/newsfirstlive-kannada/media/post_attachments/wp-content/uploads/2025/05/marriage5.jpg)
ಲಕ್ನೋ: ಈಗಂತೂ ಒಂದು ಮದುವೆಯಾಗಿ ಸಂಸಾರ ಮಾಡೋದಕ್ಕೆ ಆಗದಿರೋ ಈ ಕಾಲದಲ್ಲಿ ಇಲ್ಲೊಬ್ಬ ಯುವತಿ ಬರೋಬ್ಬರಿ 12 ಮದುವೆಯಾಗಿ ಪೊಲೀಸರ ಅತಿಥಿಯಾಗಿದ್ದಾಳೆ. ಹೌದು, 'ಡಾಕು ದುಲ್ಲನ್' ಎಂದೇ ಕುಖ್ಯಾತರಾಗಿರುವ ಗುಲ್ಮಾನ ರಿಯಾಜ್ ಖಾನ್ನನ್ನು ಸದ್ಯ ಅಂಬೇಡ್ಕರ್ ನಗರದ ಪೊಲೀಸರು ಬಂಧಿಸಿದ್ದಾರೆ. ಗುಜರಾತ್‌ನಲ್ಲಿ ಕಾಜಲ್, ಹರಿಯಾಣದಲ್ಲಿ ಸೀಮಾ, ಬಿಹಾರದಲ್ಲಿ ನೇಹಾ ಮತ್ತು ಉತ್ತರ ಪ್ರದೇಶದಲ್ಲಿ ಸ್ವೀಟಿ ಎಂಬ ಹೆಸರು ಇಟ್ಟುಕೊಂಡು ಬರೋಬ್ಬರಿ 12 ಮಂದಿಗೆ ವಂಚಿಸಿದ್ದಾಳೆ ಈಕೆ. ಕೇವಲ 21ನೇ ವಯಸ್ಸಿನಲ್ಲಿ ಒಂದು ಡಜನ್ ಹುಡುಗರಿಗೆ ಮದುವೆಯಾಗಿ ಮೋಸ ಮಾಡಿದ್ದಾಳೆ.
ಇದನ್ನೂ ಓದಿ:‘ಲಕ್ಷ್ಮೀ ಪಾತ್ರಕ್ಕೆ ಆಡಿಷನ್ ಕೊಟ್ಟು ಕೀರ್ತಿಯಾಗಿ ಸೆಲೆಕ್ಟ್ ಆದೆ’.. ತನ್ವಿ ರಾವ್ ಸೀರಿಯಲ್ ರೋಚಕ ಜರ್ನಿ ಹೇಗಿತ್ತು?
ದುಡ್ಡಿನ ಆಸೆಗೆ ಬಿದ್ದು ಹುಡುಗರ ಜೊತೆಗೆ ಮದುವೆಯಾಗಿ ಚಿನ್ನಾಭರಣವನ್ನು ದೋಚಿ ಎಸ್ಕೇಪ್ ಆಗುತ್ತಿದ್ದಳು. ಈಕೆ ಎಂಟು ಜನರ ಗ್ಯಾಂಗ್ ಅನ್ನು ಕಟ್ಟಿಕೊಂಡು ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಬಂಧಿತರನ್ನು ಹರಿಯಾಣದ ಜಿಂದ್‌ನ ಮೋಹನ್‌ಲಾಲ್ (34), ಚೌನ್‌ಪುರದ ರತನ್ ಕುಮಾರ್ ಸರೋಜ್ (32), ಚೌನ್‌ಪುರದ ರಂಜನ್ ಅಲಿಯಾಸ್ ಆಶು ಗೌತಮ್ (22), ಅಂಬೇಡ್ಕರ್ ನಗರದ ರಾಹುಲ್ ರಾಜ್ (30), ಅಂಬೇಡ್ಕರ್ ನಗರದ ಸನ್ನೋ ಅಲಿಯಾಸ್ ಸುನೀತಾ (36), ಅಂಬೇಡ್ಕರ್ ನಗರದ ಪೂನಮ್ (33), ಚೌನ್‌ಪುರದ ಮಂಜು ಮಾಲಿ (29) ಮತ್ತು ಚೌನ್‌ಪುರದ 'ಸೀಮಾ' ಅವರ ಸಂಬಂಧಿಕರಂತೆ ನಟಿಸಿದ ಅಂಬೇಡ್ಕರ್ ನಗರದ ರುಖ್ಯರ್ (21) ಎಂದು ಗುರುತಿಸಲಾಗಿದೆ.
ಈ ಗ್ಯಾಂಗ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಹೇಗೆ?
ಈ ಬಗ್ಗೆ ಮಾತಾಡಿದ ಅಂಬೇಡ್ಕರ್ ನಗರ ಎಸ್ಪಿ ಕೇಶವ್ ಕುಮಾರ್, ಡಾಕು ದುಲ್ಲನ್ ನಿಜವಾದ ಹೆಸರು ಗುಲ್ತಾನಾ ರಿಯಾಜ್ ಖಾನ್. ಈಕೆ ಯುಪಿಯ ಚೌನ್‌ಪುರದ ದರ್ಜಿ ರಿಯಾಜ್ ಖಾನ್ ಜೊತೆಗೆ ಮದುವೆಯಾಗಿದ್ದಳು. ಹರಿಯಾಣದ ರೋಕ್ಟಕ್ ನಿವಾಸಿ ಸೋನು ಅವರನ್ನು ವಂಚಿಸಿದ ಗ್ಯಾಂಗ್ ಮದುವೆಗೆ 80,000 ರೂ.ಗಳಿಗೆ ಬೇಡಿಕೆ ಇಟ್ಟಿತು. ಮದುವೆಯಾಗದ ಕುಟುಂಬವನ್ನೇ ಈ ಗ್ಯಾಂಗ್ ಟಾರ್ಗೆಟ್ ಮಾಡುತ್ತಿತ್ತು. ಹೀಗಾಗಿ ಅಂತಹ ಕುಟುಂಬವನ್ನು ಸಂಪರ್ಕಿಸಿ ಮದುವೆ ಬಗ್ಗೆ ಮಾತಾಡುತ್ತಿದ್ದರು. ಇದಾದ ಬಳಿಕ ತಮ್ಮ ಪ್ಲಾನ್ನಂತೆ ಮದುವೆ ದಿನ ಈ ಗ್ಯಾಂಗ್ ವಧುವನ್ನು ಅಪಹರಿಸೋ ನಾಟಕ ಆಡುತ್ತಾರೆ.
ಹೀಗೆ ವಧು ಕಿಡ್ನಾಪ್ ಆದ ಕೂಡಲೇ ವರ ಸೋನು ಯುಪಿ ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಆಗ ನಾವು ಎಲ್ಲಾ ರಸ್ತೆಗಳನ್ನು ನಿರ್ಬಂಧಿಸಿ ಎಚ್ಚರಿಕೆ ನೀಡುತ್ತೇವೆ. ಇದಾದ ಬಳಿಕ ಓರ್ವ ವ್ಯಕ್ತಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳನ್ನು ಬಂಧಿಸಲು ಸಹಾಯ ಮಾಡಿದನು. ಬಂಧಿತ ಮಹಿಳೆ ನಕಲಿ ಗುರುತಿನ ದಾಖಲೆಗಳನ್ನು ನೀಡಿದ್ದಾಳೆ. ವಂಚನೆ, ಕ್ರಿಮಿನಲ್ ಪಿತೂರಿ ಮತ್ತು ಪೋರ್ಜರಿ ಸಂಬಂಧಿಸಿದ ಬಿಎನ್‌ಎಸ್‌ನ ವಿವಿಧ ವಿಭಾಗಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸದ್ಯ ಬಂಧಿತ ಆರೋಪಿಗಳಿಂದ 72,000 ರೂ. ನಗದು, ಒಂದು ಮೋಟಾರ್ ಸೈಕಲ್, ಒಂದು ಚಿನ್ನದ ಮಂಗಳಸೂತ್ರ, 11 ಮೊಬೈಲ್ ಫೋನ್‌ಗಳು ಮತ್ತು ಮೂರು ನಕಲಿ ಆಧಾರ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ