/newsfirstlive-kannada/media/post_attachments/wp-content/uploads/2025/06/marriage.jpg)
ಚಂಡೀಗಢ: 21 ವರ್ಷದ ಯುವಕನೊಬ್ಬ 65 ವರ್ಷದ ಅಜ್ಜಿ ಸುಲ್ತಾನಾ ಕಟೂನ್ ಜೊತೆ ಮದುವೆಯಾಗಿರೋ ವಿಲಕ್ಷಣ ಘಟನೆ ನಡೆದಿದೆ. ಹೌದು, ನಂಬಲು ಅಸಾಧ್ಯ ಎನಿಸಿದರೂ ಇದು ಸತ್ಯ. ಹರಿಯಾಣದಲ್ಲಿ 21 ವರ್ಷದ ಮೊಹಮ್ಮದ್ ಇರ್ಫಾನ್ ಆತನ ಅಜ್ಜಿ 65 ವರ್ಷದ ಸುಲ್ತಾನಾ ಖತೂನ್ ಅವರನ್ನು ಮದುವೆಯಾಗಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಮೊಹಮ್ಮದ್ ಇರ್ಪಾನ್ ತನ್ನ ಸ್ವಂತ ಅಜ್ಜಿಯನ್ನು ಮದುವೆಯಾಗಿದ್ದಾನೆ.
ಇದನ್ನೂ ಓದಿ:ಅಂತಿಂಥ ಹೆಣ್ಣು ಇವಳಲ್ಲ..! ರೈಲು ಹಳಿ ಮೇಲೆ ಕಾರು ಓಡಿಸಿ ದಿಗಿಲು ಹುಟ್ಟಿಸಿದ ಲೇಡಿ -VIDEO
ಪತಿ ಸಾವನ್ನಪ್ಪಿದ ಬಳಿಕ ಜೀವನದಲ್ಲಿ ಸುಲ್ತಾನಾ ಕಟೂನ್ ಒಂಟಿಯಾಗಿದ್ದರು. ಈ ವೇಳೆ ಮೊಹಮ್ಮದ್ ಇರ್ಪಾನ್ ಅಜ್ಜಿ ಸುಲ್ತಾನಾ ಕಟೂನ್ ಜೊತೆ ಇದ್ದು ಅವರನ್ನು ಕೇರ್ ಮಾಡುತ್ತಿದ್ದರು. ಇದೇ ಬಾಂಧವ್ಯ ಕೊನೆಗೆ ಸದೃಢವಾಗಿ ಮದುವೆಯಾಗುವ ಮಟ್ಟಕ್ಕೆ ತಂದು ನಿಲ್ಲಿಸಿದೆ. ಇನ್ನೂ, ಈ ಇಬ್ಬರ ಮದುವೆಗೆ ಸಮಾಜದಲ್ಲಿ ಜನರ ವಿರೋಧ ವ್ಯಕ್ತಪಡಿಸಿದ್ದಾರೆ. ಸಮಾಜದಲ್ಲಿ ಇದಕ್ಕೆ ಅವಕಾಶವಿಲ್ಲ ಎಂದ ಸಾರ್ವಜನಿಕರ ವಿರೋಧದ ಮಧ್ಯೆಯೂ ಈ ಇಬ್ಬರು ಮದುವೆಯಾಗಿದ್ದಾರೆ.
ಇಂತಹ ಅಸಾಮಾನ್ಯ ವಿವಾಹಗಳು ಈ ಹಿಂದೆಯೂ ಸುದ್ದಿಯಲ್ಲಿವೆ. 2018ರಲ್ಲಿ, 27 ವರ್ಷದ ಹರಿಯಾಣದ ವ್ಯಕ್ತಿಯೊಬ್ಬ ಫೇಸ್‌ಬುಕ್‌ನಲ್ಲಿ ಪರಿಚಯವಾದ 65 ವರ್ಷದ ಅಮೇರಿಕನ್ ಮಹಿಳೆಯನ್ನು ವಿವಾಹವಾದರು. ಈ ಇಬ್ಬರ ಮದುವೆ ಬಗ್ಗೆಯೂ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಆದ್ರೂ ಕೂಡ ಪ್ರವೀಣ್, ಮಹಿಳೆ ಕರೆನ್ನನ್ನು ಭೇಟಿಯಾಗಲು ಯುಎಸ್ ವೀಸಾಕ್ಕೆ ಅರ್ಜಿ ಸಲ್ಲಿಸುವುದರೊಂದಿಗೆ ತಮ್ಮ ಸಂಬಂಧವನ್ನು ಮುಂದುವರಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ