪ್ಪಿನಿಂದ ಸಮಸ್ಯೆ, ಅವಮಾನ ಎದುರಿಸುತ್ತೀರಿ
  • ಈ ವರ್ಷ ಒಂದು ರೀತಿಯ ಹೋರಾಟದ ಜೀವನ ನಿಮ್ಮದಾಗಿರುತ್ತದೆ
  • ಮಧ್ಯದಲ್ಲಿ ತಪ್ಪಿನ ಅರಿವಾಗುತ್ತದೆ ಆದರೆ ಅಹಂಭಾವದಿಂದ ತಿದ್ದಿಕೊಳ್ಳಲು ಮುಂದಾಗುವುದಿಲ್ಲ
  • ಸ್ತ್ರೀ ಸಂಬಂಧ ವಿಚಾರಗಳಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು
  • ವಾಹನದಿಂದ, ಮನೆಯಿಂದ ನಷ್ಟ, ಹಣ ಕಳೆದು ಕೊಳ್ಳಬಹುದು
  • ಜಾತಕ ಪರೀಕ್ಷೆಯ ಅಗತ್ಯತೆ ತುಂಬಾ ಇದ್ದು ಸರಿಯಾಗಿ ಜಾತಕ ಪರೀಕ್ಷೆ ಮಾಡಿಸಿ
  • ಮನೆಯಲ್ಲಿ ಹಿರಿಯರ ಕಾರ್ಯ ಸರಿಯಾಗಿ ಮಾಡಿ
  • ವಿಶೇಷವಾಗಿ ಗೋ ಸೇವೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

Advertisment