/newsfirstlive-kannada/media/post_attachments/wp-content/uploads/2024/05/Odisha.jpg)
21 ತಿಂಗಳ ಮಗುವೊಂದು ಅಂಗಾಗ ದಾನ ಮಾಡುವ ಮೂಲಕ ಎರಡು ಜೀವಗಳನ್ನು ಉಳಿಸಿದ ಘಟನೆ ಬೆಳಕಿಗೆ ಬಂದಿದೆ. ಆ ಮೂಲಕ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಒಡಿಶಾದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. 21 ತಿಂಗಳ ಅಂಬೆಗಾಲಿಡುವ ಮಗು ಮೆನಿಂಜೈಟಿಸ್​ನಿಂದ ಬಳಲುತ್ತಿತ್ತು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಮಗುವಿನ ಪೋಷಕರು ಕೊನೆಗೆ ಮಗುವಿನ ಅಂಗಾಂಗ ದಾನ ಮಾಡಿದ್ದಾರೆ.
ಮಗು ಅನಾರೋಗ್ಯದ ಜೊತೆಗೆ ಮೆದುಳು ಜ್ವರದಿಂದ ಬಳಲುತ್ತಿತ್ತು. ನಂತರ ಚಿಕಿತ್ಸೆ ವೇಳೆ ಸೆಫ್ಟಿಕ್​ ಶಾಕ್​ ಕೂಡ ತಗುಲಿತ್ತು. ಕೊನೆಗೆ ಮಗು ಉಸಿರುಚೆಲ್ಲಿತು. ನಂತರ ಪೋಷಕರ ಅನುಮತಿ ಮೇರೆಗೆ ವೈದ್ಯರು ರಾಜ್ಯ ಅಂಗ ಮತ್ತು ಅಂಗಾಂಗ ಕಸಿ ಸಂಸ್ಥೆಗೆ ಮಾಹಿತಿ ತಿಳಿಸಿದರು.
ಇದನ್ನೂ ಓದಿ: ಕತ್ತು, ಅಂಗಾಗಗಳನ್ನು ಕತ್ತರಿಸಿ ಭೀಕರ ಕೊಲೆ.. ತಾಳಿ ಕಟ್ಟಿದ ಪತ್ನಿಯನ್ನೇ ಕೊಂದ ಗಂಡ
ಮಗು ಯಕೃತ್​,ಹೃದಯ ಮತ್ತು ಮೂತ್ರಪಿಂಡಗಳನ್ನು ದಾನ ಮಾಡಿದೆ. ಹೊಂದಿಕೆಯಾಗುವ ಯಕೃತ್​, ಮೂತ್ರಪಿಂಡಗಳನ್ನು ಬೇರೆ ಮಕ್ಕಳಿಗೆ ಕಸಿ ಮಾಡಲಾಗಿದೆ. ಆದರೆ ಸೂಕ್ತವಾದವರು ಸಿಗದ ಕಾರಣ ಹೃದಯವನ್ನು ಕಸಿ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us